ಕನ್ನಡಪ್ರಭ ವಾರ್ತೆ ಶಿವಮೊಗ್ಗ
ನಗರದ ಗೋಪಾಲಗೌಡ ಬಡಾವಣೆಯಲ್ಲಿರುವ ಜಿ.ಆರ್.ಎಂಟರ್ ಪ್ರೈಸಸ್‌ನಲ್ಲಿ ಶನಿವಾರ ಶಿಕ್ಷಕರ ದಿನಾಚರಣೆ ಅಂಗವಾಗಿ ಕನ್ನಡಪ್ರಭ ದಿನ ಪತ್ರಿಕೆ ಮತ್ತು ವಿ -ಫೈವ್ ಹೋಂ ಅಪ್ಲೈಯನ್ಸಸ್ (V Five Home Appliances) ಜಂಟಿಯಾಗಿ ರೋಟರಿ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ಒಬ್ಬ ಆರೋಗ್ಯವಂತ ವ್ಯಕ್ತಿ ವರ್ಷಕ್ಕೆ 4 ಬಾರಿ ರಕ್ತದಾನ ಮಾಡಬಹುದು. ರಕ್ತದಾನ ಎಂಬುದು ಸನ್ನಡತೆಯ ಸಂಕೇತವಾಗಿದೆ ಎಂದರು.
18 ರಿಂದ 60 ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ನಮ್ಮ ದೇಶದಲ್ಲಿ ರಕ್ತ ಸಂಚಲನ ವೃದ್ಧಿಗೊಂಡು ಹೊಸ ಚೈತನ್ಯ ಬರುತ್ತದೆ. ರಕ್ತದಾನದಿಂದ ದೇಹದಲ್ಲಿ ಯಾವುದೇ ರೋಗವಿದ್ದರೂ ಅದನ್ನು ಆರಂಭದಲ್ಲೇ ಪತ್ತೆ ಹಚ್ಚಲು ಸಹಕಾರಿಯಾಗುತ್ತದೆ.100 ಬಾರಿ ರಕ್ತದಾನ ಮಾಡಿದ ಅನೇಕರು ನಮ್ಮ ಮುಂದೆಯೇ ಇದ್ದಾರೆ ಎಂದು ಹೇಳಿದರು.ಸಮಾಜದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದಂತೆ ಕೆಲಸ ಮಾಡುತ್ತಿರುವ ನಾಲ್ಕನೇ ಅಂಗವಾಗಿ ಗುರುತಿಸಿಕೊಂಡಿರುವ ಮಾಧ್ಯಮ ರಂಗ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಕಾಯಕ ಮಾಡುತ್ತಿದೆ. ಅಂತಹ ಪತ್ರಿಕಾ ರಂಗದಲ್ಲಿ ಮುಂಚೂಣಿಯಲ್ಲಿರುವ ಕನ್ನಡಪ್ರಭ ದಿನಪತ್ರಿಕೆ ಹಾಗೂ ಜಿ.ಆರ್.ಜಿ.ಆರ್.ಎಂಟರ್‌ಪ್ರೈಸಸ್‌ನ ಪಾಲುದಾರರಾದ ಗೋಪಾಲ್ ಯಡಗೆರೆ ಹಾಗೂ ಅವರ ಪತ್ನಿ ಲತಾ ಅವರು ಈ ಶಿಬಿರಕ್ಕೆ ಹೆಚ್ಚಿನ ಸಹಕಾರ ನೀಡಿದ್ದಾರೆ. ಅಂಬೇಡ್ಕರ್ ಹೇಳಿದಂತೆ ನಾವು ಜೀವನದಲ್ಲಿ ಹೇಗಿದ್ದೇವೆ ಎನ್ನುವುದಕ್ಕಿಂತ ನಮ್ಮಿಂದ ಬೇರೆಯವರು ಹೇಗಿದ್ದಾರೆ ಎಂಬುದು ಮುಖ್ಯ ಎಂಬಂತೆ ಅನೇಕರಿಗೆ ಇಲ್ಲಿ ಕೆಲಸ ಕೊಟ್ಟು ಅವರ ಜೀವನಕ್ಕೆ ನೆರವಾಗುತ್ತಿರುವ ಅವರ ಕಾಯಕ ನಿಜಕ್ಕೂ ಶ್ಲಾಘನೀಯ ಎಂದರು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಜಿ.ಆರ್.ಎಂಟರ್‌ಪ್ರೈಸಸ್ ನ ಪಾಲುದಾರರಾದ ಲತಾ ಯಡಗೆರೆ, ಗುರುದತ್ ಹೆಬ್ಬಾರ್, ವೈಷ್ಣವಿ ಯಡಗರೆ, ಅನನ್ಯ ಯಡಗೆರೆ, ಸುರೇಶ್ ಉಮರಾಣಿ, ಕನ್ನಡಪ್ರಭ ಪತ್ರಿಕೆ ಎಜಿಎಂ ಸಿ.ಕಾರ್ತಿಕ್, ಸುವರ್ಣ ನ್ಯೂಸ್ ಜಿಲ್ಲಾ ವರದಿಗಾರ ರಾಜೇಶ್ ಕಾಮತ್, ರೋಟರಿ ರಕ್ತ ನಿಧಿಯ ಡಾ.ಅಖಿಲೇಶ್, ಸಿಬ್ಬಂದಿ ಸುಮಾ, ಸವಿತ, ರವಿ, ರಾಮ್ , ಶಾಂತ, ಪ್ರಶಾಂತ್ ಮತ್ತಿತರರು ಇದ್ದರು.