ಮಹಿಳಾ ಮೀಸಲಾತಿಗೆ ವಿಪಕ್ಷ ಅಡ್ಡಗಾಲು ಖಂಡನೀಯ: ತೋಟಪ್ಪ ಕುರುಡಗಿ

KannadaprabhaNewsNetwork |  
Published : Apr 19, 2026, 02:15 AM IST
ಗದಗ ನಗರದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದಿಂದ ಪ್ರತಿಭಟನೆ ನಡೆಸಲಾಯಿತು. | Kannada Prabha

ಸಾರಾಂಶ

ನಾರಿಶಕ್ತಿ ವಂದನಾ ಅಧಿನಿಯಮ ವಿರೋಧಿಸಿದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ವಿರುದ್ಧ ಗದಗ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.

ಗದಗ: ನಾರಿಶಕ್ತಿ ವಂದನಾ ಅಧಿನಿಯಮ ವಿರೋಧಿಸಿದ ಕಾಂಗ್ರೆಸ್ ಹಾಗೂ ಅದರ ಮಿತ್ರ ಪಕ್ಷಗಳ ವಿರುದ್ಧ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಶನಿವಾರ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿ, ಕಾಂಗ್ರೆಸ್‌ ಹಾಗೂ ಅದರ ಮಿತ್ರ ಪಕ್ಷಗಳು ಸಂಸತ್‌ನಲ್ಲಿ ಮಹಿಳಾ ಮೀಸಲಾತಿಗೆ ವಿರೋಧ ಮಾಡಿರುವುದು ಖಂಡನಾರ್ಹ ಹಾಗೂ ಮಹಿಳೆಯರ ಉನ್ನತಿಗೆ ಅಡ್ಡಗಾಲು ಹಾಕಿದ ವಿಪಕ್ಷಗಳನ್ನು ದೇಶದ ನಾರಿಶಕ್ತಿ ಎಂದಿಗೂ ಕ್ಷಮಿಸದು ಎಂದರು.

ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಶೋಭಾ ನರಸಿಂಹಗೌಡರ ಮಾತನಾಡಿ, ನಾರಿಶಕ್ತಿ ಅಧಿನಿಯಮ ವಿರೋಧಿಸಿದ ಕಾಂಗ್ರೆಸ್ ದೇಶದ ಮಹಿಳೆಯರಿಗೆ ಅವಮಾನ ಮಾಡಿದೆ ಎಂದರು.

ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ ಮಾತನಾಡಿ, ದೇಶದ ಮಹಿಳೆಯರ ಸಬಲೀಕರಣ, ಗೌರವ ಮತ್ತು ರಾಜಕೀಯ ಪ್ರತಿನಿಧಿತ್ವ ಹೆಚ್ಚಿಸುವ ದೃಷ್ಟಿಕೋನದೊಂದಿಗೆ ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿದ್ದ ನಾರಿ ಶಕ್ತಿ ವಂದನ ಅಧಿನಿಯಮ್-2026 ದೇಶದ ಇತಿಹಾಸದಲ್ಲೇ ಸುವರ್ಣ ಅಧ್ಯಾಯವಾಗುತ್ತಿತ್ತು. ಆದರೆ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ಒಕ್ಕೂಟದವರು ಈ ಬಿಲ್‌ನ್ನು ವಿರೋಧಿಸಿ ದೇಶದ ಮಹಿಳೆಯರಿಗೆ ಅನ್ಯಾಯ ಮಾಡಿದ್ದಾರೆ ಎಂದರು.

ಗದಗ ನಗರ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಸ್ವಾತಿ ಅಕ್ಕಿ ಮಾತನಾಡಿ, ನಾರಿ ಶಕ್ತಿ ವಂದನಾ ಅಧಿನಿಯಮ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳನ್ನು ಒದಗಿಸುವ ಮೂಲಕ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ಖಚಿತಪಡಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿರುತ್ತಿತ್ತು. ಆದರೆ ಕಾಂಗ್ರೆಸ್‌ನವರು ಈ ಬಿಲ್‌ನ್ನು ವಿರೋಧಿಸಿ ಎಲ್ಲ ಮಹಿಳೆಯರಿಗೆ ದ್ರೋಹ ಮಾಡಿದ್ದಾರೆ ಎಂದರು.

ಪಕ್ಷದ ಮುಖಂಡ ಎಂ.ಎಸ್. ಕರಿಗೌಡ್ರ, ಶ್ರೀಪತಿ ಉಡುಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಫಕ್ಕೀರೇಶ ರಟ್ಟಿಹಳ್ಳಿ, ಗದಗ ನಗರ ಮಂಡಲ ಅಧ್ಯಕ್ಷ ಸುರೇಶ ಮರಳಪ್ಪನವರ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ, ಪ್ರಕಾಶ ಕಾಕಿ, ಸುರೇಶ ಚಿತ್ತರಗಿ, ಪ್ರಮುಖರಾದ ಜಯಶ್ರೀ ಉಗಲಾಟದ, ಚೆನ್ನಮ್ಮ ಹುಳಕಣ್ಣವರ, ಕಸ್ತೂರಿ ಕಮ್ಮಾರ, ಪುಷ್ಪಾ ಪೂಜಾರ, ರೇಖಾ ಗವಳಿ, ನಂದಾ ಪಲ್ಲೇದ, ಶಾರದಾ ದಳವಾಯಿ, ರೇಖಾ ಮದ್ನೂರ, ವಿಜಯಲಕ್ಷ್ಮೀ ಮಾನ್ವಿ, ಸಾವಿತ್ರಿ ಪಾಟೀಲ, ಮೇಘನಾ ಕೊಟ್ಟೂರ, ಕವಿತಾ ಬಂಗಾರಿ, ಸರೋಜಾ ಬಾರಕೇರ, ಕಮಲಾಕ್ಷಿ ತಕ್ಕಲಕೋಟಿ, ಸುಮಂಗಲಾ ಕೊನೆವಾಲ, ಶಿವಲೀಲಾ ಉಮಚಗಿ, ಶ್ರೀದೇವಿ ಲಖಮಾಪುರ, ಕೌಶಲ್ಯ ಬದಿ, ಯೋಗೇಶ್ವರಿ ಭಾವಿಕಟ್ಟಿ, ಪ್ರೀತಿ ಶಿವಪ್ಪನಮಠ, ಶಾಂತಾ ತಿಮ್ಮಾಪುರ, ಲಕ್ಷ್ಮೀ ಬಂಕದ, ಪವಿತ್ರಾ ಮುದಗಲ್, ಮಂಗಳಾ ರಾಯಬಾಗಿ, ಸುನೀತಾ ಹಳ್ಳಿ, ಸಂಕೇತಾ ಶಿದ್ಲಿಂಗ, ಶೈಲಾ ಜಾಸೆಫ್, ನಿರ್ಮಲಾ ಬಂಡಿಹಾಳ, ಜ್ಯೋತಿ ಹಾನಗಲ್, ಡಾ. ಕಮಲಾಕ್ಷಿ ಅಂಗಡಿ, ಅಪ್ಪಣ್ಣ ಟೆಂಗಿನಕಾಯಿ, ಫಕ್ಕಿರಪ್ಪ ಗೊಡಿ, ರಮೇಶ ಸಜ್ಜಗಾರ, ರವಿ ಮಾನ್ವಿ, ಮಂಜುನಾಥ ಶಾಂತಗೇರಿ, ದೇವೇಂದ್ರಪ್ಪ ಹೂಗಾರ, ಬಸವರಾಜ ನರೇಗಲ್, ಮಂಜುನಾಥ ಪಟ್ಟಣಶೆಟ್ಟಿ, ವಿನೋದ ಹಂಸನೂರ ಹಾಗೂ ಇನ್ನೂ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಂಡ್ ಪವರ್ ಕಾಟಕ್ಕೆ ಬೇಸತ್ತು ಹೈಟೆನ್ಷನ್ ಕಂಬ ಏರಿದ ರೈತ
ತುಂಗಭದ್ರಾ ಒಡಲು ಬಗೆದು, ಮರಳು ದಂಧೆ