ಮಾಗಡಿ: ರೈತರು ಸಕಾಲದಲ್ಲಿ ಸಾಲ ಮರುಪಾವತಿಸಿದರೆ ಇನ್ನೂ ಹೆಚ್ಚಿನ ರೈತರಿಗೆ ಸಾಲ ಕೊಡಬಹುದು ಎಂದು ವೀರೇಗೌಡನದೊಡ್ಡಿ ವಿಎಸ್ಎಸ್ಎನ್ ಅಧ್ಯಕ್ಷ ಬಸವರಾಜಯ್ಯ ಹೇಳಿದರು.
ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿಯ ಬ್ಯಾಂಕಿನ ಪ್ರತಿನಿಧಿ ಕೆ.ಸಿ.ಧನಂಜಯ ಸತತವಾಗಿ 5 ವಾರ್ಷಿಕ ಸಭೆಗಳಿಗೆ ಹಾಜರಾಗದೇ ರೈತರಿಗೆ ಮಾಹಿತಿ ನೀಡದೆ ವಂಚಿಸಿದ್ದು ಸಹಕಾರ ಸಂಘದ ನಿಯಮದಂತೆ ಸತತ ಮೂರು ವಾರ್ಷಿಕ ಸಭೆಗಳಿಗೆ ಭಾಗವಹಿಸದ ಸಂಘ ಸದಸ್ಯರ ಚುನಾವಣೆ ಹಕ್ಕನ್ನು ವಜಾಗೊಳಿಸಲಾಗುವುದು. ಸತತ 5 ವಾರ್ಷಿಕ ಸಭೆಗಳಿಗೆ ಹಾಜರಾಗದವರ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸದಸ್ಯರಾದ ಸಿದ್ದಲಿಂಗಪ್ರಸಾದ್, ವಿ.ಜಿ.ದೊಡ್ಡಿ ನಾಗೇಶ್, ಬಸವರಾಜು, ಮಹೇಶ್, ಶಿವರಯದ್ರಯ್ಯ ಒತ್ತಾಯಿಸಿದರು.
ಸಿಇಒ ಕೆ.ಎಂ.ಮಹೇಶ್ ಮಾತನಾಡಿ, 2023-2024ನೇ ಸಾಲಿನಲ್ಲಿ 4.37 ಲಕ್ಷ ರು. ಲಾಭ ಗಳಿಸಿದ್ದು, ಒಟ್ಟು 5.71 ಕೋಟಿ ವಹಿವಾಟು ನಡೆಸಿದೆ. ಸಂಘದಲ್ಲಿ ಒಟ್ಟು 1475 ಸದಸ್ಯರಿದ್ದು, 825 ಸದಸ್ಯರು ಸಾಲ ಪಡೆದಿದ್ದಾರೆ ಎಂದರು.ಸಂಘದಲ್ಲಿ ಕನಿಷ್ಠ ಷೇರು ಹೊಂದಿರುವ ಸದಸ್ಯರು ವ್ಯತ್ಯಾಸ ಪ್ರವೇಶ ಧನ 50 ರು., ಷೇರು ಫೀ 100 ರು., ಷೇರು ಧನ 1000 ರು.ಗಳ ವ್ಯತ್ಯಾಸದ ಷೇರುಗಳನ್ನು ಡಿ.31ರೊಳಗೆ ಪಾವತಿಸಬೇಕು ಎಂದರು.
12ಮಾಗಡಿ1 :
ಮಾಗಡಿ ತಾಲೂಕಿನ ವೀರೇಗೌಡನದೊಡ್ಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆ ನಡೆಯಿತು.