ಹೊಸಕೋಟೆ: ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಸಮಸ್ಯೆ ಆಗಿದ್ದ ಪುಟ್ಪಾತ್ ಅತಿಕ್ರಮಣ ತೆರವಿಗೆ ನಗರಾಯುಕ್ತ ನೀಲಾ ಲೋಚನ ಪ್ರಭು ನೇತೃತ್ವದಲ್ಲಿ ಹೊಸಕೋಟೆ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಚಾಲನೆ ನೀಡಿದರು.
ಮುಂಜಾನೆ ೯ ಗಂಟೆಗೆ ಆರಂಭಗೊಂಡ ತೆರವು ಕಾರ್ಯ ಸಂಜೆವರೆಗೆ ನಿರಂತರವಾಗಿ ನಡೆಯಿತು. ಕೆಲ ಭಾಗದಲ್ಲಿ ಅಂಗಡಿ ಮಾಲೀಕರು ನಾವೇ ತೆರವು ಮಾಡುತ್ತೇವೆಂದರೂ ಕೇಳದೆ ಜೆಸಿಬಿಗಳ ಹೊಡೆದುರುಳಿಸಿ ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ನಗರದಲ್ಲಿ ಉಂಟಾಗುತ್ತಿದ್ದ ವಾಹನ ದಟ್ಟಣೆ ಹಿನ್ನೆಲೆಯಲ್ಲಿ ಆಯ್ದ ಪ್ರಮುಖ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಗಂಗಮ್ಮ ಗುಡಿ ರಸ್ತೆ, ಕಣ್ಣೂರಹಳ್ಳಿ ರಸ್ತೆ, ಚಿಕ್ಕೇಗೌಡ ಕಲ್ಯಾಣ ಮಂಟಪ ರಸ್ತೆ ಸೇರಿದಂತೆ ಹಲವಾರು ರಸ್ತೆಗಳಲ್ಲಿ ಏಕ ಮುಖ ಸಂಚಾರದಿಂದ ವಾಹನ ದಟ್ಟಣೆ ನಿಯಂತ್ರಣಕ್ಕೆ ಡಿವೈಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ಚಾಲನೆ ನೀಡಲಾಗಿದೆ.ಫೋಟೋ: ೨೫ ಹೆಚ್‌ಎಸ್‌ಕೆ ೪ ಮತ್ತು ೫
೪: ಹೊಸಕೋಟೆ ನಗರದ ಬಸ್ ನಿಲ್ದಾಣದ ಬಳಿ ಡಿವೈಎಸ್ಪಿ ಮಲ್ಲೇಶ್ ನೇತೃತ್ವದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.