ಸುಬ್ರಹ್ಮಣ್ಯದಲ್ಲಿ ಕನ್ನಡಪ್ರಭದ ಕಡಬ ತಾಲೂಕು ಚಿತ್ರಕಲಾ ಸ್ಪರ್ಧೆ
ಚಿತ್ರಕಲೆ ಎಂಬುದು ನಮ್ಮ ಆಲೋಚನೆ, ಕಲ್ಪನೆಯನ್ನು ಬಣ್ಣ, ರೇಖೆಗಳ ಮೂಲಕ ವ್ಯಕ್ತಪಡಿಸುವ ಮಾಧ್ಯಮ. ಅರಣ್ಯ ಮತ್ತು ವನ್ಯಜೀವಿ ಎಂಬ ವಿಷಯದಿಂದ ಈ ವಿಚಾರದಲ್ಲಿ ಮಕ್ಕಳಲ್ಲಿ ಆಲೋಚಿಸುವ ಗುಣ ಬೆಳೆಯಲು, ಅರಿವು ಮೂಡಲು ಕಾರಣವಾಗಲಿದೆ. ವಿಷಯದ ಬಗ್ಗೆ ಸೂಕ್ಷ್ಮತೆ, ಅಧ್ಯಯನ ನಡೆಸಿ ಭಾಗವಹಿಸುವುದು ಸೂಕ್ತ. ಅರಣ್ಯ, ಪರಿಸರದ ಬಗ್ಗೆ ಜವಾಬ್ದಾರಿ ಹೆಚ್ಚಿಸಲು ಕೂಡ ಈ ಕಾರ್ಯಕ್ರಮ ಪ್ರಯೋಜನವಾಗಲಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಅಪೂರ್ವ ಅಚ್ರಪಾಡಿ ಹೇಳಿದರು.
ಅರಣ್ಯ ವಿಚಾರದ ಚಿತ್ರಕಲಾ ಸ್ಪರ್ಧೆ ಮಕ್ಕಳಲ್ಲಿ ಅರಣ್ಯ, ಪರಿಸರ ಸಂರಕ್ಷಣೆ ಹಾಗೂ ಜಾಗೃತಿಗೆ ಪೂರಕವಾಗಲಿದೆ ಎಂದರು.ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ, ರೋಟರಿ ಕ್ಲಬ್ ಸಮಾಜಮುಖಿ ಕೆಲಸ ಮಾಡುತ್ತಿದೆ. ಜೊತೆಗೆ ಮಕ್ಕಳ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು ಪ್ರೋತ್ಸಾಹಿಸುತ್ತಿದ್ದೇವೆ. ಮಕ್ಕಳ ಬೆಳವಣಿಗೆ ಚಿತ್ರಕಲಾ ಸ್ಪರ್ಧೆಯಿಂದ ಸಾಧ್ಯವಾಗಲಿದೆ ಎಂದರು.
ಕನ್ನಡಪ್ರಭದ ಹಿರಿಯ ಪ್ರಧಾನ ವರದಿಗಾರ ಆತ್ಮಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ರಹ್ಮಣ್ಯ ವರದಿಗಾರ ಪ್ರಕಾಶ್ ಸುಬ್ರಹ್ಮಣ್ಯ ಸ್ವಾಗತಿಸಿದರು. ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ನಿರೂಪಿಸಿ ವಂದಿಸಿದರು. ಕನ್ನಡಪ್ರಭ ಸಿಬ್ಬಂದಿಗಳಾದ ದೀಕ್ಷಿತ್ ಸಹಕರಿಸಿದರು. ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ಮುಖ್ಯಶಿಕ್ಷಕಿ ನಂದಾ ಹರೀಶ್ ಬೆಳಗ್ಗೆ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿದರು. ಕರ್ನಾಟಕದ ಅರಣ್ಯ ಅಥವಾ ಕರ್ನಾಟಕ ವನ್ಯಜೀವಿ (ವರ್ಣಚಿತ್ರ ಸ್ಪರ್ಧೆ) ವಿಷಯದಲ್ಲಿ ಚಿತ್ರ ಸ್ಪರ್ಧೆ ನಡೆಯಿತು.ಬಾಕ್ಸ್---
4 ಮತ್ತು 5ನೇ ತರಗತಿ ವಿಭಾಗ:
6 ಮತ್ತು 7ನೇ ತರಗತಿ ವಿಭಾಗ: ಪ್ರಥಮ-ಷಷ್ಠಿ, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ದ್ವಿತೀಯ-ಅದ್ವಿತಿ ಎಸ್. ಶೆಟ್ಟಿ, ಸುಬ್ರಹ್ಮಣ್ಯ ಸರ್ಕಾರಿ ಪ್ರಾಥಮಿಕ ಶಾಲೆ, ತೃತೀಯ-ವಿಭಾ ಕೆ.ಎಸ್. ಸುಬ್ರಹ್ಮಣ್ಯ ಪ್ರಾಥಮಿಕ ಶಾಲೆ, ಸಮಾಧಾನಕರ ಬಹುಮಾನ-ಕುಶಿತ್ ಮಲ್ಲಾರ, ಕುಮಾರಸ್ವಾಮಿ ವಿದ್ಯಾಲಯ ಮತ್ತು ಶಾಶ್ವತ್ ವಿ.ಎ. ಸರಸ್ವತಿ ವಿದ್ಯಾಲಯ ಕಡಬ
ಪ್ರಥಮ-ಆದ್ಯಬಿ. ಕುಮಾರಸ್ವಾಮಿ ಶಾಲೆ, ದ್ವಿತೀಯ-ಅನನ್ಯ ಎಂ., ಎಸ್.ಎಸ್.ಹೈಸ್ಕೂಲ್, ತೃತೀಯ-ಆದ್ಯತಾ ಎಂ., ಕುಮಾರಸ್ವಾಮಿ ಸ್ಕೂಲ್, ಸಮಾಧಾನಕರ ಬಹುಮಾನ-ಪೂಜಾ, ಎಸ್.ಎಸ್.ಹೈಸ್ಕೂಲ್ ಮತ್ತು ನಿಖಿಲ್ ಕೆ., ಗೋಪಾಲಕೃಷ್ಣ ಹೈಸ್ಕೂಲ್, ಬಿಳಿನೆಲೆ.
ಮೂರು ವಿಭಾಗಗಳಲ್ಲಿ ಒಟ್ಟು 90 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.