ಅವೈಜ್ಞಾನಿಕ ರಸ್ತೆ ಕಾಮಗಾರಿ ವಿರುದ್ಧ ಆಕ್ರೋಶ

KannadaprabhaNewsNetwork |  
Published : Jan 31, 2026, 01:45 AM IST
30ಎಚ್ಎಸ್ಎನ್18 : ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂಆರ್ ವೆಂಕಟೇಶ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಬೇಲೂರು ಪಟ್ಟಣವು ಐತಿಹಾಸಿಕ ಹಿನ್ನೆಲೆ ಹೊಂದಿದ್ದು ಕೋಟೆಕೊತ್ತಲು ಕಂದಕಗಳಿಗೆ ಹೊಂದಿಕೊಂಡಂತೆ ಕೆಲ ಬೀದಿಗಳು ಮನೆಗಳು ಇವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಯೋಜನಾ ವರದಿ ಸಿದ್ಧಪಡಿಸಬೇಕಿತ್ತು. ಆದರೆ ಶಾಸಕರು ಇದು ಯಾವುದನ್ನು ಮಾಡದೆ ಹಿಟ್ಲರ್‌ ಮಾದರಿಯಲ್ಲಿ ನಿರ್ಧಾರ ಕೈಗೊಂಡು ತಮ್ಮ ಹಿಂಬಾಲಕರಿಗೆ ಕಾಮಗಾರಿ ನೀಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜನರಿಂದ ಆಯ್ಕೆಯಾದ ಶಾಸಕರು ಜನಪರ ಕೆಲಸ ಮಾಡಬೇಕು ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಬಿಕ್ಕೋಡು ರಸ್ತೆಯಲ್ಲಿ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿ ಅಸಮರ್ಪಕ ಹಾಗೂ ಅವೈಜ್ಞಾನಿಕವಾಗಿದ್ದು, ಇದರಿಂದ ನಿವಾಸಿಗಳಿಗೆ ನಡೆದಾಡಲು ಪರದಾಡುವಂತಾಗಿದೆ ಎಂದು ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ ಆರ್‌ ವೆಂಕಟೇಶ್ ಆಕ್ರೋಶ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳ ನಂತರ ಪಟ್ಟಣದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಸಲು ಶಾಸಕರು ಮುಂದಾಗಿರುವುದು ಸ್ವಾಗತಾರ್ಹ. ಆದರೆ ಕಾಮಗಾರಿ ಆರಂಭಿಸುವ ಮುನ್ನ ಸ್ಥಳೀಯ ವಾರ್ಡಿನ ಸದಸ್ಯರ, ನಿವಾಸಿಗಳ ಸಲಹೆ ಸಹಕಾರವನ್ನು ಪಡೆಯದೆ ಏಕಮುಖವಾಗಿ ನಿರ್ಧಾರ ಕೈಗೊಂಡು ಮನಸ್ಸಿಗೆ ತೋಚಿದಂತೆ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಬೇಲೂರು ಪಟ್ಟಣವು ಐತಿಹಾಸಿಕ ಹಿನ್ನೆಲೆ ಹೊಂದಿದ್ದು ಕೋಟೆಕೊತ್ತಲು ಕಂದಕಗಳಿಗೆ ಹೊಂದಿಕೊಂಡಂತೆ ಕೆಲ ಬೀದಿಗಳು ಮನೆಗಳು ಇವೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಯೋಜನಾ ವರದಿ ಸಿದ್ಧಪಡಿಸಬೇಕಿತ್ತು. ಆದರೆ ಶಾಸಕರು ಇದು ಯಾವುದನ್ನು ಮಾಡದೆ ಹಿಟ್ಲರ್‌ ಮಾದರಿಯಲ್ಲಿ ನಿರ್ಧಾರ ಕೈಗೊಂಡು ತಮ್ಮ ಹಿಂಬಾಲಕರಿಗೆ ಕಾಮಗಾರಿ ನೀಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜನರಿಂದ ಆಯ್ಕೆಯಾದ ಶಾಸಕರು ಜನಪರ ಕೆಲಸ ಮಾಡಬೇಕು ಎಂದರು . ಬಿಕ್ಕೋಡು ರಸ್ತೆಯಲ್ಲಿ ಮೂರೂವರೆ ಕೋಟಿ ವೆಚ್ಚದಲ್ಲಿ ರಸ್ತೆ ಅಗಲೀಕರಣ ಹಾಗೂ ಬಾಕ್ಸ್ ಚರಂಡಿ ನಿರ್ಮಾಣ ಮಾಡಲಾಗುತ್ತಿದೆ. ಹೋಟೆಲ್ ಶಂಕರಣ್ಣ ಅವರ ಮನೆಯಿಂದ ಮಹಿಳಾ ಕಾಲೇಜುವರೆಗೆ ಅಂಕುಡೊಂಕಾಗಿ ಚರಂಡಿ ನಿರ್ಮಾಣ ಮಾಡಿದ್ದು ಆರು ಅಡಿ ಎತ್ತರದಲ್ಲಿ ಇದೆ. ವಯಸ್ಸಾದವರು ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರಯಾಸಪಟ್ಟು ಮೇಲೇರಿ ಮುಖ್ಯರಸ್ತೆಗೆ ಬರಬೇಕಿದೆ. ಮನೆಗೆ ದಿನಸಿ ಪದಾರ್ಥ ತರುವವರು, ಆಸ್ಪತ್ರೆಯಿಂದ ಆಟೋದಲ್ಲಿ ಬರುವವರು ಕೆಳಗೆ ಇಳಿಯಲು ಹರಸಾಹಸ ಪಡಬೇಕಿದೆ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ರ್ಯಾಂಪ್ ನಿರ್ಮಾಣ ಮಾಡುತ್ತೇವೆ ಎನ್ನುತ್ತಾರೆ. ಆದರೆ ಯೋಜನಾ ವರದಿಯಲ್ಲಿ ರ್ಯಾಂಪ್ ಅಳವಡಿಕೆ ಬಗ್ಗೆ ಮಾಹಿತಿ ಇಲ್ಲ. ಚರಂಡಿ ನಿರ್ಮಾಣ ಸಂದರ್ಭದಲ್ಲಿ ತಮಗೆ ಬೇಕಾದವರಿಗೆ ಜಾಗ ಬಿಟ್ಟು ಕೊಟ್ಟು ತಾರತಮ್ಯ ಮಾಡಿದ್ದಾರೆ. ಈ ಬಗ್ಗೆ 7ನೇ ವಾರ್ಡಿನ ಸದಸ್ಯ ತೀರ್ಥ ಕುಮಾರಿಯವರು ಶಾಸಕರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ. ಮಾಜಿ ಶಾಸಕರ ಅನುದಾನದಲ್ಲಿ ಹಾಲಿ ಶಾಸಕರು ಕೆಲಸ ಮಾಡಿಸುತ್ತಿದ್ದಾರೆ, ಅಲ್ಲದೆ ಸಿಎಂ ವಿಶೇಷ ಅನುದಾನದ ಕೆಲಸವು ಸರಿಯಾಗಿ ನಡೆಯುತ್ತಿಲ್ಲ ಎಂದು ದೂರಿದರು.ಹಳೆ ಮೂಡಿಗೆರೆ, ಪಂಪ್‌ಹೌಸ್, ಚನ್ನಕೇಶವ ಹೊಸನಗರ ರಸ್ತೆಗಳು ಸಂಪೂರ್ಣ ಹಾಳಾಗಿರುವುದು ಶಾಸಕರ ಕಣ್ಣಿಗೆ ಬಿದ್ದಿಲ್ಲ. ಆದರೆ ಗಟ್ಟು ಮುಟ್ಟಾಗಿದ್ದ ವೈಕುಂಠ ಬೀದಿಯ ರಸ್ತೆ, ಚರಂಡಿಯನ್ನು ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ವೈಕುಂಠ ಬೀದಿಯಲ್ಲಿ ಶಾಸಕರ ಮನೆಯಿದ್ದು ಬಿಜೆಪಿ ಮತದಾರರು ಅತಿ ಹೆಚ್ಚು ಇರುವ ಕಾರಣ ತಮ್ಮ ಕಾಮಗಾರಿ ಮಾಡಲು ಅವಕಾಶ ಕೊಟ್ಟಿದ್ದಾರೆ. ಇದೇ ರೀತಿ ದೇವಾಂಗ ಬೀದಿಯಲ್ಲಿ ಕಾಮಗಾರಿ ಅವಶ್ಯಕತೆ ಇಲ್ಲದಿದ್ದರೂ ಮಾಡುತ್ತಿದ್ದು ತಮ್ಮ ಹಿಂಬಾಲಕರಿಗೆ ಅತಿ ಹೆಚ್ಚು ಕಾಮಗಾರಿ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

==

ಫೋಟೋ:

ಎಂ ಆರ್‌ ವೆಂಕಟೇಶ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದಲ್ಲಿ ಮಹಿಳೆ ಮೇಲೆ ನಾಯಿ ಅಟ್ಟಹಾಸ, ವಿವಿಧೆಡೆ 50 ಹೊಲಿಗೆ
ಭ್ರಷ್ಟಾಚಾರಕ್ಕೆ ಸಾಕ್ಷ್ಯ ಕೊಟ್ರೆ ರಾಜೀನಾಮೆ : ಸಚಿವರ ಸವಾಲ್