ಪಾಂಡವಪುರ:
ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎನ್.ಚಲುವೇಗೌಡರು, ಬೆಂಗಳೂರು ನಗರ ವಿಶ್ವ ವಿಖ್ಯಾತಿಯಾಗಲು ನಾಡಪ್ರಭು ಕೆಂಪೇಗೌಡರೇ ಪ್ರಮುಖ ಕಾರಣ. ಇಡೀ ವಿಶ್ವವೇ ಬೆರಗಾಗುವಂತೆ ದೊಡ್ಡ ನಗರವನ್ನಾಗಿ ಬೆಂಗಳೂರನ್ನು ನಿರ್ಮಾಣ ಮಾಡಿದರು ಎಂದರು.
ಕೆಂಪೇಗೌಡರ ಆಡಳಿತ ಸುಧಾರಣಾ ಕ್ರಮಗಳು, ಅವರ ದೂರದರ್ಶಿತ್ವ ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದೆ. ವಿಶ್ವ ಪ್ರಸಿದ್ದಿ ಹೊಂದಿರುವ ಬೆಂಗಳೂರು ನಗರ ಕಾಂಕ್ರಿಟ್ ನಗರವಾಗಿ ಮಾರ್ಪಾಡಾಗುತ್ತಿದೆ ಎಂದರು.ಈ ವೇಳೆ ಸಂಘದ ಅಧ್ಯಕ್ಷ ಜನತಾಭಂಡಾರ ರಾಮಕೃಷ್ಣೇಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲಿ ಸ್ಥಾಪಿಸಿರುವ ಕೆಂಪೇಗೌಡ ಪತ್ತಿನ ಸಹಕಾರ ಸಂಘವನ್ನು ಶಾಶ್ವತವಾಗಿ ಉಳಿಸಲು ಸಂಘದ ಪ್ರತಿಯೊಬ್ಬ ನಿರ್ದೇಶಕರು ಹೆಚ್ಚು ಹೆಚ್ಚು ಷೇರುಗಳನ್ನು ಮಾಡಬೇಕಾಗಿದೆ ಎಂದರು.
ಕೆಂಪೇಗೌಡರ ಆದರ್ಶಗಳನ್ನು ಯುವ ಸಮೂಹ ಪಾಲಿಸಬೇಕು: ಎಂ.ಜಿ.ರಮೇಶ್
ತಾಲೂಕಿನ ಕಿರುಗಾವಲು ಹೋಬಳಿಯ ಮಾದಹಳ್ಳಿಯಲ್ಲಿ ಮಂಗಳವಾರ ಸಂಜೆ ಗ್ರಾಮಸ್ಥರು ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದಲ್ಲಿ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಆಡಳಿತದ ವೈಖರಿಯನ್ನು ಪ್ರಸ್ತುತದ ರಾಜಕಾರಣಿಗಳು ಅನುಸರಿಸಬೇಕಿದೆ ಎಂದರು.ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಪ್ರಾಮಾಣಿಕತೆ, ಆಡಳಿತ ದಕ್ಷತೆ ಹಾಗೂ ಜನಪರ ಸೇವಾ ಮನೋಭಾವದ ಆಡಳಿತದಿಂದಾಗಿ ನೂರಾರು ವರ್ಷಗಳು ಕಳೆದರೂ ಕೂಡ ಹೆಸರು ಶಾಶ್ವತವಾಗಿ ಉಳಿದಿದೆ. ಕೆಂಪೇಗೌಡರು ಕೇವಲ ಬೆಂಗಳೂರು ನಗರ ನಿರ್ಮಾಣಕ್ಕೆ ಮಾತ್ರ ಸೀಮಿತರಾಗದೆ, ಕೃಷಿ, ನೀರಾವರಿ, ವ್ಯಾಪಾರ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಒತ್ತು ನೀಡಿದ್ದರು ಎಂದು ಸ್ಮರಿಸಿದರು.