ಮಕ್ಕಳಿಗೆ ದೇಶದ ಸಂಸ್ಕೃತಿ ಕಲಿಸಿಕೊಡಲು ಪರಶುರಾಮಪ್ಪ ಕರೆ

KannadaprabhaNewsNetwork |  
Published : Dec 23, 2024, 01:05 AM IST
ಆರಾಧನಾ ಅಕಾಡಮಿ ವತಿಯಿಂದ ಆರಾಧನೋತ್ಸವ 2.0 ಕಾರ್ಯಕ್ರಮ  | Kannada Prabha

ಸಾರಾಂಶ

ತರೀಕೆರೆ, ಮಕ್ಕಳಿಗೆ ದೇಶದ ಸಂಸ್ಕೃತಿ ಕಲಿಸಿಕೊಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಎಚ್.ಎ. ಹೇಳಿದ್ದಾರೆ.ಪಟ್ಟಣದ ಕೋಡಿಕ್ಯಾಂಪ್ ಆರಾಧನಾ ಅಕಾಡೆಮಿಯಿಂದ ಆರಾಧನಾ ಶಾಲೆ ಆವರಣದಲ್ಲಿ ನಡೆದ ಆರಾಧನೋತ್ಸವ-20 ಶಾಲೆ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಶಾಲಾ ತರಗತಿಗಳಲ್ಲಿ ಮಕ್ಕಳ ಭವಿಷ್ಯ ರೂಪಿತವಾಗುತ್ತದೆ. ಮಕ್ಕಳ ಮಾತುಗಳನ್ನು ಕೇಳಲು ಚಂದ, ಇದರಲ್ಲಿ ಶಿಕ್ಷಕರ ಪಾತ್ರವೂ ಇರುತ್ತದೆ. ಮಕ್ಕಳನ್ನು ಅಕ್ಷರಸ್ತರನ್ನಾಗಿ ಮಾಡುವುದಷ್ಟೇ ಅಲ್ಲ, ಮಕ್ಕಳಿಗೆ ಸದ್ಗುಣಗಳನ್ನು ಕಲಿಸಬೇಕು. ಮಕ್ಕಳು ಮೊಬೈಲ್ ನಿಂದ ದೂರ ಇರಬೇಕು. ಮಕ್ಕಳ ಪ್ರತಿಭೆ ಹೊರತೆಗೆಯಲು ವಿದ್ಯಾರ್ಥಿ ಜೀವನ ಒಂದು ಉತ್ತಮ ಅವಕಾಶ. ಶಾಲೆ ಉತ್ತಮ ಪರಿಸರವನ್ನು ಹೊಂದಿದೆ ಎಂದು ಹೇಳಿದರು.

ಆರಾಧನಾ ಅಕಾಡಮಿಯಿಂದ ಆರಾಧನೋತ್ಸವ 2.0 ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಮಕ್ಕಳಿಗೆ ದೇಶದ ಸಂಸ್ಕೃತಿ ಕಲಿಸಿಕೊಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಎಚ್.ಎ. ಹೇಳಿದ್ದಾರೆ.ಪಟ್ಟಣದ ಕೋಡಿಕ್ಯಾಂಪ್ ಆರಾಧನಾ ಅಕಾಡೆಮಿಯಿಂದ ಆರಾಧನಾ ಶಾಲೆ ಆವರಣದಲ್ಲಿ ನಡೆದ ಆರಾಧನೋತ್ಸವ-20 ಶಾಲೆ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಶಾಲಾ ತರಗತಿಗಳಲ್ಲಿ ಮಕ್ಕಳ ಭವಿಷ್ಯ ರೂಪಿತವಾಗುತ್ತದೆ. ಮಕ್ಕಳ ಮಾತುಗಳನ್ನು ಕೇಳಲು ಚಂದ, ಇದರಲ್ಲಿ ಶಿಕ್ಷಕರ ಪಾತ್ರವೂ ಇರುತ್ತದೆ. ಮಕ್ಕಳನ್ನು ಅಕ್ಷರಸ್ತರನ್ನಾಗಿ ಮಾಡುವುದಷ್ಟೇ ಅಲ್ಲ, ಮಕ್ಕಳಿಗೆ ಸದ್ಗುಣಗಳನ್ನು ಕಲಿಸಬೇಕು. ಮಕ್ಕಳು ಮೊಬೈಲ್ ನಿಂದ ದೂರ ಇರಬೇಕು. ಮಕ್ಕಳ ಪ್ರತಿಭೆ ಹೊರತೆಗೆಯಲು ವಿದ್ಯಾರ್ಥಿ ಜೀವನ ಒಂದು ಉತ್ತಮ ಅವಕಾಶ. ಶಾಲೆ ಉತ್ತಮ ಪರಿಸರವನ್ನು ಹೊಂದಿದೆ ಎಂದು ಹೇಳಿದರು.

ಬೆಂಗಳೂರು ಪ್ರವೇನ್ ಷಿಯಲ್ ಸುಪೀರಿಯರ್, ದ ಪ್ರಿಶಿಯಸ್ ಬ್ಲಡ್ ಎಜುಕೇಶನ್ ಸೊಸೈಟಿ ರೆವರೆಂಡ್ ಸಿಸ್ಟರ್ ಮಿನಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಆರಾಧನಾ ಶಾಲೆ ಬೆಳೆದು ಬಂದ ದಾರಿ ಹಾಗೂ ಈ ಸಂಸ್ಥೆಯ ಪ್ರಗತಿ ಉದ್ದೇಶಿಸಿ ಮಾತನಾಡಿದರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ರೆವೆರೆಂಡ್ ಫಾದರ್ ಸುಪ್ರೀತ್ ಮಕ್ಕಳ ಪ್ರಗತಿಯಲ್ಲಿ ಶಿಕ್ಷಕರು ಮತ್ತು ಪೋಷಕರ ಪಾತ್ರದ ಬಗ್ಗೆ ತಿಳಿಸಿ ಹೇಳಿದರು.

ರಂಗೆನಹಳ್ಳಿ ಚರ್ಚಿನ ಧರ್ಮ ಗುರು ರೆವರೆಂಡ್ ಫಾದರ್ ಜಾರ್ಜ್ ಫರ್ನಾಂಡಿಸ್ , ಪತ್ರಕರ್ತ ಅನಂತ್ ನಾಡಿಗ್, ಪುರಸಭಾ ಸದಸ್ಯ ಅನಿಲ್, ಶಾಲೆಯ ಹಳೆ ವಿದ್ಯಾಥಿ ಯೋಗೇಶ್, ಆರಾಧನ ಶಾಲೆ ಪ್ರಾಂಶುಪಾಲ ರೆವರೆಂಡ್ ಸಿಸ್ಟರ್ ಮಿನಿ ಪಲ್ಲಿ ಪಾಡನ್ ಹಾಗೂ ಉಪ ಪ್ರಾಂಶುಪಾಲ ಡಾ. ಸಿಸ್ಟರ್ ಮೋಕ್ಷ ಉಪಸ್ಥಿತರಿದ್ದರು. 2023 -24 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ನಂದನ, ಚಂದನ, ಭಾವನ ಅವರಿಗೆ ಬಹುಮಾನ ನೀಡಿ ಗೌರವಿಸಿದರು. ಲಕ್ಕವಳ್ಳಿ ಚರ್ಚಿನ ಧರ್ಮ ಗುರು ರೆವರೆಂಡ್ ಫಾದರ್ ಸುಪ್ರೀತ್ ಮೆನೇಜಸ್ ಮಾತನಾಡಿದರು. ರೆವರೆoಡ್ ಸಿಸ್ಟರ್ ಮಿನಿ ಪಲ್ಲಿ ಪಾಡನ್, ಶಾಲಾ ಮಕ್ಕಳಾದ ಮಾಹಿನ್, ಪ್ರೀತಮ್ , ಮಂಜುಳ ಇದ್ದರು.

22ಕೆಟಿಆರ್.ಕೆ.1ಃ

ತರೀಕೆರೆಯಲ್ಲಿ ಆರಾಧನಾ ಅಕಾಡಮಿಯಿಂದ ಆರಾಧನೋತ್ಸವ 2.0, ಶಾಲಾ ವಾರ್ಷಿಕೋತ್ಸವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಎಚ್.ಎ. ಪ್ರಾಂಶುಪಾಲರಾದ ಸಿಸ್ಟರ್ ಮಿನಿ ಪಲ್ಲಿ ಪಾಡನ್, ಪುರಸಭೆ ಸದಸ್ಯ ಅನಿಲ್ ಮೆನೆಜಿಸ್, ರೆವರೆಂಡ್ ಸಿಸ್ಟರ್ ಮಿನಿ ಮತ್ತಿತರರು ಇ

ದ್ದರು.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?