ಶಿವಕುಮಾರ ಕುಷ್ಟಗಿ ಗದಗ
ಈ ಕೆರೆ ನಿರ್ಮಾಣಕ್ಕಾಗಿ ಸರ್ಕಾರ 2017ರಲ್ಲಿಯೇ ₹ 10 ಕೋಟಿ ಮಂಜೂರಾತಿ ನೀಡಿ ಕೆಯುಐಡಿಎಫ್ಸಿ ಕಾರ್ಯಾದೇಶ ನೀಡಲಾಗಿದೆ. ನಂತರ ಕೆಯುಐಡಿಎಫ್ಸಿ ಹೆಚ್ಚುವರಿಯಾಗಿ ₹13.66 ಕೋಟಿ ಭೌತಿಕ ಕಾಮಗಾರಿ, ₹ 6.55 ಕೋಟಿ ಭೂ ಸ್ವಾಧೀನ ಪರಿಹಾರಕ್ಕಾಗಿ ಎಂದು ಸರ್ಕಾರಕ್ಕೆ ಮನವಿ ಮಾಡಿತ್ತು. ಇದಕ್ಕೂ ಒಪ್ಪಿಗೆ ಸಿಕ್ಕಿತ್ತು, ಇನ್ನುಳಿದ ₹ 3.55 ಕೋಟಿಯನ್ನು ನಗರಸಭೆ ಭರಿಸಬೇಕಿತ್ತು. ಎರಡೂ ಇಲಾಖೆಗಳು ಸೇರಿ ಸರ್ಕಾರದೊಂದಿಗೆ ಸಮನ್ವಯತೆ ಇಲ್ಲದೇ ನನೆಗುದಿಗೆ ಬಿದ್ದಿದೆ.
ಸರ್ಕಾರದ ಬಳಿಯೇ ಸ್ಪಷ್ಟತೆ ಇಲ್ಲ: ಅವಳಿ ನಗರದ ಕುಡಿವ ನೀರಿನ ಬವಣೆ ನೀಗಿಸುವ ಮಹತ್ವದ ಯೋಜನೆ ಉತ್ತಮವಾಗಿದೆ. ಇದಕ್ಕೆ ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ಹಣಕಾಸಿನ ಹೊಂದಾಣಿಕೆ ಇಲ್ಲದೇ ಯೋಜನೆ ಪ್ರಾರಂಭಿಸಲಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. 2019 ರಲ್ಲಿಯೇ ಯೋಜನೆ ಪ್ರಾರಂಭವಾಗಿದ್ದರೂ ಕೋವಿಡ್ ಹಿನ್ನೆಲೆ (2020) ಒಂದು ವರ್ಷ ಪೂರ್ಣ ಪ್ರಮಾಣದಲ್ಲಿ ಹಿನ್ನೆಡೆಯಾಗಿದೆ. 23-6-2021 ರಂದು ಗದಗ ಬೆಟಗೇರಿ ನಗರಸಭೆಯ ಅಧಿಕಾರಿಗಳು ತಮ್ಮ ಪಾಲಿನ ₹3.55 ಕೋಟಿ ಭರಿಸುವುದಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದರೂ ಸರ್ಕಾರಕ್ಕೆ ಈ ಯೋಜನೆಯ ಬಗ್ಗೆ ಯಾವುದೇ ಸ್ಪಷ್ಟತೆ ಬಾರದ ಹಿನ್ನೆಲೆಯಲ್ಲಿ 2021 ರಿಂದ 2024 ರವರೆಗೂ ಕೇವಲ ಪತ್ರ ವ್ಯವಹಾರದಲ್ಲಿಯೇ ಕಾಲಹರಣ ಮಾಡಿದ್ದು ಇದುವರೆಗೂ ಸರ್ಕಾರ, ಕೆಯುಐಡಿಎಫ್ಸಿ, ಹಣಕಾಸು ಇಲಾಖೆ, ಗದಗ ನಗರಸಭೆಯ ನಡುವೆ 35 ಕ್ಕೂ ಹೆಚ್ಚು ಬಾರಿ ಪತ್ರ ವ್ಯವಹಾರ ನಡೆದಿರುವುದೇ ಸಾಕ್ಷಿಯಾಗಿದೆ.ಯಾವ ಯೋಜನೆಯಡಿ ಕಾಮಗಾರಿ
ಕುಡಿವ ನೀರಿಗಾಗಿ ಕೆರೆ ನಿರ್ಮಾಣದಂತಹ ಮಹತ್ವದ ಕೆಲಸ ಪ್ರಾರಂಭಿಸುವ ಪೂರ್ವದಲ್ಲಿ ಅಗತ್ಯ ಸಿದ್ಧತೆಗಳಿಲ್ಲದೆ ಮಾಡಿರುವ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಇದು ಉತ್ತಮ ಉದಾಹರಣೆಯಾಗಿದೆ. ಯಾರೋ ಮಾಡಿದ ತಪ್ಪಿಗೆ ಇನ್ನಾರಿಗೋ ಶಿಕ್ಷೆ ಎನ್ನುವ ರೀತಿಯಲ್ಲಿ ತಮ್ಮ ಅಮೂಲ್ಯ ಬೆಲೆಬಾಳುವ ಜಮೀನು ಕಳೆದುಕೊಂಡಿರುವ ರೈತರು ಇತ್ತ ಹೊಲಕ್ಕೂ ಹೋಗಲು ಆಗದೇ ಅತ್ತ ಪರಿಹಾರದ ಹಣವೂ ಸಿಗದೇ ತತ್ತರಿಸಿ ಹೋಗಿದ್ದಾರೆ.
ಯಾರೇ ತಪ್ಪು ಮಾಡಲಿ, ಯಾರೇ ಗೊಂದಲ ಸೃಷ್ಟಿ ಮಾಡಲಿ, ವಾಸ್ತವದಲ್ಲಿ ನಮ್ಮ ಜಮೀನು ಪಡೆದುಕೊಂಡು 8 ವರ್ಷಗಳೇ ಕಳೆದಿದೆ,ಇದುವರೆಗೂ ಒಂದು ಪೈಸಾ ಪರಿಹಾರ ಬಂದಿಲ್ಲ, ಜಿಲ್ಲಾಡಳಿತ, ಸರ್ಕಾರ ಇದೇ ರೀತಿಯಲ್ಲಿ ನಿರ್ಲಕ್ಷ್ಯ ಮಾಡಿದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಅನಿವಾರ್ಯವಾಗುತ್ತದೆ ಎಂದು 48 ಎಕರೆ ಜಮೀನು ಕಳೆದುಕೊಂಡಿರುವ 10 ಜನ ರೈತರು ತಿಳಿಸಿದ್ದಾರೆ.