ಎಂಜಿ ರಸ್ತೆಯಲ್ಲಿ ಯುವತಿಯರು ತುಂಡುಡುಗೆ ಧರಿಸಿ ನಡಿಗೆ
ಬೆಂಗಳೂರಿನಲ್ಲಿ ಹೊರ ರಾಜ್ಯದವರ ಹೆಚ್ಚಳದಿಂದಾಗಿ ಸ್ಥಳೀಯ ಉದ್ಯೋಗ, ಸಂಸ್ಕೃತಿ, ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಘಟಕದ ವತಿಯಿಂದ ನಡೆದ ನೂತನ ಪದಾಧಿಕಾರಿಗಳ ಸೇರ್ಪಡೆ, ಸಮಾಜಮುಖಿ ಚಿಂತಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಸಂಘಟನೆಗೆ ಸೇರ್ಪಡೆಯಾದವರಿಗೆ ಸಂಘಟನೆಯ ಶಲ್ಯ ಹಾಕಿ ಸ್ವಾಗತಿಸಿ ಬರಮಾಡಿಕೊಂಡು ಮಾತನಾಡಿದರು.ಹಿಂದೆ ಕೆರೆಗಳಲ್ಲಿ ನೀರು ಕುಡಿಯುತ್ತಿದ್ದೇವು. ಇಂದು ಗುತ್ತಿಗೆ ಪಡೆದು ಕೊಳಚೆ ಮಂಡಳಿಯಾಗಿ ಮಾಡಿಬಿಟ್ಟರು. ಎಲ್ಲ ಮಾಲ್‌ಗಳಲ್ಲಿ ಪರಕೀಯರು ಬಂದು ವಾಸಮಾಡುತ್ತಿದ್ದಾರೆ. ನೀವು ಎಲ್ಲೆ ಹೋದರು ಕನ್ನಡ ಅನ್ನ, ಮುದ್ದೆ, ಮಕ್ಕಳಿಗೆ ಜಾಗವಿಲ್ಲದಂತೆ ಮಾಡಲಾಗಿದೆ. ಅಲ್ಲಿ ರೋಟಿ ಕುಲ್ಚ ತುಂಬಿಕೊಂಡಿವೆ. ಪಿಜ್ಜಾ ಬರ್ಗರ್ ಬಂದಿದ್ದು, ಬೆಂಗಳೂರಿನಲ್ಲಿ ಎಂಜಿ ರೋಡ್‌ನಲ್ಲಿ ಎಗ್ಗಿಲ್ಲದೆ ಪರಭಾಷಿಯ ತುಂಡುಬಟ್ಟೆಯ ಹುಡುಗಿಯರು ಓಡಾಡುವಂತಾಗಿದ್ದು, ನಮ್ಮ ಕನ್ನಡ ಮಕ್ಕಳು ಮುಜುಗರದಿಂದ ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಕನ್ನಡ ಉಳಿವಿಗಾಗಿ ಕನ್ನಡ ತನಕ್ಕಾಗಿ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.