ಎಲ್.ಎಸ್. ಶ್ರೀಕಾಂತ್
ಕನ್ನಡಪ್ರಭ ವಾರ್ತೆ ಮೈಸೂರುಎಲ್ಲಿ ನೋಡಿದರೂ ಮುದ್ದು ಮುದ್ದಾದ ಶ್ವಾನಗಳು, ವಿವಿಧ ತಳಿಗಳನ್ನು ಒಂದೇ ಸ್ಥಳದಲ್ಲಿ ನೋಡಲು ಮುಗಿಬಿದ್ದ ಶ್ವಾನ ಪ್ರಿಯರು, ಮುದ್ದಾದ ಶ್ವಾನ, ಬೆಕ್ಕುಗಳನ್ನು ಮುದ್ದಾಡಿ, ಸೆಲ್ಪಿ ಕ್ಲಿಕ್ಕಿಸಿಕೊಂಡ ಯುವಕ, ಯುವತಿಯರು, ಮಕ್ಕಳು..,
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಪಶು ಸಂಗೋಪನಾ ಮತ್ತು ಪಶುವೈದ್ಯಕೀಯ ಇಲಾಖೆಯ ಸಹಯೋಗದಿಂದ ಜೆ.ಕೆ. ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಸಾಕು ಪ್ರಾಣಿಗಳ ಪ್ರದರ್ಶನದಲ್ಲಿ ಕಂಡು ಬಂದ ದೃಶ್ಯಗಳು..,ಮುದ್ದು ಪ್ರಾಣಿಗಳ ಪ್ರದರ್ಶನ ಸ್ಪರ್ಧೆಯಲ್ಲಿ ಸಿಲುಕಿ, ಮುಧೋಳ ಹೌಂಡ್, ಸೈಬೀರಿಯನ್ ಹಸ್ಕಿ, ಗ್ರೇಟ್ ಡೆನ್, ಪೂಡ್ಲೀ, ಡಾಗೂ ಅರ್ಜೆಂಟೀನಾ, ರಾಜ ಪುಲಿಯಂ, ಪಿಟ್ ಬುಲ್, ಕಾಕರ್ ಸ್ಪ್ಯಾನಿಯಲ್, ಬಾಕ್ಸರ್, ಪಗ್, ಕೊಕ್ಕೊಪೋ, ಪ್ರೆಂಚ್ ಬುಲ್ ಡಾಗ್, ಓಲ್ಡ್ ಶೀಪ್ ಡಾಗ್, ಐರಿಷ್ ಸೆಟ್ಟರ್ ಬೀಗಲ್, ಡಚ್ ಶೆಪರ್ಡ್, ಜರ್ಮನ್ ಶೆಪರ್ಡ್, ಚೌ ಚೌ, ಗೋಲ್ಡನ್ ರಿಟ್ರೀವರ್, ಬಾರ್ಡರ್ ಕೋಲಿ, ಬರ್ಮೀಸ್ ಮೌಂಟೇನ್ ಡಾಗ್, ಲಾಸ್ ಅಪ್ಸೋ ವಿವಿಧ ತಳಿಗಳ ಶ್ವಾನಗಳು ಉತ್ತಮ ಪ್ರದರ್ಶನ ನೀಡಿ, ಪ್ರಾಣಿ ಪ್ರಿಯಯರ ಕಣ್ಮನ ಸೆಳೆಯಿತು.
ಕೆಲವು ಶ್ವಾನಗಳಿಗೆ ಪಿಂಕ್ ಮತ್ತು ಪರ್ಪಲ್ ಕಲರ್ ಬಟ್ಟೆಯನ್ನು ಧರಿಸಿ ಪ್ರದರ್ಶನ ನೀಡುವುದರ ಮೂಲಕ ಹೆಚ್ಚು ಗಮನ ಸೆಳೆದವು. ಪ್ರದರ್ಶನದಲ್ಲಿ ನೆರೆದಿದಂತಹ ಮಕ್ಕಳು ಶ್ವಾನಗಳ ಕಂಡು ತುಂಬಾ ಸಂತೋಷ ಪಟ್ಟರು.ಸಾಕು ಪ್ರಾಣಿಗಳ ಸ್ಪರ್ಧೆಯಲ್ಲಿ ಮೈಸೂರು ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು.
650 ತಳಿಯ ಶ್ವಾನಗಳ ಪ್ರದರ್ಶನ:ಈ ಬಾರಿಯ ದಸರಾದಲ್ಲಿ 650 ತಳಿಗಳು ಪ್ರದರ್ಶನದಲ್ಲಿ ನೋಂದಣಿಯಾಗಿವೆ. ಅದರಲ್ಲಿ 450 ತಳಿಗಳನ್ನು ಒಳಗೊಂಡಿದ್ದು, ವಿವಿಧ ತಳಿಯ ಶ್ವಾನಗಳು ಪ್ರದರ್ಶನ ನೀಡಿದವು.
ಪ್ರದರ್ಶನದಲ್ಲಿ ಪ್ರತಿ ತಳಿ ಶ್ವಾನಗಳಿಗೂ ಪ್ರತ್ಯೇಕ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿತ್ತು.ಮೈಸೂರಿನ ಡಾಗ್ ಸ್ಕ್ವಾಡ್ ನ ಪೊಲೀಸ್ ಶ್ವಾನಗಳು ಅತ್ಯುತ್ತಮ ಪ್ರದರ್ಶನವನ್ನು ನೀಡುವುದರ ಮೂಲಕ ಪ್ರೇಕ್ಷಕರನ್ನು ಗಮನ ಸೆಳೆಯಿತು.
ಸ್ಪರ್ಧೆಯಲ್ಲಿ ವಿಜೇತರಾದ ಶ್ವಾನಗಳ ಮಾಲೀಕರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಟ್ರೋಫಿಯೊಂದಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಬಹುಮಾನ ಪಡೆದ ಮಾಲೀಕರು ತಮ್ಮ ಕುಟುಂಬಸ್ಥರೊಂದಿಗೆ ಸಂತಸ ಹಂಚಿಕೊಂಡು, ಸೆಲ್ಫಿ ಕ್ಲಿಕ್ಕಿಸಿಕೊಂಡರು.ಪ್ರದರ್ಶನಕ್ಕೆ ಬಂದಿದ್ದ ಆಳೆತ್ತರಕ್ಕಿರುವ ಸಿಂಹ, ಹುಲಿಯಂತಿರುವ ಶ್ವಾನಗಳಿಂದ ಹಿಡಿದು ಸಣ್ಣ ಗಾತ್ರದ ನಾಯಿಗಳ ವೀಕ್ಷಣೆ ಮಾಡಿದರು.
ವಿವಿಧ ಜಾತಿಯ ಬೆಕ್ಕುಗಳು ಪ್ರದರ್ಶನದಲ್ಲಿ ಕಂಡವು. ಕೆಲ ಶ್ವಾನಗಳು ತಮ್ಮ ತುಂಟಾದ ಮೂಲಕ ಜನರಿಗೆ ಮುದ ನೀಡಿ ನೆರೆದಿದ್ದವರನ್ನು ರಂಜಿಸಿದವು.