ರಾಜ್ಯದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ರವಿ ಹಂಜ್ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಜಾಗತಿಕ ಲಿಂಗಾಯತ ಮಹಾಸಭಾದಿಂದ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹುನಗುಂದ
ರಾಜ್ಯದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಬಗ್ಗೆ ರವಿ ಹಂಜ್ ಆಕ್ಷೇಪಾರ್ಹ ಹೇಳಿಕೆ ಖಂಡಿಸಿ ಜಾಗತಿಕ ಲಿಂಗಾಯತ ಮಹಾಸಭಾದಿಂದ ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ, ಅಕ್ಕನ ಬಳಗ, ಶರಣ ಸಾಹಿತ್ಯ ಪರಿಷತ್ ನಡೆಸಿದ ಪ್ರತಿಭಟನೆಯಲ್ಲಿ ಚಿತ್ತರಗಿ ಸಂಸ್ಥಾನಮಠ ಹುನಗುಂದದ ಡಾ.ಗುರುಮಹಾಂತ ಸ್ವಾಮಿಗಳು ಮಾತನಾಡಿ, ಜಗತ್ತಿಗೆ ಸಾಮಾಜಿಕ ಮೌಲ್ಯಗಳನ್ನು ನೀಡಿದ ಬಸವಣ್ಣನ ಬಗ್ಗೆ ರವಿ ಹಂಜ ಅವರು ಯಾವುದೇ ಆಧಾರಗಳಿಲ್ಲದೆ, ದುರುದ್ದೇಶ ಪೂರಕವಾಗಿ ಬಸವಣ್ಣನವರ ವ್ಯಕ್ತಿತ್ವಕ್ಕೆ ಚ್ಯುತಿ ತರುವ ಅಂಶಗಳನ್ನೊಳಗೊಂಡ ಬಸವ ಮಂಟಪ ಕೃತಿ ಬರೆದು ದೊಡ್ಡ ಅಪರಾಧ ಎಸಗಿದ್ದಾರೆ. ಅವರನ್ನು ತಕ್ಷಣ ಬಂಧಿಸಿ ಘೋರ ಶಿಕ್ಷೆಗೊಳಪಡಿಸಬೇಕೆಂದು ಒತ್ತಾಯಿಸಿದರು.ಅಮೀನಗಡ ಶಂಕರ ರಾಜೇಂದ್ರ ಸ್ವಾಮಿಗಳು ಮಾತನಾಡಿ, ರವಿ ಹಂಜ್ ಮಾಡಿದ್ದು, ಚಿಲ್ಲರ ಕೆಲಸ. ಬಸವಣ್ಣನಂತವರಿಗೆ ಮತ್ತು ಲಿಂಗಾಯತ ಧರ್ಮಕ್ಕೆ ಯಾವಾಗಲೂ ಅನ್ಯಾಯವಾಗಲು ಸಾಧ್ಯವಿಲ್ಲ ಎಂದರು.
ಶಿರೂರಿನ ಡಾ.ಬಸವಲಿಂಗ ಪೂಜ್ಯರು ಮಾತನಾಡಿ, ಸಮಾಜದಲ್ಲಿ ಶಾಂತಿ ಕದಡಿದ್ದಾರೆ, ಜಗತ್ತಿನ ಬಸವ ಧರ್ಮದ ಅನುಯಾಯಿಗಳಿಗೆ ನೋವನ್ನುಂಟು ಮಾಡಿದ್ದಾರೆ. ಇವರನ್ನು ಮತ್ತು ಪ್ರಚೋದನೆ ನೀಡಿದ ಪತ್ರಕರ್ತ ವಿಶ್ವೇಶ್ವರ ಭಟ್ ಅವರನ್ನು ಕಾನೂನಿನ ಚೌಕಟ್ಟಿನಲ್ಲಿ ಉಗ್ರ ಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.ಪಟ್ಟಣದ ಬಸವ ಮಂಟಪದಿಂದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಎಸ್.ಆರ್.ಕಡಿವಾಳ, ಮುಖಂಡ ಅಮರೇಶ ನಾಗೂರ, ಎಸ್.ಎನ್.ಹಾದಿಮನಿ, ಬಸವರಾಜ ಗೋಣ್ಣಾಗರ, ಮಹಾಂತೇಶ ಕಡಪಟ್ಟಿ ,ಬಸವರಾಜ ಕಡಪಟ್ಟಿ, ರಾಜಕುಮಾರ ಬಾದವಾಡಗಿ, ವೀರಣ್ಣ ಬಳೂಟಗಿ, ಮುತ್ತಣ್ಣ ಮನ್ನಾಪೂರ, ಶಿವಪ್ಪ ನಾಗೂರ, ಶೇಖರಪ್ಪ ಬಾದವಾಡಗಿ, ಅರುಣೋದಯ ದುದ್ಗಿ. ಮಹಾಂತೇಶ ಅವಾರಿ, ಅಶೋಕ ಬಾವಿಕಟ್ಟಿ, ಮಲ್ಲಿಕಾರ್ಜುನ ಲೆಕ್ಕಿಹಾಳ, ಮುತ್ತಕ್ಕ ಬಾವಿಕಟ್ಟಿ, ಡಾ.ನಾಗರತ್ನಾ ಭಾವಿಕಟ್ಟಿ, ವಿಜಯಲಕ್ಷ್ಮಿ ಗಂಜಿಹಾಳ, ರಾಜೇಶ್ವರಿ ನಾಗರಾಳ, ಶಿವಲಿಂಗಮ್ಮ ನಾಗೂರ, ಶಾಂತಾ ಕೂಡ್ಲೆಪ್ಪನವರ, ಬಸವ ಭಕ್ತಾಧಿಗಳು ಪಾಲ್ಗೊಂಡಿದ್ದರು.