ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಣ್ಣ ಸಮುದಾಯಗಳ ರಕ್ಷಣೆ ತಮ್ಮ ಕರ್ತವ್ಯ. ಕೊಡಗಿನ ಮೂಲನಿ ವಾಸಿ ಸಮುದಾಯವಾಗಿರುವ ಅರಮನೆಪಾಲೆ ಸಮುದಾಯ ಶಿಕ್ಷಣಕ್ಕೆ ಒತ್ತು ಕೊಡುವ ಮೂಲಕ ಸಮಗ್ರ ಅಭಿವೃದ್ಧಿ ಕಂಡುಕೊಳ್ಳಬೇಕು ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದ್ದಾರೆ.ಮೂರ್ನಾಡು ವಿದ್ಯಾಸಂಸ್ಥೆ ಕ್ರೀಡಾಂಗಣದಲ್ಲಿ ಇತ್ತೀಚೆಗೆ ನಡೆದ ಕೊಡಗು ಮೂಲ ನಿವಾಸಿ ಅರಮನೆಪಾಲೆ ಸಮಾಜದ ಹತ್ತನೇ ವರ್ಷದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣವೇ ಅಭಿವೃದ್ದಿಯ ಮೂಲವಾಗಿದೆ. ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಸಮುದಾಯ ಪರಸ್ಪರ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ಕರೆ ನೀಡಿದರು.ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜನಿಕಂಡ ಸಿ. ಮಹೇಶ್ ನಾಚಯ್ಯ ಮಾತನಾಡಿ, ಅರಮನೆಪಾಲೆ ಸಮುದಾಯ ಬಾಂಧವರಿಗೆ ಅಕಾಡೆಮಿಯಿಂದ ಮೂಲ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಅಗತ್ಯ ಪರಿಕರ ಮತ್ತು ಕ್ರೀಡಾಕೂಟಕ್ಕಾಗಿ ಅನುದಾನವನ್ನು ಅಕಾಡೆಮಿಯಿಂದ ಒದಗಿಸಿ ಕೊಡುವುದಾಗಿ ಹೇಳಿದರು.
ಲೆಫ್ಟಿನಂಟ್ ಕರ್ನಲ್ ಮುಲ್ಲೇರ ಎಸ್. ಕಾವೇರಪ್ಪ ಕ್ರೀಡಾಕೂಟಕ್ಕೆ ಶುಭಾಶಯ ಕೋರಿದರು.ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ. ಮೇಚಿರ ಸುಭಾಷ್ ನಾಣಯ್ಯ ಮಾತನಾಡಿ, ಅರಮನೆಪಾಲೆ ಸಮುದಾಯ ಕೊಡಗಿನ 21 ಮೂಲನಿವಾಸಿ ಸಮುದಾಯಗಳಲ್ಲಿ ಒಂದಾಗಿದ್ದು, ವರ್ಷಂಪ್ರತಿ ಕ್ರೀಡಾಕೂಟ ಆಯೋಜಿಸುತ್ತಿರುವುದು ವಿಶೇಷ ಎಂದರು.
ಅರಮನೆ ಪಾಲೆಯರ ದೇವಯ್ಯ, ಸಮಾಜದ ಪ್ರಧಾನ ಸಂಘಟಕ ಹಾಗೂ ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆ ಪ್ರಾಂಶುಪಾಲ ಮಂದಣ್ಣ ಪಿ.ಕೆ. ಮತ್ತಿತರರು ಪಾಲ್ಗೊಂಡರು.ಕೊಡಗು ಅರಮನೆ ಪಾಲೆ ಮೂಲ ನಿವಾಸಿಗಳ ಅಧ್ಯಕ್ಷ ಅರಮನೆ ಪಾಲೆಯರ ಜಿ. ಚೆನಿಯ್ಯ ಅಧ್ಯಕ್ಷತೆ ವಹಿಸಿದ್ದರು.
ಪುಟ್ಬಾಲ್ ಪಂದ್ಯಾಟಗಳಲ್ಲಿ ಪ್ರಥಮ ಸ್ಥಾನವನ್ನು ಕಂಡಿಮಕ್ಕಿ ತಂಡ, ದ್ವಿತೀಯ ಸ್ಥಾನವನ್ನುಕಕ್ಕಬೆ, ಕುಂಜಿಲ ತಂಡ, ಕಬ್ಬಡಿ ಪಂದ್ಯಾಟಗಳಲ್ಲಿ ಪ್ರಥಮ ಸ್ಥಾನವನ್ನು ಪೆರೂರು, ನಾಪೋಕ್ಲು ತಂಡ ದ್ವಿತೀಯ ಸ್ಥಾನ, ಮಾದಾಪುರ ತಂಡ ಮಹಿಳೆಯರ ಥ್ರೋ ಬಾಲ್ ಪ್ರಥಮ ಸ್ಥಾನ, ಕಂಡಿಮಕ್ಕಿ ತಂಡ ದ್ವಿತೀಯ ಸ್ಥಾನ, ಮಹಿಳೆಯರ ಹಗ್ಗ ಜಗ್ಗಾಟ ಪ್ರಥಮ ಸ್ಥಾನ ಚೆಯ್ಯಂಡಣ್ಣೆ ತಂಡ, ದ್ವಿತೀಯ ಸ್ಥಾನವನ್ನು ಪೆರೂರು, ನಾಪೋಕ್ಲು ತಂಡ ಪಡೆದುಕೊಂಡಿತು.
ಮಕ್ಕಳ ಕಾಳು ಹೆಕ್ಕುವುದು ಪ್ರಥಮ ಸ್ಥಾನ ಜಸ್ವೀನ್ ಮೂರ್ನಾಡು ಮತ್ತು ಗಗನ್ ಕಂಡೀಮಕ್ಕಿ ದ್ವಿತೀಯ ಸ್ಥಾನವನ್ನು ಭವನ್ ಪೆರೂರು ಮಾತು ಸಮಿತ್ ಬಾಳುಗೋಡು, ಬಾಲಕಿಯರ ಓಟದ ಸ್ಪರ್ಧೆ ಒಂದರಿಂದ ನಾಲ್ಕನೇ ತರಗತಿ ಪ್ರಥಮ ಚೈತ್ರ ಚೆಯ್ಯಂಡಣೆ, ದ್ವಿತೀಯ ಬೀಂದ್ಯ ಬಾಳುಗೋಡು, ಬಾಲಕರ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಸಮಂತ್ ಚೆಯ್ಯಂಡಣೆ, ದ್ವಿತೀಯ ಸ್ಥಾನ ರಂಜಿತ್ ಕಂಡಿಮಕ್ಕಿ, ಬಾಲಕರ ಓಟದ ಸ್ಪರ್ಧೆ 5-7ನೇ ತರಗತಿ ಪ್ರಥಮ, ತೇಜಸ್ ಹಾಕತೂರುದ್ವಿತೀಯ ರಿತೇಶ್ ಪಾಲೆಮಾಡು, ಬಾಲಕಿಯರ ಓಟದ ಸ್ಪರ್ದೆ 5-7 ನೇ ತರಗತಿ
ಪ್ರಥಮ, ಸಹನ ಪೆರೂರು ದ್ವಿತೀಯ ಮೋನಿಕ ಬಾಳುಗೋಡ್, ಬಾಲಕಿಯರ ಓಟದ ಸ್ಪರ್ಧೆ 8 ರಿಂದ 10 ತರಗತಿ ಪ್ರಥಮ ಸ್ಥಾನ ಸಿಂಚನ ಚೆಲವಾರ, ದ್ವೀತಿಯ ಸ್ಥಾನವನ್ನು ಯಶಸ್ವಿನಿ ಹಾಕತ್ತೂರು, ಬಾಲಕರ ಓಟದ ಸ್ಪರ್ಧೆ 8-10 ತರಗತಿ ಪ್ರಥಮ ಸ್ಥಾನ ಅಯ್ಯಪ್ಪ ಹಾಕತ್ತೂರು, ದ್ವೀತಿಯ ಸ್ಥಾನವನ್ನು ಪ್ರೀತಂ ಮಾದಾಪುರ ಪಡೆದುಕೊಂಡರು.ಮಹಿಳಾ ಮತ್ತು ಪುರುಷ ವಯಸ್ಕರ ಸ್ಪರ್ಧೆಗಳಲ್ಲಿ ಶಶಿ ಚೆಯ್ಯಂಡಣ್ಣೆ ಪ್ರಥಮ, ದ್ವಿತೀಯ ದೇವಕಿ ಚೆಯ್ಯಂಡಣೆ, ಪುರುಷರ ಸ್ಪರ್ಧೆಗಳಲ್ಲಿ ರಮೇಶ್ ಬಾಳುಗೋಡು ಪ್ರಥಮ ಸ್ಥಾನ, ರವಿ ಪೆರೂರು ದ್ವಿತೀಯ ಸ್ಥಾನ ಪಡೆದುಕೊಂಡರು.
ಕ್ರೀಡಾ ಸಮಿತಿ ಅಧ್ಯಕ್ಷ ಯತೀಶ್ ಕುಮಾರ್ ಚೆಯ್ಯಂಡಾಣೆ ಅಧ್ಯಕ್ಷತೆ ವಹಿಸಿದ್ದರು.ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ್, ಕಪಿಲ್ ಕುಮಾರ್ ದುಗ್ಗಳ, ದೈಹಿಕ ಶಿಕ್ಷಣ ಶಿಕ್ಷಕ ತೇಜಸ್ ಕೊಚನ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ದೈಹಿಕ ನಿರ್ದೇಶಕ ರಮೇಶ್, ಮೂರ್ನಾಡು ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಶ್ರೀನಿವಾಸ್, ನಾಗೇಶ್ ಮೂರ್ನಾಡು ಮುಂತಾದವರು ಭಾಗವಹಿಸಿದ್ದರು.
ಸಮಾಜದ ಕಾರ್ಯದರ್ಶಿ ದೇವಯ್ಯ ಹಾಕತೂರು, ಯತೀಶ್ ಬಿದ್ದಪ್ಪ ಅಧ್ಯಕ್ಷರು ಮರಣ ಧನ ಸಹಾಯ ನಿಧಿ, ಬಾಳುಗೋಡು, ರಘು ಹಾಕತೂರು ಕ್ರಿಕೆಟ್ ಪಂದ್ಯಗಳ ಕಾರ್ಯದರ್ಶಿ, ವಿವಿಧ ಗ್ರಾಮ ಸಮಿತಿ ಅಧ್ಯಕ್ಷರಾದ ಮುತ್ತಪ್ಪ ಪೆರೂರು, ಶಿವಪ್ಪ ಕಂಡಿಮಕಿ, ದೇವಯ್ಯ ಹಾಕತೂರು, ನಿಶಾನ್ ಮಾದಾಪುರ, ಪೂವಣ್ಣ ಚೆಲವಾರ, ಬೀನಾ ಆನಂದ ಚೆಯ್ಯಂಡಣ್ಣೆ, ಡಾಲು ಕುಂಜಿಲ್ಲಾ, ರಮೇಶ್ ನಾಗಬಾಣ್ಣೆ, ನಾಣಿ ಬಾಳುಗೋಡು ಮತ್ತಿತರರಿದ್ದರು.