ಕ್ರೀಡೆ ಜೊತೆ ಸಮಾಜಮುಖಿ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ: ರೂಪಾಲಿ ನಾಯ್ಕ

KannadaprabhaNewsNetwork |  
Published : Mar 26, 2026, 02:15 AM IST
 | Kannada Prabha

ಸಾರಾಂಶ

ದೇಶದ ಶಕ್ತಿಯಾಗಿರುವ ಯುವಕರು ಕ್ರೀಡೆಯ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು.

ಪಡ್ತಿ ಪ್ರೀಮಿಯರ್ ಲೀಗ್ ಉದ್ಘಾಟನೆ ಮಾಡಿದ ಮಾಜಿ ಶಾಸಕಿ

ಕನ್ನಡಪ್ರಭ ವಾರ್ತೆ ಕಾರವಾರ

ದೇಶದ ಶಕ್ತಿಯಾಗಿರುವ ಯುವಕರು ಕ್ರೀಡೆಯ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಇಂತಹ ಕ್ರೀಡಾಕೂಟಗಳು ಕ್ರೀಡಾಪಟುಗಳ ಉತ್ತಮ ಭವಿಷ್ಯಕ್ಕೆ ಪೂರಕವಾಗಿವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಕರೆ ನೀಡಿದರು.ಕಾರವಾರದ ಬಾಡ ಚಂದ್ರಾದೇವಿ ಮೈದಾನದಲ್ಲಿ ಬುಧವಾರ ತಾಲೂಕಿನ ಪಡ್ತಿ ಸಮಾಜದ ಪಡ್ತಿ ಸಮಾಜ ಪ್ರೀಮಿಯರ್‌ ಲೀಗ್‌‌(ಪಿಪಿಎಲ್) ಸೀಜನ್ 3 ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.ಇಂತಹ ಕ್ರೀಡಾಕೂಟಗಳು ಯುವ ಕ್ರೀಡಾಪಟುಗಳ ಪ್ರತಿಭೆಗೆ ಸೂಕ್ತ ವೇದಿಕೆ ಒದಗಿಸುತ್ತವೆ. ಉದಯೋನ್ಮುಖ ಕ್ರೀಡಾಪಟುಗಳಿಗೆ ಉತ್ತೇಜನ ಒದಗಿಸುತ್ತದೆ. ಯುವಕರು ದೇಶದ ಪ್ರಬಲ ಶಕ್ತಿಯಾಗಿದ್ದು, ಕ್ರೀಡೆಯ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ತಿಳಿಸಿದರು.ಈ ಪಂದ್ಯಾವಳಿ ಯಶಸ್ವಿಯಾಗಿ ನಡೆಯಲಿ, ಎಲ್ಲ ತಂಡಗಳಿಂದ ಉತ್ತಮ ಪ್ರದರ್ಶನ ಹೊರಬರಲಿ ಎಂದು ಎಲ್ಲ ತಂಡಗಳಿಗೆ ರೂಪಾಲಿ ಎಸ್.ನಾಯ್ಕ ಶುಭ ಕೋರಿದರು. ಈ ವೇಳೆ ಯುವ ನಾಯಕ ಪರ್ಬತ್ ನಾಯ್ಕ ಇದ್ದರು.ಪಂದ್ಯಾವಳಿ ಸಮಿತಿಯ ಅಧ್ಯಕ್ಷ ಸತೀಶ್ ತಳೇಕರ ಅಧ್ಯಕ್ಷತೆ ವಹಿಸಿದ್ದರು. ಪಡ್ತಿ ಸಮಾಜದ ಪ್ರಮುಖರಾದ ಸಂದೀಪ್ ತಳೇಕರ, ಗಿರೀಶ ಕೊಠಾರಕರ, ನರೇಶ್ ತಳೇಕರ, ಕರುಣಾಕರ ತಳೇಕರ, ಮುರಲಿ ಗೋವೆಕರ, ಸಂತೋಷ ಗೋವೆಕರ್, ಯುವ ನಾಯಕ ಪರ್ಬತ್ ಎಸ್ ನಾಯ್ಕ, ಕ್ರೀಡಾ ಪಟುಗಳು, ಪ್ರೋತ್ಸಾಹಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.ಬ್ಯಾಟಿಂಗ್ ಮೂಲಕ ಪಂದ್ಯಾವಳಿಗೆ ಚಾಲನೆ

ಉದ್ಘಾಟನಾ ಸಮಾರಂಭದಲ್ಲಿ ರೂಪಾಲಿ ಎಸ್.ನಾಯ್ಕ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ರೂಪಾಲಿ ಎಸ್. ನಾಯ್ಕ ಬ್ಯಾಟ್ ಹಿಡಿದು ಕ್ರೀಸ್‌ಗೆ ಇಳಿದು ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದರು. ಕ್ರಿಕೆಟ್ ಪಂದ್ಯಾವಳಿ ಸಂಘಟಿಸಿದ ಬಗ್ಗೆ ಸಂಘಟಕರನ್ನು ಪ್ರಶಂಸಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಗ್ರ ಅಭಿವೃದ್ಧಿಗೆ ₹೧೪.೮೨ ಕೋಟಿ ಬಜೆಟ್ ಮಂಡನೆ
ಸ್ಮಶಾನಕ್ಕೆ ಭೂಮಿ, ದಾರಿ ಸಮಸ್ಯೆ ಶೀಘ್ರ ಇತ್ಯರ್ಥಕ್ಕೆ ಸೂಚನೆ