ಕನ್ನಡಪ್ರಭ ವಾರ್ತೆ ಸಂಕೇಶ್ವರ
ಈ ಅವಧಿಯಲ್ಲಿ ಕಬ್ಬು ಪೂರೈಸಿದ ರೈತರ ಬ್ಯಾಂಕ್ ಖಾತೆಗಳಿಗೆ ನಿಗದಿತ ದರದಂತೆ ಹಣ ಜಮೆ ಮಾಡಲಾಗಿದೆ. ಮುಂದಿನ ಹಂತದಲ್ಲಿಯೂ ಕಬ್ಬು ಪೂರೈಸುವ ರೈತರಿಗೆ ಯಾವುದೇ ವಿಳಂಬವಾಗದಂತೆ ಬಿಲ್ ಪಾವತಿಸಲು ಆಡಳಿತ ಮಂಡಳಿ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ಪ್ರಸಕ್ತ ಹಂಗಾಮಿನಲ್ಲಿ ಕಾರ್ಖಾನೆಯು ಈವರೆಗೆ 1,23,623 ಮೆಟ್ರಿಕ್ ಟನ್ ಕಬ್ಬು ನುರಿಸಿದ್ದು, 1,03,000 ಕ್ವಿಂಟಾಲ್ ಸಕ್ಕರೆ ಉತ್ಪಾದಿಸಿದೆ. ಹಂಗಾಮಿನ ಯಶಸ್ವಿ ನಿರ್ವಹಣೆಯಲ್ಲಿ ಕಬ್ಬು ಬೆಳೆಗಾರರು ಹಾಗೂ ಕಾರ್ಮಿಕರ ಸಹಕಾರ ಮಹತ್ವದ ಪಾತ್ರ ವಹಿಸಿದೆ. ಕಾರ್ಖಾನೆಯ ಪ್ರಗತಿಗೆ ರೈತರು ಮತ್ತು ಕಾರ್ಮಿಕರು ನೀಡುತ್ತಿರುವ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ಮುಂದಿನ ದಿನಗಳಲ್ಲಿಯೂ ಕಾರ್ಖಾನೆಗೆ ನಿರಂತರವಾಗಿ ಕಬ್ಬು ಪೂರೈಸುವ ಮೂಲಕ ಸಹಕಾರ ನೀಡುವಂತೆ ರೈತರಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಕಾರ್ಖಾನೆಯ ಸಂಚಾಲಕ ಮಂಡಳಿ ಸದಸ್ಯರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.