ಕನ್ನಡಪ್ರಭ ವಾರ್ತೆ ಮೈಸೂರು
ಶಿವರಾತ್ರೀಶ್ವರನಗರದಲ್ಲಿರುವ ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನಲ್ಲಿ ಶುಕ್ರವಾರದಿಂದ ಕೆಸಿಐಎಪಿಎಂ ಸಹಯೋಗದಲ್ಲಿ ಆಯೋಜಿಸಲಾಗಿರುವ 3 ದಿನಗಳ ರಾಜ್ಯ ಮಟ್ಟದ ಪೆಥಾಲಜಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಯಕೃತ್ತು ಅಥವಾ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗಳ ಯಶಸ್ಸಿನ ಪ್ರಶಂಸೆ ಶಸ್ತ್ರಚಿಕಿತ್ಸಕರಿಗೆ ಸಿಗುತ್ತದೆ. ಆದರೆ, ಪ್ರಯೋಗಾಲಯದಲ್ಲಿ ಸೂಕ್ಷ್ಮದರ್ಶಕದ ಮುಂದೆ ಕುಳಿತು ನಿಖರ ವರದಿ ನೀಡುವ ಪೆಥಾಲಜಿಸ್ಟ್ ಗಳ ಶ್ರಮ ತೆರೆಯಮರೆಯಲ್ಲೇ ಉಳಿದು ಬಿಡುತ್ತದೆ ಎಂದು ಹೇಳಿದರು.
ವೈದ್ಯಕೀಯ ರಂಗದಲ್ಲಿ ಮೊದಲು ಸಂಪೂರ್ಣವಾಗಿ ವೈದ್ಯರ ಕ್ಲಿನಿಕಲ್ ಜ್ಞಾನ ಮತ್ತು ರೋಗಲಕ್ಷಣಗಳ ಅವಲೋಕನದ ಮೇಲಿದ್ದ ಆಧಾರವಾಗಿತ್ತು. ನಂತರ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಗಳಂತಹ ವೈದ್ಯಕೀಯ ಚಿತ್ರಣ ತಂತ್ರಜ್ಞಾನಗಳ ಆಗಮನವಾಯಿತು. ಪ್ರಸ್ತುತ ನಾವು ಕೃತಕ ಬುದ್ಧಿಮತ್ತೆ (ಎಐ) ಮತ್ತು ನಿಖರ ವೈದ್ಯಕೀಯ ಯುಗಕ್ಕೆ ಕಾಲಿಟ್ಟಿದ್ದು, ಇದು ರೋಗನಿರ್ಣಯವನ್ನು ಇನ್ನಷ್ಟು ವೇಗ ಹಾಗೂ ನಿಖರಗೊಳಿಸಲಿದೆ ಎಂದರು.ಜೆಎಸ್‌ಎಸ್ ಆಸ್ಪತ್ರೆಯಲ್ಲಿ ನೂತನವಾಗಿ ಟಿಷ್ಯೂ ಬ್ಯಾಂಕ್ ಸ್ಥಾಪಿಸಲಾಗಿದೆ. ಕರ್ನಾಟಕದಲ್ಲೇ ಇಂತಹ ಸೌಲಭ್ಯ ಹೊಂದಿರುವ ಮೊದಲ ಕೇಂದ್ರಗಳಲ್ಲಿ ಇದು ಒಂದಾಗಿದ್ದು, ಯುವ ಪಾಥಾಲಜಿಸ್ಟ್ ಗಳು ಅಂಗಾಂಶ ಮಾದರಿಗಳನ್ನು ಬಳಸಿಕೊಂಡು ಭವಿಷ್ಯದ ವೈದ್ಯಕೀಯ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಲು ಇದು ದೊಡ್ಡ ವೇದಿಕೆಯಾಗಲಿದೆ ಎಂದು ಅವರು ತಿಳಿಸಿದರು.