ಗರ್ಭಿಣಿ ಗ್ರಾಪಂ ಸದಸ್ಯೆ ಮೇಲೆ ಪಿಡಿಒ ದರ್ಪ..?

KannadaprabhaNewsNetwork | Published : Jan 9, 2025 12:46 AM

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ: ಗ್ರಾಪಂ ಪಿಡಿಒಗಳು ಸೇರಿ ಅಧಿಕಾರಿ ವರ್ಗವೇ ತಲೆತಗ್ಗಿಸುವ ಘಟನೆಯೊಂದು ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ನಡೆದಿದೆ. ಕುಡಿಯುವ ನೀರು ಕೇಳಿ ಗ್ರಾಪಂ ಕಚೇರಿಗೆ ಬಂದಿದ್ದ ಗರ್ಭಿಣಿ ಗ್ರಾಪಂ ಸದಸ್ಯೆ ಜೊತೆ ಮೃಗೀಯವಾಗಿ ವರ್ತಿಸಿ ಕುಂಟೋಜಿ ಗ್ರಾಪಂ ಪಿಡಿಒ ಪಿ.ಎಸ್ ನಾಯ್ಕೋಡಿ ನನ್ನ ಮೇಲೆ ದರ್ಪ ಮೆರೆದಿದ್ದಾರೆ ಎಂದು ಗರ್ಭಿಣಿ ಗ್ರಾಪಂ ಸದಸ್ಯೆ ಆರೋಪವನ್ನು ಮಾಡಿದ್ದಾರೆ. ನೀನ್ಯಾವ ಗ್ರಾಪಂ ಸದಸ್ಯೆ ಸಾರ್ವಜನಿಕರೇ ಕುಡಿಯುವ ನೀರಿನ ಬಗ್ಗೆ ಹೇಳಲಿ ಎಂದು ಅನುಚಿತವಾಗಿ ವರ್ತಿಸಿದ್ದಾರಂತೆ.

ಕುಂಟೋಜಿ ಗ್ರಾಮದ ಕುಡಿಯುವ ನೀರಿನ ಬಗ್ಗೆ ಸಮಸ್ಯೆ ಹೇಳಲು ಬಂದ ಗರ್ಭಿಣಿ ಗ್ರಾಪಂ ಸದಸ್ಯೆ ಮೇಲೆ ಕುಂಟೋಜಿ ಗ್ರಾಪಂ ಪಿಡಿಒ ದರ್ಪ ತೋರುವುದಲ್ಲದೇ, ಗರ್ಭಿಣಿ ಮಹಿಳೆಯುನ್ನು ಸುಮಾರು 4 ಗಂಟೆಗೂ ಅಧಿಕ ಸಮಯದ ಒಂದು ಲೋಟ ನೀರು ಕೊಡದೇ ನೆಲದ ಮೇಲೆಯೇ ಕೂರಿಸಿದ್ದಾರೆ.

ಕುಂಟೋಜಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಈ ಬಗ್ಗೆ ಕುಂಟೋಜಿ ಗ್ರಾಮದ ಗರ್ಭಿಣಿ ಗ್ರಾಪಂ ಸದಸ್ಯೆ ಮಂಜುಳಾ ಹುಲಗಣ್ಣಿ ಅವರು ಗ್ರಾಪಂ ಪಿಡಿಒ ಗಮನಕ್ಕೆ ಹಿಂದಿನಿಂದ ತರುತ್ತಾ ಬಂದಿದ್ದರು. ಇತ್ತೀಚಿಗೆ ಗ್ರಾಮಸ್ಥರು ಗ್ರಾಪಂ ಸದಸ್ಯೆಗೆ ನೀರಿನ ಸಮಸ್ಯೆ ಕುರಿತು ತೀವ್ರ ಸಮಸ್ಯೆ ಹೇಳಿಕೊಂಡಿದ್ದರು. ಈ ಕುರಿತು ಪಿಡಿಒ ಬಳಿ ಪ್ರಶ್ನಿಸಿದಾಗ ನೀನು ಗ್ರಾಮ ಪಂಚಾಯತಿ ಸದಸ್ಯೆನಾ ಎಂದು ಉದ್ಧಟತನ ಮೆರೆದು ಗರ್ಭಿಣಿ ಮಹಿಳೆ ಎಂದಿದ್ದಾರೆ ಎಂದು ಆರೋಪಿಸಲಾಗಿದೆ.

ಗರ್ಭಿಣಿ ಗ್ರಾಪಂ ಸದಸ್ಯೆ ವಾರಕ್ಕೊಮ್ಮೆ ನೀರು ಬಿಡುತ್ತಾರೆ. ಜನರು ಹೇಳಿದ್ದನ್ನು ನಾನು ಪಿಡಿಒಗೆ ಹೇಳಿದ್ರೆ ನೀವು ಸದಸ್ಯೆನಾ ಎನ್ನುತ್ತಾರೆ. ಇದರಿಂದ ಬೇಸತ್ತು ನಾನು ಇವತ್ತು ಪಂಚಾಯತಿಗೆ ಬಂದಿದ್ದೆನೆ ಎಂದು ಕುಡಿಯುವ ನೀರಿನ್ ಕ್ಯಾನ್ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಈ ವೇಳೆ ಪಿಡಿಒ ಸೌಜನ್ಯಕ್ಕೆ ಆದ್ರೂ ಗರ್ಭಿಣಿಯನ್ನು ಮೇಲೆ ಕೂರಿಸುವ ಕೆಲಸ ಮಾಡಿಲ್ಲ ಎನ್ನುವುದು ಆಕ್ರೋಶಕ್ಕೆ ಕಾರಣವಾಗಿದೆ.

Share this article