ಬದುಕಿಗೆ ನಾವೀನ್ಯ ನೀಡುವ ಕಲೆಗೆ ಮಾತ್ರ ಉಳಿವು: ವನರಾಗ ಶರ್ಮಾ

KannadaprabhaNewsNetwork |  
Published : Nov 08, 2024, 12:42 AM IST
ವಜ್ರಳ್ಳಿಯ ಕಪ್ಪೆಮಠದ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ತಾಳಮದ್ದಲೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ವಜ್ರಳ್ಳಿಯ ಕಪ್ಪೆಮಠದ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಅಂಗದ ಸಂಧಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

ಯಲ್ಲಾಪುರ: ಬದುಕಿಗೆ ನಾವೀನ್ಯತೆ ನೀಡುವ ಕಲೆ ಮಾತ್ರ ಜೀವಂತವಾಗಿ ಉಳಿಯಬಲ್ಲುದು. ಯಕ್ಷಗಾನ ಒಂದು ಪ್ರಭಾವಿ ಕಲೆಯಾಗಿದ್ದು, ಅದರ ಆಳ ಅರಿಯುವುದೆಂದರೆ ಚಿಂತನೆಗಳನ್ನು ಅರೆದು ಕುಡಿದಂತೆ. ಧನಾತ್ಮಕವಾಗಿ ಯೋಚಿಸುವ ದಿಕ್ಕನ್ನು ಯಕ್ಷಗಾನ ತಾಳಮದ್ದಳೆ ತೋರಿಸಬಲ್ಲದು. ಕರ್ನಾಟಕ ಕಲಾ ಸನ್ನಿಧಿ ಸಂಸ್ಥೆಯು ಸಾಂಸ್ಕೃತಿಕ ಕ್ಷೇತ್ರಕ್ಕೆ ಇಂತಹ ಮಹತ್ವದ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದು ಸಾಹಿತಿ ವನರಾಗ ಶರ್ಮಾ ತಿಳಿಸಿದರು.ನ. ೫ರಂದು ವಜ್ರಳ್ಳಿಯ ಕಪ್ಪೆಮಠದ ಗೋಪಾಲಕೃಷ್ಣ ದೇವಸ್ಥಾನದ ಸಭಾಂಗಣದಲ್ಲಿ ಕರ್ನಾಟಕ ಕಲಾ ಸನ್ನಿಧಿ ಸಂಸ್ಥೆಯು ಸ್ಥಳೀಯವಾಗಿ ಹಮ್ಮಿಕೊಂಡಿದ್ದ ಅಂಗದ ಸಂಧಾನ ತಾಳಮದ್ದಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಾರಾಯಣ ಗಾಂವ್ಕರ ಶೆಳೆಮನೆ ಅಧ್ಯಕ್ಷತೆ ವಹಿಸಿದ್ದರು.ಗ್ರಾಪಂ ಅಧ್ಯಕ್ಷ ಭಗೀರಥ ನಾಯ್ಕ, ಕರ್ನಾಟಕ ಕಲಾ ಸನ್ನಿಧಿ ಸಂಸ್ಥೆಯ ದಿನೇಶ ಭಟ್ಟ ಅಬ್ಬಿ ತೋಟ, ಶ್ರೀಧರ ಅಣಲಗಾರ, ದಿನೇಶ ಗೌಡ ಉಪಸ್ಥಿತರಿದ್ದರು. ಶಿಕ್ಷಕ ರವೀಂದ್ರ ಗಾಂವ್ಕರ ಸ್ವಾಗತಿಸಿ, ನಿರ್ವಹಿಸಿದರು. ಶ್ರೀಧರ ವೈದಿಕ ತಾಳಮದ್ದಳೆಯ ಕಲಾವಿದರನ್ನು ಪರಿಚಯಿಸಿದರು. ಸಂಘಟಕಕರ ಪರವಾಗಿ ಎನ್.ಟಿ. ಗಾಂವ್ಕರ ಹಾಲೆಮನೆ ವಂದಿಸಿದರು.ನಂತರ ನಡೆದ ಅಂಗದ ಸಂಧಾನ ತಾಳಮದ್ದಳೆಯ ಹಿಮ್ಮೇಳದಲ್ಲಿ ದಿನೇಶ ಅಬ್ಬಿತೋಟ(ಭಾಗವತ), ನರಸಿಂಹ ಭಟ್ಟ ಹಂಡ್ರಮನೆ, ಗಣೇಶ ಗಾಂವ್ಕರ(ಮದ್ದಳೆ), ರೋಹಿತ ತೀರ್ಥಹಳ್ಳಿ(ಚಂಡೆ) ಕಾರ್ಯನಿರ್ವಹಿಸಿದರು. ಮುಮ್ಮೇಳದಲ್ಲಿ ಪ್ರಹಸ್ಥನಾಗಿ ಹಿರಿಯ ತಾಳಮದ್ದಳೆ ಅರ್ಥಧಾರಿ ಜಬ್ಬಾರ ಸುಮೊ, ಅಂಗದನಾಗಿ ರಾಧಾಕೃಷ್ಣ ಕಲ್ಚಾರ, ರಾವಣನಾಗಿ ನರಸಿಂಹ ಭಟ್ಟ ಕುಂಕಿ ಉತ್ತಮ ಕಲೆ ತೋರಿದರು.

೯ರಂದು ಕನ್ನಡ ರಾಜ್ಯೋತ್ಸವ ಆಚರಣೆ

ಶಿರಸಿ: ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಕೊಳಗಿಬೀಸ್ ಘಟಕದಿಂದ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ನ. ೯ರಂದು ಬೆಳಗ್ಗೆ ೮.೩೦ರಿಂದ ಕೊಳಗಿಬೀಸ್ ಮಾರುತಿ ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.ಗೋಳಿಯ ಸಿದ್ಧಿವಿನಾಯಕ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಕನ್ನಡಾಂಬೆಯ ಸ್ತಬ್ಧಚಿತ್ರ ಹಾಗೂ ಡೊಳ್ಳು ಕುಣಿತದೊಂದಿಗೆ ಬೃಹತ್ ಮೆರವಣಿಗೆ ನಡೆಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಕರವೇ ಜನಧ್ವನಿ ಗೌರವಾಧ್ಯಕ್ಷ ಶ್ರೀಧರ ಮಡಿವಾಳ ಮಣಿಗಾರ, ಡಿವೈಎಸ್ಪಿ ಕೆ.ಎಲ್. ಗಣೇಶ, ಮಾರುತಿ ದೇವಾಲಯದ ಅರ್ಚಕ ವಿ. ಕುಮಾರ ಭಟ್, ಮನು ವಿಕಾಸ ಸಂಸ್ಥೆಯ ಗಣಪತಿ ಭಟ್, ಸಾಮಾಜಿಕ ಕಾರ್ಯಕರ್ತರ ಅನಂತಮೂರ್ತಿ ಹೆಗಡೆ, ಪ್ರಮುಖರಾದ ಅಶ್ವತ್ಥ ನಾರಾಯಣ ನಾಯ್ಕ, ಶ್ರೀಧರ ಹೆಗಡೆ ಇಳ್ಳುಮನೆ, ನೆಗಗು ಗ್ರಾಪಂ ಅಧ್ಯಕ್ಷ ಲಾಝರ್ ರೆಬೆಲ್ಲೋ, ವಲಯಾರಣ್ಯಾಧಿಕಾರಿ ಉಷಾ ಆರ್.ಕೆ., ಪಿಡಿಒ ಮಮತಾ ಗುಡ್ಡದಮನೆ, ನರಹರಿ ಭಂಡಾಕರ್, ಮಹಾಲಕ್ಷ್ಮೀ ಭಟ್, ದೇವಿ ಭಟ್, ನಾರಾಯಣ ದೈಮನಿ, ನಾಗರಾಜ ಗಾಂವಕರ್ ಮತ್ತಿತರರು ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಕರವೇ ಜನಧ್ವನಿ ಜಿಲ್ಲಾಧ್ಯಕ್ಷ ಉಮಾಕಾಂತ ಹೊಸ್ಕಟ್ಟಾ ವಹಿಸಲಿದ್ದಾರೆ.

ವಿವಿಧ ಕ್ಷೇತ್ರಗಳ ಸಾಧಕರನ್ನು ಇದೇ ವೇಳೆ ಸನ್ಮಾನಿಸಲಾಗುತ್ತಿದೆ. ಮಾಧ್ಯಮ ಕ್ಷೇತ್ರದಿಂದ ಪತ್ರಕರ್ತ ಮಂಜುನಾಥ ಸಾಯೀಮನೆ, ವೈದ್ಯಕೀಯ ಕ್ಷೇತ್ರದ ಡಾ. ಪ್ರಮೋದ ಅಮ್ಮಿನಳ್ಳಿ, ಡಾ. ಬಿ.ಬಿ. ನರಗುಂದ, ಡಾ. ಶಿವರಾಮ ನಾ. ಹೆಗಡೆ ಅವರನ್ನು, ಸಾಮಾಜಿಕ ಕ್ಷೇತ್ರದಿಂದ ಮನುವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್, ಕಾನಸೂರು ಉಪ ವಲಯಾರಣ್ಯಾಧಿಕಾರಿ ವಿಶ್ವನಾಥ ನಾಯ್ಕ, ಶಿಕ್ಷಣದಲ್ಲಿ ಸಾಧನೆ ತೋರಿದ ಚಿನ್ಮಯಿ ಹೆಗಡೆ ದೊಡ್ಮನೆ, ತೃಪ್ತಿ ಗೌಡ ಮಳಲಿ, ಚೈತನ್ಯ ಹೆಗಡೆ ಹೊಸ್ಮನೆ, ಹರಿಕೃಷ್ಣ ಗೌಡ, ರಕ್ಷಿತಾ ಗೌಡ ಹಾಗೂ ಚಿನ್ಮಯ ಜೋಗಳೇಕರ್ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌