ಪ್ರತಿಯೊಬ್ಬ ವಿದ್ಯಾರ್ಥಿಯು ಓದನ್ನು ಪ್ರೀತಿಸಬೇಕು

KannadaprabhaNewsNetwork |  
Published : May 02, 2025, 01:36 AM IST
59 | Kannada Prabha

ಸಾರಾಂಶ

ನನಗೆ ನನ್ನ ತಂದೆ ತಾಯಿ ಸ್ಫೂರ್ತಿಯಾಗಿದ್ದು, ಏನಾದರೂ ಸಾಧಿಸಬೇಕೆಂಬ ಛಲ ಮತ್ತು ಹಠ ಹುಟ್ಟಲು ನನಗೆ ಸಲಹೆ ನೀಡಿದ ನನ್ನ ಗುರುಗಳಾದ ಆಲ್ಫಾ ಕಾಲೇಜಿನ ಕಾರ್ಯದರ್ಶಿ ಸುಬ್ರಹ್ಮಣ್ಯ ಅವರೇ ಕಾರಣ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಓದನ್ನು ಪ್ರೀತಿಸದಿದ್ದರೆ ಅದು ಹೊರೆಯಾಗಿ ಬಾರ ಎನಿಸಲಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ಓದನ್ನು ಪ್ರೀತಿಸಬೇಕು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಸಿಇಒ ಡಿ.ಬಿ. ನಟೇಶ್ ಸಲಹೆ ನೀಡಿದರು.

ಪಟ್ಟಣದ ಆಲ್ಪಾ ಕಾಲೇಜಿನ ಸಭಾಂಗಣದಲ್ಲಿ ಯುಪಿಎಸ್.ಸಿ ಪರೀಕ್ಷೆಯಲ್ಲಿ 263ನೇ ರ್ಯಾಂಕ್ ಪಡೆದ ಸಾಲಿಗ್ರಾಮ ತಾಲೂಕಿನ ಎ.ಸಿ. ಪ್ರೀತಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಅವರು ಮಾತನಾಡಿದರು.

ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು, ಗುರಿ ಇಟ್ಟುಕೊಂಡು ವಿದ್ಯೆಯ ಕಡೆ ಗಮನಹರಿಸಿದರೆ ಯಾವುದು ಕಷ್ಟ ಸಾಧ್ಯವಲ್ಲ ಎಂದರು.

ನನಗೆ ನನ್ನ ತಂದೆ ತಾಯಿ ಸ್ಫೂರ್ತಿಯಾಗಿದ್ದರು

ಎ.ಸಿ. ಪ್ರೀತಿ ಮಾತನಾಡಿ, ನನಗೆ ನನ್ನ ತಂದೆ ತಾಯಿ ಸ್ಫೂರ್ತಿಯಾಗಿದ್ದು, ಏನಾದರೂ ಸಾಧಿಸಬೇಕೆಂಬ ಛಲ ಮತ್ತು ಹಠ ಹುಟ್ಟಲು ನನಗೆ ಸಲಹೆ ನೀಡಿದ ನನ್ನ ಗುರುಗಳಾದ ಆಲ್ಫಾ ಕಾಲೇಜಿನ ಕಾರ್ಯದರ್ಶಿ ಸುಬ್ರಹ್ಮಣ್ಯ ಅವರೇ ಕಾರಣ ಎಂದು ನೆನೆಸಿಕೊಂಡರು.

ಉನ್ನತ ವಿದ್ಯಾಭ್ಯಾಸಕ್ಕೆ ಭಾಷೆ ಅಡ್ಡಿಯಿಲ್ಲ, ಹಾಗಾಗಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ನನ್ನಂತೆ ಎಷ್ಟೋ ಮಂದಿ ಐಎಎಸ್ ಹಾಗೂ ಐಪಿಎಸ್ ಜತೆಗೆ ಬೇರೆ ಬೇರೆ ವಿಭಾಗಗಳಲ್ಲಿ ಉನ್ನತ ಸ್ಥಾನ ಪಡೆದಿದ್ದ ಆಲ್ಫಾ ಕಾಲೇಜಿನ ಮುಖ್ಯಸ್ಥರು ಅನುಭವವಿರುವ ತರಬೇತಿದಾರರನ್ನು ಕರೆಯಿಸಿ ತರಬೇತಿ ಕೊಡಿಸಬೇಕೆಂದರು.

ವಿದ್ಯಾರ್ಥಿಗಳಿಗೂ ಪಿಯುಸಿಯ ನಂತರ ಬೇರೆ ಕೋರ್ಸ್‌ ಗಳಿಗೆ ಹೋಗಲು ಮಾಹಿತಿ ಮತ್ತು ಬೋಧನೆಯನ್ನು ಮಾಡಿಸಿ ಎಂದು ತಿಳಿಸಿದರು. ಆಲ್ಪಾ ಕಾಲೇಜಿನ ಕಾರ್ಯದರ್ಶಿ ವೈ.ಎಸ್. ಸುಬ್ರಹ್ಮಣ್ಯ, ವಕೀಲ ಸಿ.ಡಿ. ಮಹದೇವಪ್ಪ ಮಾತನಾಡಿದರು.

ಪುರಸಭಾ ಸದಸ್ಯ ಕೆ.ಎಲ್. ಜಗದೀಶ್, ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಎ.ಸಿ. ಪ್ರೀತಿಯವರ ತಾಯಿ ನೇತ್ರಾವತಿ ತಂದೆ ಚನ್ನಬಸಪ್ಪ, ಶಿಕ್ಷಕಿ ರಶ್ಮಿ, ಮುಖಂಡ ಚಪ್ಪರದಹಳ್ಳಿ ಗೋವಿಂದೇಗೌಡ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ