ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಯೇ ನಮ್ಮ ಉದ್ದೇಶ

KannadaprabhaNewsNetwork |  
Published : Apr 28, 2025, 12:49 AM IST
ವಿಜಯಪುರದ ಬಿ.ಎಲ್.ಡಿ.ಇ.ಸಂಸ್ಥೆಯ ಎಸ್.ಬಿ.ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ  'ಪೋಷಕ-ಶಿಕ್ಷಕರ' ಸಭೆ ನಡೆಯಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಶೈಕ್ಷಣಿಕ ಏಳಿಗೆಯೇ ನಮ್ಮ ಮೂಲ ಧ್ಯೇಯ. ಅದಕ್ಕೆ ಪೂರಕವಾಗಿ ಎಂದೆಂದಿಗೂ ಪೋಷಕರ ಸೂಕ್ತ ಸಲಹೆ, ಸೂಚನೆಗಳು ಸ್ವಾಗತಾರ್ಹ ಎಂದು ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಶೈಕ್ಷಣಿಕ ಏಳಿಗೆಯೇ ನಮ್ಮ ಮೂಲ ಧ್ಯೇಯ. ಅದಕ್ಕೆ ಪೂರಕವಾಗಿ ಎಂದೆಂದಿಗೂ ಪೋಷಕರ ಸೂಕ್ತ ಸಲಹೆ, ಸೂಚನೆಗಳು ಸ್ವಾಗತಾರ್ಹ ಎಂದು ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಹೇಳಿದರು.

ನಗರದ ಬಿಎಲ್‌ಡಿಇ ಸಂಸ್ಥೆಯ ಎಸ್.ಬಿ.ಕಲಾ ಹಾಗೂ ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪೋಷಕ-ಶಿಕ್ಷಕರ ಸಭೆಯಲ್ಲಿ ಮಾತನಾಡಿದ ಅವರು, ಈ ಸಂಸ್ಥೆಯನ್ನು ಕಟ್ಟಿ ಬೆಳಸಿದ ಬಂಥನಾಳದ ಶಿವಯೋಗಿಗಳು, ಡಾ.ಫ.ಗು.ಹಳಕಟ್ಟಿಯವರು ಮತ್ತು ಡಾ.ಬಿ.ಎಂ.ಪಾಟೀಲ ಮಹಾನ್ ಚೇತನರು. ಅವರು ಹಾಕಿ ಕೊಟ್ಟ ಸನ್ಮಾರ್ಗದಲ್ಲಿ ಇಂದು ನಾವು ನಡೆಯುತ್ತಿದ್ದೇವೆ. ಸಂಸ್ಥೆಯು ಉತ್ತರ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಬಾಳಿನ ಆಶಾಕಿರಣವಾಗಿದೆ. ಇಂದು ನಮ್ಮ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಏಳಿಗೆಗಾಗಿ ಶೈಕ್ಷಣಿಕವಾಗಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು.

ಮಹಾವಿದ್ಯಾಲಯ ಬೆಳವಣಿಗೆಗೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪಾತ್ರ ಪ್ರಮುಖವಾಗಿದೆ. ಅದರಂತೆ ವಿದ್ಯಾರ್ಥಿಗಳು ಅಷ್ಟೇ ಅವಶ್ಯ ಅದರಂತೆ ಈ ಶೈಕ್ಷಣಿಕ ವರ್ಷದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ನಮ್ಮಲ್ಲಿ ಪ್ರವೇಶ ಪಡೆದುಕೊಂಡಿದ್ದಾರೆ. ನಿಮ್ಮ ಮಕ್ಕಳ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಇಲ್ಲಿಗೆ ಬಂದಿರುವ ನಿಮ್ಮಿಂದ ನಮಗೆ ಇನ್ನಷ್ಟು ಹೆಚಿನ ಜವಾಬ್ದಾರಿ ನೀಡಿದಂತಾಗಿದೆ. ಹಲವಾರು ವಿದ್ಯಾರ್ಥಿಗಳ ಸಮಸ್ಯೆಗಳು ನಮಗೆ ಗೋಚರವಾಗಿವೆ. ನೂತನ ಕ್ಯಾಂಪಸ್ ಬರಲು ಬಸ್ ಸಮಸ್ಯೆ ಉಂಟಾಗಿತ್ತು. ಸಂಸ್ಥೆಯ ಕಾರ್ಯದರ್ಶಿ ಸುನೀಲಗೌಡ ಪಾಟೀಲ ಅದನ್ನು ಪರಿಹರಿಸಿದ್ದಾರೆ. ಈ ನಿಟ್ಟಿನಲ್ಲಿ ಮಹಾವಿದ್ಯಾಲ ಯದಲ್ಲಿ ಯಾವುದೇ ಶೈಕ್ಷಣಿಕ ಸಮಸ್ಯೆಯಾಗದಂತೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸಂಸ್ಥೆ, ನಮ್ಮ ಮಹಾವಿದ್ಯಾಲಯ ಆಡಳಿತ ವರ್ಗ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಶ್ರಮಿಸುತ್ತಿರುವುದು ತಿಳಿಸಿದರು.

ಆವರಣದಲ್ಲಿ ಒಟ್ಟು ೨೦೦ ಕ್ಕಿಂತ ಅಧಿಕ ಗಿಡಗಳನ್ನು ನೆಟ್ಟು ಪೋಷಿಸಿ ಆವರಣ ಸಂಪೂರ್ಣ ಹಸಿರುಮಯಗೊಳಿಸಲಾಗಿದೆ. ಅದಕ್ಕೆ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ ಕಾರಣ. ವಿದ್ಯಾರ್ಥಿಗಳಿಗೆ ಅಗಾಧವಾದ ಜ್ಞಾನವನ್ನು ಕೊಡುತ್ತಿದೆ. ಸರಿಯಾದ ರೀತಿಯಲ್ಲಿ ತರಗತಿಗಳು, ಸುಸಜ್ಜಿತ ಲ್ಯಾಬ್‌ಗಳು, ಕ್ಲಾಸ್‌ ರೂಂ, ಅನುಭವಿ ಪ್ರಾಧ್ಯಾಪಕರಿಂದ ಒಳಗೊಂಡಿದೆ. ಪೋಷಕರು ಅದನ್ನು ಗಮನಿಸಿ ಮಕ್ಕಳ ಕಾಲೇಜಿಗೆ ಬರುತ್ತಿದ್ದಾರಾ? , ಇಲ್ಲವೋ ಎಂಬುದನ್ನು ಗಮನಿಸಿ ಅವರ ಶೈಕ್ಷಣಿಕ ಏಳಿಗೆಗೆ ನಾವು ನೀವು ಕೈ ಜೋಡಿಸಬೇಕಿದೆ ಎಂದು ಹೇಳಿದರು.

ಇದೇ ವೇಳೆ ಪ್ರೊ.ಮಹಾಂತೇಶ ಜೇವೂರ ಮಾತನಾಡಿದರು. ಈ ಸಂದರ್ಭದಲ್ಲಿ ಉಪಪ್ರಾಚಾರ್ಯ ಅನಿಲ ನಾಯಕ್, ಐಕ್ಯೂಎಸಿ ನಿರ್ದೇಶಕ ಡಾ.ಪಿ.ಎಸ್.ಪಾಟೀಲ, ಪ್ರೊ.ಅಮಿತ ತೇರದಾಳೆ, ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಪೋಷಕರು ಉಪಸ್ಥಿತರಿದ್ದರು.

ಉಪ್ರಾಚಾರ್ಯ ಡಾ.ಅನೀಲ್ ನಾಯಕ ಆಶಯನುಡಿಗಳನ್ನಾಡಿ ಸ್ವಾಗತಿಸಿದರು. ಡಾ.ಶ್ರೀನಿವಾಸ ದೊಡ್ಡಮನಿ ಮಹಾವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳು, ಬೋಧಕ ಮತ್ತು ವಿದ್ಯಾರ್ಥಿಗಳಿಗೆ ಸಾಧನೆಯನ್ನು ಸಂಕ್ಷಿಪ್ತವಾಗಿ ಓದಿದರು, ಪ್ರೊ.ಸಿ.ಎನ್.ಕುನ್ನೂರ ನಿರೂಪಿಸಿದರು. ಡಾ.ಪಿ ಎಸ್ ಪಾಟೀಲ ವಂದಿಸಿದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌