ಕನ್ನಡಪ್ರಭ ವಾರ್ತೆ ಮಂಡ್ಯ
ತಾಲೂಕಿನ ವಿ.ಸಿ.ಫಾರ್ಮ್ ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕ್ರೀಡಾಂಗಣದಲ್ಲಿ ಅಮೆಚೂರ್ ಕಬಡ್ಡಿ ಅಸೋಸಿಯೇಷನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಾಲ್ಕು ದಿನಗಳ ಕಾಲ ನಡೆಯುವ ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಕೆ.ಎಸ್.ಪುಟ್ಟಣ್ಣಯ್ಯ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕ್ರೀಡಾಗಳಾಗಲಿ ಸೋಲು ಗೆಲುವು ಸಹಜ. ಆದರೆ, ಭಾಗವಹಿಸುವಿಕೆ ಮುಖ್ಯ. ಅದೇ ರೀತಿ ಪುಟ್ಟಣ್ಣಯ್ಯ ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಿಂದಲೂ ತಲಾ ಎರಡೆರಡು ತಂಡಗಳು ಪಂದ್ಯಾವಳಿಗೆ ಭಾಗವಹಿಸಲು ಬಂದಿವೆ. ನಾವು ನೀಡುವ ಆತಿಥ್ಯವನ್ನು ಸ್ವೀಕರಿಸಿ ಗೆದ್ದವರು ಬಹುಮಾನ ಪಡೆದು ತೆರಳಬಹುದು. ಸೋತವರೂ ಸಹ ಒಂದು ಇಲ್ಲಿನ ಅನುಭವವನ್ನು ಹೊತ್ತು ತೆರಳುವಂತೆ ಸಲಹೆ ನೀಡಿದರು.
ಕ್ರೀಡಾ ಜ್ಯೋತಿ ಸ್ವೀಕರಿಸಿದ ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ ಮಾತನಾಡಿ, ಶಾಸಕರಾಗಿದ್ದ ಪುಟ್ಟಣ್ಣಯ್ಯ ಅವರು ಸ್ವತಃ ಕಬಡ್ಡಿ ಆಟಗಾರರಾಗಿದ್ದರು. ಅವರು ನಮ್ಮೂರಿನಲ್ಲೇ ಹಲವು ಪಂದ್ಯಾವಳಿಗಳನ್ನು ನಡೆಸಿದ್ದರು. ಕಬಡ್ಡಿ ಅವರ ಅಚ್ಚುಮೆಚ್ಚಿನ ಆಟವಾಗಿದೆ. ಅವರೂ ಸಹ ಆಟಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎಂದು ಅಂದಿನ ನೆನಪುಗಳನ್ನು ಮೆಲುಕು ಹಾಕಿದರು.ಬಾಲಕ ಮತ್ತು ಬಾಲಕಿಯರ ತಲಾ ಎರಡು ತಂಡಗಳು ಸೇರಿ ಒಟ್ಟು 62 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಹಗಲು ಮತ್ತು ಹೊನಲು ಬೆಳಕಿನ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಪಂದ್ಯಾವಳಿ ಉದ್ಘಾಟನೆಗೂ ಮುನ್ನ ತಾಲೂಕಿನ ಮಲ್ಲನಾಯಕನಕಟ್ಟೆ ಗ್ರಾಮದಿಂದ ವಿ.ಸಿ.ಫಾರ್ಮ್ ಕೃಷಿ ವಿವಿ ಕ್ರೀಡಾಂಗಣದವರೆಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಅತಿಥಿಗಳನ್ನು ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಶಾಲಾ ಮಕ್ಕಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಪಂದ್ಯಾವಳಿ ಅಂಗವಾಗಿ ಹೊಳಲು, ಮಲ್ಲನಾಯಕನಕಟ್ಟೆ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮದ ಮುಖ್ಯರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು.