ಸಂವಿಧಾನದ ಮೂಲ ಆಶಯ ಎತ್ತಿ ಹಿಡಿಯಲು ಸಂಘಟಿತರಾಗಿ: ಚೇತನ್ ಅಹಿಂಸಾ

KannadaprabhaNewsNetwork |  
Published : Dec 29, 2025, 02:00 AM IST
28ಕೆಎಂಎನ್ ಡಿ19 | Kannada Prabha

ಸಾರಾಂಶ

2900 ಪಕ್ಷಗಳು ನೋಂದಾಣಿಯಾಗಿದ್ದರೂ ಕೂಡ ಯಾವ ಪಕ್ಷಗಳು ನಿಜವಾದ ಸಂವಿಧಾನದ ಅಶಯಗಳನ್ನು ಎತ್ತಿ ಹಿಡಿಯುವಲ್ಲಿ ವಿಫಲವಾಗಿವೆ. ಅನ್ಯಾಯವನ್ನು ತೊಡೆದು ಹಾಕಲು ನಾವೆಲ್ಲಾರೂ ಸಂವಾದ ನಡೆಸಿ ಚರ್ಚಿಸಿ ಉನ್ನತ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸಮ ಸಮಾಜ ನಿರ್ಮಾಣ ಮಾಡು ಜೊತೆಗೆ ಸಂವಿಧಾನದ ಮೂಲ ಆಶಯ ಎತ್ತಿ ಹಿಡಿಯಲು ಪ್ರತಿಯೊಬ್ಬರು ಸಂಘಟಿತರಾಗಬೇಕು ಎಂದು ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ ಮಾತನಾಡಿ, ಪೇರಿಯರ್, ಕ್ಯಾನ್ಸಿರಾಂ ಹಾಗೂ ನಮ್ಮ ವ್ಯಾಖ್ಯಾನದಲ್ಲೂ ಸಮ ಸಮಾಜ ನಿರ್ಮಾಣವಾಗಬೇಕೆಂಬುವುದು ಆಗಿದೆ. ರಾಜ್ಯದ 186 ಕ್ಷೇತ್ರಗಳಲ್ಲಿ ಸಮಾನತೆಯ ಸಭೆಗಳನ್ನು ನಡೆಸಿ ಸಮ ಸಮಾಜ ಯಾವ ರೀತಿ ನಿರ್ಮಾಣ ಮಾಡಲು ಸಾಧ್ಯ ಎನ್ನುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಸಮಾನತೆ ವಾದಿಗಳಾಗಿ ವ್ಯಕ್ತಿಗಳ ಅಡಿಯಲ್ಲಿ ಅಲ್ಲ, ಸಿದ್ಧಾಂತದಡಿಯಲ್ಲಿ ಮುಂದೆ ತೆಗೆದುಕೊಂಡು ಹೋಗುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಅಖಂಡ ಕರ್ನಾಟಕದಲ್ಲಿ ನಿಜವಾದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಬೇಕಿದೆ ಎಂದರು.

2900 ಪಕ್ಷಗಳು ನೋಂದಾಣಿಯಾಗಿದ್ದರೂ ಕೂಡ ಯಾವ ಪಕ್ಷಗಳು ನಿಜವಾದ ಸಂವಿಧಾನದ ಅಶಯಗಳನ್ನು ಎತ್ತಿ ಹಿಡಿಯುವಲ್ಲಿ ವಿಫಲವಾಗಿವೆ. ಅನ್ಯಾಯವನ್ನು ತೊಡೆದು ಹಾಕಲು ನಾವೆಲ್ಲಾರೂ ಸಂವಾದ ನಡೆಸಿ ಚರ್ಚಿಸಿ ಉನ್ನತ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದರು.

ಇದೇ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಡಾ.ಬಿ.ಆರ್.ಅಂಬೇಡ್ಕರ್ ಆಚರಣಾ ಸಮಿತಿ ಅಧ್ಯಕ್ಷ ವೃದ್ದೇಶ್, ಮುಖಂಡರಾದ ಅಶೋಕ್, ಶಿವಕುಮಾರ್, ಉಮೇಶ್, ಶ್ರೀಧರ್, ಸಂದೇಶ್ , ಪ್ರಸಾದ್, ನಾಗರಾಜು, ಬಸವರಾಜು ಸೇರಿದಂತೆ ಇತರರು ಇದ್ದರು.

ಇಂದು ಬೃಹತ್ ರಕ್ತದಾನ ಶಿಬಿರ

ಮಂಡ್ಯ: ನಾಡಿನ ಏಳಿಗೆಗಾಗಿ ಶ್ರಮಿಸಿದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಗೌರವಾರ್ಥ, ರಾಷ್ಟ್ರಕವಿ ಕುವೆಂಪು ಜನ್ಮದಿನ ಹಾಗೂ ಕನ್ನಡ ರಾಜ್ಯೋತ್ಸವ ಡಿ.29ರಂದು ನಗರದ ಗಾಂಧಿಭವನದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಮಂಡ್ಯ ಜಿಲ್ಲಾ ರಕ್ತದಾನಿಗಳ ಒಕ್ಕೂಟ ಹಾಗೂ ಯುವ ಮಿತ್ರರು ಎನ್.ಕೆ.ಯುವ ಬ್ರಿಗೇಡ್ ಆಶ್ರಯದಲ್ಲಿ ಬೆಳಗ್ಗೆ 8.30 ರಿಂದ ಸಂಜೆ 6 ಗಂಟೆವರೆಗೆ ಹಮ್ಮಿಕೊಂಡಿರುವ ರಕ್ತದಾನ ಶಿಬಿರದಲ್ಲಿ ಅಮೂಲ್ಯ ಜೀವಗಳ ರಕ್ಷಣೆಗಾಗಿ, ಆದರ್ಶ ವ್ಯಕ್ತಿಗಳ ಗೌರವಾರ್ಥ ಹಾಗೂ ಮಂಡ್ಯ ಸರ್ಕಾರಿ ಜಿಲ್ಲಾಸ್ಪತ್ರೆಗಳ ರೋಗಿಗಳ ಅವಶ್ಯಕತೆಗಾಗಿ ಪ್ರತಿಯೊಬ್ಬರು ಭಾಗವಹಿಸಿ ರಕ್ತದಾನ ಮಾಡುವಂತೆ ಆಯೋಜಕರು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಹೋರಾಟಗಾರರ ಪ್ರಕರಣ ವಾಪಸ್‌: ಸಿದ್ದರಾಮಯ್ಯ
ರಾಜ್ಯದಲ್ಲಿ ಡ್ರಗ್ಸ್‌ ಫ್ಯಾಕ್ಟರಿ ಪತ್ತೆಯಾಗಿದ್ದಕ್ಕೆ ಬಿಜೆಪಿ ಕಿಡಿ