ಜೀವದಿಂದ ಜೀವ ಉಳಿಸುವ ಜೀವ ಚೈತನ್ಯ ತುಂಬಿಸುವ ಅನೇಕ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ. ಮತ ಭೇದಗಳಿಲ್ಲದ ಅಸ್ಪೃಶ್ಯತೆ ಇಲ್ಲದ ಈ ದಾನದಿಂದ ಮೂರು ಜೀವದ ರಕ್ಷಣೆಯಾಗುತ್ತದೆ, ಇದು ಉತ್ತಮ ಸೇವಾ ಕಾರ್ಯ, ಎಂದು ಪಂಬದರ ಯಾನೆ ದೈವಾದಿಗರ ಸೇವಾ ಸಮಾಜ ಸಂಘ ಇದರ ಅಧ್ಯಕ್ಷ ಶ್ರೀ ಪುರುಷೋತ್ತಮ ಗೋಳಿಪಲ್ಕೆ ಹೇಳಿದರು.
ಮಂಗಳೂರು: ಜೀವದಿಂದ ಜೀವ ಉಳಿಸುವ ಜೀವ ಚೈತನ್ಯ ತುಂಬಿಸುವ ಅನೇಕ ದಾನಗಳಲ್ಲಿ ಶ್ರೇಷ್ಠದಾನ ರಕ್ತದಾನ. ಮತ ಭೇದಗಳಿಲ್ಲದ ಅಸ್ಪೃಶ್ಯತೆ ಇಲ್ಲದ ಈ ದಾನದಿಂದ ಮೂರು ಜೀವದ ರಕ್ಷಣೆಯಾಗುತ್ತದೆ, ಇದು ಉತ್ತಮ ಸೇವಾ ಕಾರ್ಯ, ಎಂದು ಪಂಬದರ ಯಾನೆ ದೈವಾದಿಗರ ಸೇವಾ ಸಮಾಜ ಸಂಘ ಇದರ ಅಧ್ಯಕ್ಷ ಶ್ರೀ ಪುರುಷೋತ್ತಮ ಗೋಳಿಪಲ್ಕೆ ಹೇಳಿದರು.
ತುಳುವ ಬೊಳ್ಳಿ ಅಮೃತಪಜ್ಜದ ಅಂಗವಾಗಿ ಪಂಬದರ ಅಭ್ಯುದಯ ಯುವಜನ ಸೇವಾ ಟ್ರಸ್ಟ್ ಇವರು ಭಾರತೀಯ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ಇವರ ಸಹಭಾಗಿತ್ವದೊಂದಿಗೆ ಪಂಬದರ ಯಾನೆ ದೈವಾದಿಗರ ಸಮಾಜ ಸಂಘ(ರಿ) ಇದರ ಸಹಕಾರದೊಂದಿಗೆ ಗಂಧಕಾಡು ಈಶ್ವರಾನಂದ ಕೃಪಾ ಸಮಾಜ ಭವನದಲ್ಲಿ ಆಯೋಜಿಸಿರುವ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರುಪ್ರಾಸ್ತಾವಿಕವಾಗಿ ಮಾತನಾಡಿದ ರೆಡ್ ಕ್ರಾಸ್ ಸಂಸ್ಥೆಯ ಪಬ್ಲಿಕ್ ರಿಲೇಶನ್ ಆಫೀಸರ್ ಅಮಿಷ ಡಿ ಅಜಿಲ ರಕ್ತದಾನದ ಮಹತ್ವವನ್ನು, ಮತ್ತು ರಕ್ತದಾನ ಕೊಡುವಲ್ಲಿ ಇರುವ ನಿಬಂಧನೆಗಳನ್ನು ಮತ್ತು ಇದರ ಪ್ರಯೋಜನವನ್ನು ವಿವರಿಸಿ, ಆಯೋಜಿಸಿದ ಸಂಘಟಕರನ್ನು ಶ್ಲಾಘಿಸಿ, ಪ್ರಮಾಣ ಪತ್ರವನ್ನು ನೀಡಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ದಯಾನಂದ ಜಿ ಕತ್ತಲ್ ಸಾರ್ ಇವರು "ಪಂಬದರ ಅಭ್ಯುದಯ ಯುವ ಜನ ಸೇವಾ ಟ್ರಸ್ಟ್ ಇದು ಗೈದಿರುವ ಉಚಿತ ಅಪಘಾತವಿಮೆ, ಆಯುಷ್ಮಾನ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಮಾಶಾಸನ ದೊರಕಿಸಿ ಕೊಡುವ ಸೇವೆ, ಅಶಕ್ತರಿಗೆ ಸಹಕಾರ ಇಂತಹ ಹಲವಾರು ಸಮಾಜಮುಖಿ ಸೇವಾ ಚಟುವಟಿಕೆಗೆ ಸಹಕರಿಸಿದ ಕೊಡುಗೈ ದಾನಿಗಳನ್ನು, ಸಂಘ-ಸಂಸ್ಥೆಗಳನ್ನು, ಸಮಾಜ ಸಂಘವನ್ನು ಸ್ಮರಿಸಿ, ರಕ್ತದಾನ ಶಿಬಿರ ಆಯೋಜನೆಗೆ ಸಹಕರಿಸಿದ ರೆಡ್ ಕ್ರಾಸ್ ಸಂಸ್ಥೆಯನ್ನು ಅಭಿನಂದಿಸಿದರು. ರೆವೆನ್ಯೂ ಇನ್ಸ್ಪೆಕ್ಟರ್ ಶ್ರೀ ರಾಜಕುಮಾರ್, ಒಕ್ಕೂಟ ಅಧ್ಯಕ್ಷೆ ಗೀತಾ ಗಂಧಕಾಡು, ಅಯ್ಯಪ್ಪ ಸೇವಾ ಸಮಿತಿ ಅಧ್ಯಕ್ಷ ಜಗದೀಶ್ ಸಾಲ್ಯಾನ್, ಅರ್ಚಕರಾದ ಮಹಾಬಲ ಗಂಧಕಾಡು, ಗಣೇಶ್ ಗುರುಸ್ವಾಮಿ, ಕಮಲಾಕ್ಷ ಗಂಧಕಾಡು, ಟ್ರಸ್ಟಿಗಳಾದ ಬಾಲಕೃಷ್ಣ ಕತ್ತಲ್ ಸಾರ್, ರಾಜೇಶ್ ಶಕ್ತಿನಗರ ಉಪಸ್ಥಿತರಿದ್ದರು. ಟ್ರಸ್ಟಿಗಳಾದ ಶ್ರೀ ಗೋಪಾಲ ಗೋಳಿಪಲ್ಕೆ ಸ್ವಾಗತಿಸಿದರು, ಕಿರಣ್ ಗಂಧಕಾಡು ಪ್ರಾರ್ಥಿಸಿದರು, ಕಾರ್ತಿಕ್ ಗಂಧಕಾಡು ನಿರೂಪಿಸಿದರು. ರಕ್ತದಾನಗೈದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.