ಕನ್ನಡಪ್ರಭ ವಾರ್ತೆ ಮಾಗಡಿ
ಹೇಮಾವತಿ ಯೋಜನೆಯಲ್ಲಿ ಮಾಜಿ ಸಂಸದರ ಕೊಡುಗೆ ಅಪಾರ:
ಮಾಜಿ ಸಂಸದರಾದ ಡಿ.ಕೆ.ಸುರೇಶ್ ರವರ ಕೊಡುಗೆ ಹೇಮಾವತಿ ವಿಚಾರದಲ್ಲಿ ಸಾಕಷ್ಟು ಇದ್ದು ಶ್ರೀರಂಗ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ಹೆಚ್.ಎಂ. ರೇವಣ್ಣನವರ ಜೊತೆ ಸೇರಿ ಅಂದಿನ ನೀರಾವರಿ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಮನವೊಲಿಸಿ ಸಿಎಂ ಸಿದ್ದರಾಮಯ್ಯನವರ ಅಧಿಕಾರದ ಅವಧಿಯಲ್ಲಿ ಮಾಗಡಿಯಲ್ಲಿ ಹೇಮಾವತಿ ಶ್ರೀರಂಗ ಏತ ನೀರಾವರಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದರು ಎಂದರು.ಅಭಿವೃದ್ಧಿ ವಿಚಾರವಾಗಿ ವಿರೋಧ ಬೇಡ:
ಮಾಜಿ ಶಾಸಕರಾದ ಎ.ಮಂಜುನಾಥ್ ಅವರು ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ವಿರುದ್ಧ ಪದೇಪದೇ ಜನಗಳಲ್ಲಿ ತಪ್ಪು ಸಂದೇಶ ಬರುವ ರೀತಿ ಸುದ್ದಿಗೊಷ್ಠಿ ನಡೆಸಿ ಮಾತನಾಡುತ್ತಿದ್ದಾರೆ. ತಾವು ಐದು ವರ್ಷದ ಅವಧಿಯಲ್ಲಿ ಯಾವ ಕಾಮಗಾರಿ ಮಾಡಿದ್ದಾರೆ ಎಂಬುದು ಜನತೆಗೆ ಗೊತ್ತಿದೆ. ಶಾಸಕ ಬಾಲಕೃಷ್ಣರವರು ಎರಡು ವರ್ಷದ ಅವಧಿಯಲ್ಲಿ ಮಾಗಡಿ ಪಟ್ಟಣ, ಕುದೂರು, ತಿಪ್ಪಸಂದ್ರ ಹೋಬಳಿಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದು ಇನ್ನೂ ಒಂದು ವರ್ಷದ ಅವಧಿಯಲ್ಲಿ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡು ಮಾಗಡಿ ಪ್ರಗತಿ ಪತದಥ ಸಾಗಲಿದ್ದು ಈ ವಿಚಾರವಾಗಿ ಪ್ರತಿಯೊಂದು ವಿಷಯಕ್ಕೂ ಜನಗಳಲ್ಲಿ ತಪ್ಪು ಸಂದೇಶ ಬರುವ ರೀತಿ ಮಾಜಿ ಶಾಸಕರು ನಡೆದುಕೊಳ್ಳುತ್ತಿದ್ದು, ಈ ತಪ್ಪಿನಿಂದಲೇ ನಿಮ್ಮ ಪಕ್ಷದ ಪ್ರಮುಖ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರುವಂತಕ್ಕೆ ಪರಿಸ್ಥಿತಿ ನಿರ್ಮಾಣವಾಗಿದೆ. ತಾವು 52 ಸಾವಿರ ಮತದಿಂದ ಗೆದ್ದಿದ್ದರೂ ಕೂಡ ಕಳೆದ ಚುನಾವಣೆಯಲ್ಲಿ 12 ಸಾವಿರ ಮತಗಳ ಅಂತರದಿಂದ ತಮ್ಮನ್ನು ಸೋಲಿಸಿದ್ದಾರೆ. ಇದನ್ನು ಅರಿತುಕೊಂಡು ಅಭಿವೃದ್ಧಿಗೆ ಸಹಕಾರ ಕೊಡುವ ಕೆಲಸ ಮಾಡಬೇಕು. ಅದನ್ನು ಬಿಟ್ಟು ಶಾಸಕರ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಕೆಂಚೇಗೌಡ ಬೇಸರ ವ್ಯಕ್ತಪಡಿಸಿದರು.ಸಂಸದರು ಎಲ್ಲಿ ಹೋಗಿದ್ದಾರೆ:
ಸಂಸದರಾದ ಡಾ.ಸಿ.ಎಂ. ಮಂಜುನಾಥ್ ರವರು ಮಾಗಡಿ ಕ್ಷೇತ್ರವನ್ನು ಮರೆತ್ತಿದ್ದಾರೆ? ಮಾಜಿ ಶಾಸಕ ಎ.ಮಂಜುನಾಥ್ ರವರು ಲೋಕಸಭೆ ಚುನಾವಣೆ ನಂತರ ಸಂಸದರ ಜೊತೆ ಕಾಣಿಸಿಕೊಂಡೆ ಇಲ್ಲ, ಮಾಗಡಿಯನ್ನು ಸಂಸದರು ಮರೆತಿದ್ದು ಹೇಮಾವತಿ ಹೋರಾಟ ವಿಚಾರವಾಗಿ ಅವರನ್ನು ಕರೆಸಿ ಜನಗಳಿಗೆ ಸಂದೇಶ ಕೊಡುವ ಕೆಲಸ ಮಾಡಬೇಕು. ಹೇಮಾವತಿ ಯೋಜನೆ ಮಾಗಡಿಗೆ ಬಂದರೆ ತಾಲೂಕಿನ ರೈತರಿಗೆ ಸಾಕಷ್ಟು ಅನುಕೂಲವಾಗಲಿದ್ದು ಸಂಸದ ಡಾ. ಸಿ.ಎನ್.ಮಂಜುನಾಥ್ ರವರನ್ನು ಈ ಹೋರಾಟಕ್ಕೆ ಮಾಜಿ ಶಾಸಕರು ಕಲಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದರು.ಇದೇ ವೇಳೆ ಕಾಂಗ್ರೆಸ್ ಮುಖಂಡರಾದ ಚಿಗಲೂರು ಗಂಗಾಧರ್, ಬಿ.ಎಸ್.ಕುಮಾರ್, ಲೋಕೇಶ್, ಉಮೇಶ್, ಶಿವರುದ್ರಸ್ವಾಮಿ, ಪ್ರಕಾಶ್, ಸೂರಿ, ನಾರಾಯಣ್, ಸತೀಶ್, ಉಮೇಶ್, ವಿಶ್ವನಾಥ್, ದೇವರಾಜ್, ವೆಂಕಟೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.