ಧರ್ಮದೊಂದಿಗೆ ದೇಶಾಭಿಮಾನ ಅಗತ್ಯ

KannadaprabhaNewsNetwork |  
Published : May 10, 2025, 01:05 AM IST
ಯಮಕನಮರಡಿ | Kannada Prabha

ಸಾರಾಂಶ

ಪರಧರ್ಮ ಸಹಿಷ್ಣುತೆ ಕಾಪಾಡಿಕೊಂಡು ಜಾತಿ, ಮತ, ಪಂಥ, ಭೇದಗಳನ್ನು ಅಳಿಸಿ ಬದುಕು ಸುಂದರವಾಗಿಸುವತ್ತ ಎಲ್ಲರೂ ನಡೆಯಬೇಕು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಉಳ್ಳಾಗಡ್ಡಿ-ಖಾನಾಪೂರ ಗ್ರಾಮ ಉಳ್ಳಾಗಡ್ಡಿಯಷ್ಟೆ ಇರದೇ ದೊಡ್ಡ ಕುಂಬಳಕಾಯಿ ಗಾತ್ರದಲ್ಲಿ ಜನರ ಭಕ್ತಿ, ಧರ್ಮದಲ್ಲಿ ವೈಶಿಷ್ಠತೆ ಹೊಂದಿದೆ. ಜಾಗೃತ ತಾಣವಾದ ಶ್ರೀಮಾಟ ಬಸವಣ್ಣ ದೇವರ ಕ್ಷೇತ್ರ ಪವಿತ್ರದ್ದಾಗಿದೆ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

ಉಳ್ಳಾಗಡ್ಡಿ-ಖಾನಾಪೂರ ಗ್ರಾಮದ ಶ್ರೀ ಮಾಟ ಬಸವಣ್ಣ ದೇವರ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜಾತಿ-ಮತ ಪಂಥಗಳಿಂದ ಮುಕ್ತವಾಗಿ ಬದುಕುವ ಉದ್ದೇಶಗಳಿಂದ ಜಾತ್ರೆಗಳು ನಡೆಯುತ್ತಿವೆ. ಬದುಕು ಮತ್ತು ದೇಶವನ್ನು ಉಚ್ಚಾಯ ಸ್ಥಿತಿಯತ್ತ ಕೊಂಡಯ್ಯಬೇಕಾಗಿದೆ. ಈ ನಿಟ್ಟಿನಲ್ಲಿ ಧರ್ಮದೊಂದಿಗೆ ದೇಶಾಭಿಮಾನ ಅಗತ್ಯವಾಗಿದೆ. ಪರಧರ್ಮ ಸಹಿಷ್ಣುತೆ ಕಾಪಾಡಿಕೊಂಡು ಜಾತಿ, ಮತ, ಪಂಥ, ಭೇದಗಳನ್ನು ಅಳಿಸಿ ಬದುಕು ಸುಂದರವಾಗಿಸುವತ್ತ ಎಲ್ಲರೂ ನಡೆಯಬೇಕು. ಸಿದ್ದೇಶ್ವರ ಶ್ರೀಗಳು ಗಾತ್ರದಲ್ಲಿ ದೊಡ್ಡವರಿದಂತೆ ಹೃದಯವಂತಿಕೆ ಹಾಗೂ ಜ್ಞಾನದಲ್ಲಿಯೂ ದೊಡ್ಡವರು. ಅವರ ಕೃಪಾಶಿರ್ವಾದ ಹಾಗೂ ನೂಲದ ಶ್ರೀಗಳ ಮಾರ್ಗದರ್ಶನದಲ್ಲಿ ಇಂಥ ಧರ್ಮಾಚರಣೆ ವಿಶೇಷತೆ ಮೂಡಿಸಿದ್ದು. ಜಾಗೃತೆ ಕಾರ್ಯ ನಿತ್ಯ ನಿರಂತವಾಗಿ ನಡೆಯಲಿ ಎಂದು ಶ್ರೀಗಳು ಶುಭ ಹಾರೈಸಿದರು.

ವೇದಿಕೆಯಲ್ಲಿ ಉಳ್ಳಾಗಡ್ಡಿ-ಖಾನಾಪೂರದ ಸಿದ್ದೇಶ್ವರ ಶ್ರೀ, ನೂಲ ಸುರಗೀಶ್ವರ ಮಠದ ಗುರುಸಿದ್ದೇಶ್ವರ ಶ್ರೀ, ಪಾಶ್ಚಾಪೂರ ಕುಂದರಗಿ ವಿಶ್ವಾರಾಧ್ಯ ಶ್ರೀ, ಇಳಕಲದ ಅನ್ನದಾನ ಶ್ರೀ, ಸಿದ್ದಲಿಂಗಯ್ಯಾ ಶ್ರೀ, ಗದಗದ ವೀರಭದ್ರ ಬೆನಕಲ್, ಬಸ್ಸಾಪೂರದ ಗವಿಮಠದ ಗವಿಸಿದ್ದೇಶ್ವರ ಶ್ರೀ, ಸಂಜೈ ಶ್ರೀ, ನಾಗಯ್ಯಾ ತೇರಣಿಮಠ, ಮಾಟ ಬಸವಣ್ಣ ದೇವರ ಕಮಿಟಿಯವರು, ಸುತ್ತಲಿನ ಗ್ರಾಮಸ್ಥರು ಇದ್ದರು.

ಭವ್ಯ ಮೆರವಣಿಗೆ:

ಗ್ರಾಮದಲ್ಲಿ ನಡೆದ ಜಗದ್ಗುರುಗಳ ಸಾರೋಟಿ ರಥೋತ್ಸವದ ಮೆರವಣಿಗೆಯಲ್ಲಿ ತಾಯಂದಿರರ ಕುಂಭೋತ್ಸವ, ಕರಡಿ ಮಜಲು, ಡೊಳ್ಳು ವಾದ್ಯ, ಸೇರಿದಂತೆ ವಿವಿಧ ವಾದ್ಯಮೆಳ, ಅಶ್ವ ಮೆರವಣಿಗೆ, ಗೊಂಬೆಕುಣಿತ, ಪಂಚಾಚಾರ್ಯರ ಹಾಗೂ ಬಸವಣ್ಣನ ಜಯ ಘೋಷಣೆಗಳು ಗ್ರಾಮದಲ್ಲಿ ಮೊಳಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ