ಕನ್ನಡಪ್ರಭ ವಾರ್ತೆ ಕಲಬುರಗಿ
ಕರ್ನಾಟಕ ಕೇಂದ್ರೀಯ ವಿವಿ ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗ ಮತ್ತು ವಾಣಿಜ್ಯ ವಿಭಾಗವು ಧಾರವಾಡದ ಬಹುಶಿಸ್ತೀಯ ಸಂಶೋಧನಾ ಕೇಂದ್ರದ (ಸಿಎಂಡಿಆರ್) ಸಹಯೋಗದೊಂದಿಗೆ ಆಯೋಜಿಸಿದ್ದ “ಜಿಎಸ್‍ಟಿ: ಜನರಿಗೆ, ವ್ಯವಹಾರಕ್ಕೆ ಮತ್ತು ಸರ್ಕಾರಕ್ಕೆ ಪ್ರಯೋಜನಗಳು ಮತ್ತು ವಿಕಸಿತ ಭಾರತ-2047ರ ಕಡೆಗೆ ಭಾರತದ ಪ್ರಯಾಣ” ಸಮ್ಮೇಳನದಲ್ಲಿ ಮಾತನಾಡಿದರು.
ಜಿಎಸ್‍ಟಿ ಕ್ಯಾಸ್ಕೇಡಿಂಗ್ ತೆರಿಗೆಗಳನ್ನು ಕಡಿಮೆ ಮಾಡಿದೆ, ಇದು ಬೆಲೆಗಳಲ್ಲಿ ಒಟ್ಟಾರೆ ಕಡಿತಕ್ಕೆ ಕಾರಣವಾಗಿದ್ದು, ಇದು ಒಂದೇ ಸಾಮಾನ್ಯ ರಾಷ್ಟ್ರೀಯ ಮಾರುಕಟ್ಟೆಯನ್ನು ಸೃಷ್ಟಿಸಿದೆ, ಇದು ಸಣ್ಣ ತೆರಿಗೆದಾರರಿಗೆ ಪ್ರಯೋಜನವನ್ನು ನೀಡಿದೆ, ಇದು ಮಾನವ ರಹಿತ ಎಲೆಕ್ಟ್ರಾನಿಕ್ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಿದೆ, ಹಾಗೇ ತೆರಿಗೆ ಆಡಳಿತವನ್ನು ಸರಳಗೊಳಿಸಿದೆ, ತೆರಿಗೆಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ ಮತ್ತು ಇದು ದೇಶೀಯ ಕೈಗಾರಿಕೆಗಳನ್ನು ರಕ್ಷಿಸಿದೆ ಎಂದು ಹೇಳಿದರು.ಕುಲಸಚಿವರಾದ ಆರ್ ಆರ್ ಬಿರದಾರ ಸಮ್ಮೇಳನವನ್ನು ಉದ್ಘಾಟಿಸಿ, ಒಂದು ರಾಷ್ಟ್ರ, ಒಂದು ತೆರಿಗೆ, ಒಂದು ಮಾರುಕಟ್ಟೆ ಸ್ಥಾಪಿಸುವ ಉದ್ದೇಶದಿಂದ 2017ರಿಂದ ಕೇಂದ್ರ ಮತ್ತು ರಾಜ್ಯಗಳ 23 ಪರೋಕ್ಷ ತೆರಿಗೆಗಳನ್ನು ಒಗ್ಗೂಡಿಸಿ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ತರಲಾಯಿತು ಎಂದರು.
ಸಮ್ಮೇಳನದ ನಿರ್ದೇಶಕ ಡಾ. ಬಸವರಾಜ ಎಂ.ಎಸ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಜಗತ್ತಿನಲ್ಲಿ 160ಕ್ಕೂ ಹೆಚ್ಚು ದೇಶಗಳು ಜಿಎಸ್‍ಟಿಯನ್ನು ಜಾರಿಗೆ ತಂದಿವೆ. 1950ರಲ್ಲಿ ಇದನ್ನು ಜಾರಿಗೆ ತಂದ ಮೊದಲ ದೇಶ ಫ್ರಾನ್ಸ್. ಭಾರತವು ರಾಜ್ಯಗಳ ಒಕ್ಕೂಟವಾಗಿರುವುದರಿಂದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸರ್ಕಾರವನ್ನು ಅವುಗಳ ತೆರಿಗೆ ಅಧಿಕಾರಗಳ ಬಗ್ಗೆ ಮನವರಿಕೆ ಮಾಡಿಕೊಡುವುದು ಸವಾಲಿನ ಕೆಲಸವಾಗಿತ್ತು. ಆದ್ದರಿಂದ ಜಿಎಸ್‍ಟಿಯನ್ನು ಜಾರಿಗೆ ತರಲು ಹತ್ತು ವರ್ಷಗಳು ಬೇಕಾಯಿತು ಎಂದರು.
ಡಾ. ಗಣಪತಿ ಬಿ ಸಿನ್ನೂರ್, ಡಾ.ಎಂ.ಜೊಹೇರ್, ಡಾ.ಎಸ್.ಲಿಂಗಮೂರ್ತಿ, ಡಾ.ಶಿವಕುಮಾರ್ ಬೆಳ್ಳಿ, ಡಾ.ಸುಜಾತ್ ಎಸ್.ಕೆ, ಡಾ.ಜಿ.ಮಹೇಂದ್ರ, ಡಾ.ಶೈಲಜಾ ಕೊನೆಕ್, ಶರಣಬಸವ ವಿಶ್ವವಿದ್ಯಾಲಯ ಮತ್ತು ಸಿಯುಕೆಯ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.