ಕನ್ನಡಪ್ರಭ ವಾರ್ತೆ ಸರಗೂರು
ಪಟ್ಟಣದ ಶ್ರೀ ಜಯಚಾಮರಾಜೇಂದ್ರ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸರಗೂರು ತಾಲೂಕು ಹಾಗೂ ಎಚ್.ಡಿ. ಕೋಟೆ ತಾಲೂಕು ಸಮ್ಮುಖದಲ್ಲಿ ಸಂಘ ಚಾಲಕ್ ಶ್ರೀವತ್ಸ, ಕರ್ನಾಟಕ ದಕ್ಷಿಣ ಪ್ರಾಂತ ಕಾಲೇಜು ವಿದ್ಯಾರ್ಥಿ ಪ್ರಮುಖ ಮುಖ್ಯ ಭಾಷಣಕಾರ ಉಮೇಶ್ ಹಾಗೂ ತಾಲೂಕಿನ ಎಲ್ಲಾ ಸ್ವಯಂ ಸೇವಕರು, ಸಂಘದ ಹಿತೈಷಿಗಳು ಮಾತೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಉಮೇಶ್ ಅವರು ಸಂಘ ಪ್ರಾರಂಭವಾದ ಹಿನ್ನೆಲೆ ಕುರಿತು ಮಾತನಾಡಿ, ದೇಶದ ಅತಿ ದೊಡ್ಡ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಲ್ಲಾ ಗ್ರಾಮದ ಮನೆಗಳಿಗೆ ಸಂಘದ ವಿಚಾರ ಹಾಗೂ ದೇಶ ಸೇವೆಗೆ ಜಾತಿ ಭೇದ ಮೇಲು ಕೀಳುಗಳನ್ನು ತೊಡೆದು ಭಾರತದ ಏಳಿಗೆಗಾಗಿ ಎಲ್ಲರೂ ಸಂಘಟಿತರಾಗಬೇಕು ಎಂದರು.ಸಂಘದ ನೂರನೇ ವರ್ಷದ ಪ್ರಯುಕ್ತ ಪಂಚ ಪರಿವರ್ತನೆಯ ನೂತನ ಕಾರ್ಯವನ್ನು ಪಂಚಬಿಂದುಗಳಾದ ಪರಿಸರ ಸಂರಕ್ಷಣೆ, ಕುಟುಂಬ ಪ್ರಬೋಧನ, ಸಾಮಾಜಿಕ ಸಾಮರಸ್ಯ, ಸ್ವದೇಶಿ ಜಾಗರಣ ಹಾಗೂ ನಾಗರೀಕ ಶಿಷ್ಟಾಚಾರ ಈ ವಿಷಯಗಳನ್ನು ಸಮಾಜದೊಳಗೆ ಎಲ್ಲರೂ ಒಗ್ಗಟ್ಟಾಗಿ ಸೇರಿ ಕಾರ್ಯ ನಿರ್ವಹಿಸಬೇಕು ಹಾಗೂ ದೇಶವನ್ನು ಪರಮ ವೈಭವಕ್ಕೆ ಕೊಂಡೊಯ್ಯುವಲ್ಲಿ ನಾವೆಲ್ಲರೂ ಸಂಘಟಿತರಾಗಿ ಕಾರ್ಯನಿರ್ವಹಿಸಬೇಕು ಎಂದರು.
ಈ ವೇಳೆ ರಮೇಶ್, ಮೋಹನ್, ರಾಜು, ಶಿವರಾಜು, ನೂರಾಳಸ್ವಾಮಿ, ಶ್ರೀನಾಥ್, ನಾಗರಾಜು, ಮಹೇಶ, ಚೆನ್ನಪ್ಪ, ಹರೀಂದ್ರ, ಪೂರ್ಣೇಶ್, ಗುರುಸ್ವಾಮಿ, ನವೀನ್, ನಾಗೇಶ್, ರವಿ, ಕಿರಣ್, ಮಹದೇವ, ಅಭಿ ಮೊದಲಾದವರು ಇದ್ದರು.