
ಜಿಲ್ಲೆಯ ಮಧ್ಯವರ್ತಿ ಪ್ರದೇಶದಲ್ಲಿಯೇ ಹೊಸ ಪೀಠ ಸ್ಥಾಪನೆಗೆ ಒತ್ತಾಯಕನ್ನಡಪ್ರಭ ವಾರ್ತೆ ಕಾರವಾರ
ನಮ್ಮನ್ನು ಪ್ರಸ್ತುತ ಇರುವ ಧಾರವಾಡ ಪೀಠದ ವ್ಯಾಪ್ತಿಯಲ್ಲೇ ಮುಂದುವರಿಸಬೇಕು, ಇಲ್ಲವಾದಲ್ಲಿ ಜಿಲ್ಲೆಯ ಮಧ್ಯವರ್ತಿ ಪ್ರದೇಶದಲ್ಲಿಯೇ ಹೊಸ ಪೀಠ ಸ್ಥಾಪಿಸಬೇಕು ಎಂದು ಸಂಘವು ಸರ್ಕಾರ ಹಾಗೂ ಹೈಕೋರ್ಟ್ ಅನ್ನು ಆಗ್ರಹಿಸಿದೆ.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ವಕೀಲ ನಾಗರಾಜ ನಾಯಕ, ಕರಾವಳಿ ಎಂದರೆ ಕೇವಲ ಮಂಗಳೂರು ಮಾತ್ರವಲ್ಲ, ಕಾರವಾರದವರೆಗೂ ಕರಾವಳಿ ತೀರ ಹಬ್ಬಿದೆ. ಕೇವಲ ಮಂಗಳೂರಿಗೆ ಮಾತ್ರ ಪ್ರಾತಿನಿಧ್ಯ ನೀಡಿದರೆ ಉತ್ತರ ಕನ್ನಡ ಜಿಲ್ಲೆಗೆ ಭಾರಿ ಅನ್ಯಾಯವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಭೌಗೋಳಿಕವಾಗಿ ಮಂಗಳೂರು ಉತ್ತರ ಕನ್ನಡ ಜಿಲ್ಲೆಗೆ ಬಹಳ ದೂರದಲ್ಲಿದೆ. ಆದರೆ ಧಾರವಾಡ ಕೇವಲ 174 ಕಿಮೀ ಅಂತರದಲ್ಲಿದೆ. ಈ ಭೌಗೋಳಿಕ ಸತ್ಯವನ್ನು ಕಡೆಗಣಿಸಿ ಮಂಗಳೂರಿಗೆ ವ್ಯಾಪ್ತಿ ಬದಲಾಯಿಸಿದರೆ ಸಾರ್ವಜನಿಕರಿಗೆ ಮತ್ತು ವಕೀಲರಿಗೆ ತೀವ್ರ ಅನಾನುಕೂಲವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಇನ್ನು ಹೊಸ ಪೀಠ ಸ್ಥಾಪಿಸುವುದೇ ಆದರೆ, ಭೌಗೋಳಿಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ''''''''ಹೊನ್ನಾವರ''''''''ದಂತಹ ಮಧ್ಯವರ್ತಿ ಪ್ರದೇಶ ಅತ್ಯಂತ ಸೂಕ್ತವಾಗಿದೆ. ಮಂಗಳೂರು ಪೀಠಕ್ಕೆ ಶಿವಮೊಗ್ಗ ಜಿಲ್ಲೆಯಿಂದಲೂ ವಿರೋಧ ವ್ಯಕ್ತವಾಗುತ್ತಿದ್ದು, ಶಿವಮೊಗ್ಗದಿಂದ ಹೊನ್ನಾವರಕ್ಕೆ ಕೇವಲ 160 ಕಿ.ಮೀ. ಇರುವುದರಿಂದ ಇದು ಎಲ್ಲರಿಗೂ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದ ಹೈಕೋರ್ಟ್ ಪೀಠ ಸ್ಥಾಪನೆ ಸಾಧ್ಯವಾಗದಿದ್ದರೆ, ವಾರದಲ್ಲಿ ಕನಿಷ್ಠ ಮೂರು ದಿನ ಕಾರ್ಯನಿರ್ವಹಿಸುವ ''''''''ಸಂಚಾರಿ ಪೀಠ''''''''ವನ್ನಾದರೂ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಭಾಗ್ವತ್, ಕಾರ್ಯದರ್ಶಿ ಚರಣ್ ನಾಯ್ಕ, ದಿಯಾ ಭಟ್, ಶುಭಾ ಗಾಂವ್ಕರ್, ರಾಜೇಶ ಆಚಾರಿ, ಅನಾಮಿಕಾ ರಾಣೆ, ಅಶೋಕ್ ಕುಮಾರ ಮತ್ತಿತರರು ಇದ್ದರು.