ಮಧ್ಯಸ್ಥಿಕೆ ವಹಿಸಿ: ರಾಜ್ಯಪಾಲರಿಗೆ ಪಿಡಿಒಗಳ ಸಂಘ ಮನವಿ

KannadaprabhaNewsNetwork |  
Published : May 10, 2026, 02:45 AM IST
ಖಾನಾಪುರ | Kannada Prabha

ಸಾರಾಂಶ

ಖಾನಾಪುರರಾಜ್ಯದಲ್ಲಿ ಪಿಡಿಒಗಳ ಅಸಹಜ ಸಾವು ಮತ್ತು ಪಿಡಿಒಗಳ ಮೇಲಿನ ಹಲ್ಲೆ ಪ್ರಕರಣಗಳಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಪಿಡಿಒಗಳ ಸಂಘದಿಂದ ಪಟ್ಟಣದ ತಾಲೂಕು ಪಂಚಾಯತಿಯಲ್ಲಿ ತಾಪಂ ಇಒ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಖಾನಾಪುರ

ರಾಜ್ಯದಲ್ಲಿ ಪಿಡಿಒಗಳ ಅಸಹಜ ಸಾವು ಮತ್ತು ಪಿಡಿಒಗಳ ಮೇಲಿನ ಹಲ್ಲೆ ಪ್ರಕರಣಗಳಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಪಿಡಿಒಗಳ ಸಂಘದಿಂದ ಪಟ್ಟಣದ ತಾಲೂಕು ಪಂಚಾಯತಿಯಲ್ಲಿ ತಾಪಂ ಇಒ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪಿಡಿಒಗಳ ಸಂಘದ ಜಿಲ್ಲಾಧ್ಯಕ್ಷ ಉಸ್ಮಾನ್ ನದಾಫ ಮನವಿ ಸಲ್ಲಿಸಿ ಮಾತನಾಡಿ, ಪಿಡಿಒ ಮಕ್ತುಮಸಾಬ್ ಕರಡಿಗುಡ್ಡ ಇತ್ತೀಚೆಗೆ ಅಸಹಜ ಸಾವಿಗೀಡಾಗಿದ್ದು, ಜೊತೆಗೆ ಇತ್ತೀಚೆಗೆ ಪಿಡಿಒಗಳ ಮೇಲೆ ಒತ್ತಡ ಮತ್ತು ಹಲ್ಲೆಯ ಪ್ರಕರಣಗಳು ಹೆಚ್ಚಾಗಿವೆ. ಕೆಲಸದ ಒತ್ತಡ, ರಾಜಕೀಯ ಪ್ರಭಾವ, ಮೇಲಧಿಕಾರಿಗಳ ಕಿರುಕಳ ಮತ್ತಿತರ ಕಾರಣಗಳಿಂದ ಪಿಡಿಒಗಳ ಅಸಹಜ ಸಾವು ಪ್ರಕರಣಗಳು ವರದಿಯಾಗುತ್ತಿವೆ. ಕೆಲವು ಗ್ರಾಮ ಪಂಚಾಯತಿಗಳಲ್ಲಿ ಪಿಡಿಒಗಳ ಮೇಲೆ ಮಾರಣಾಂತಿಕ ಹಲ್ಲೆಗಳು ನಡೆದಿವೆ. ಇದರಿಂದ ಪಿಡಿಒಗಳು ಭಯದ ವಾತಾವರಣದಲ್ಲಿ ಕೆಲಸ ನಿರ್ವಹಿಸುವಂತಾಗಿದೆ. ಪಿಡಿಒಗಳ ಈ ಎಲ್ಲ ಸಮಸ್ಯೆಗಳ ಕುರಿತು ಬೆಳಗಾವಿ ಜಿಪಂ ಸಿಇಒ ಹಾಗೂ ಎಲ್ಲ ತಾಲೂಕುಗಳ ಇಒಗಳ ಮೂಲಕ ರಾಜ್ಯಪಾಲರಿಗೆ ಲಿಖಿತ ಮನವಿಯನ್ನು ಸಲ್ಲಿಸಲಾಗುತ್ತಿದೆ. ರಾಜ್ಯಪಾಲರಿಂದ ಪಿಡಿಒಗಳಿಗೆ ನ್ಯಾಯ ಸಿಗುವ ನಿರೀಕ್ಷೆಯಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಪಿಡಿಒಗಳ ಸಂಘದ ರಾಜ್ಯ ಉಪಾಧ್ಯಕ್ಷ ಜಯಗೌಡ ಪಾಟೀಲ, ರಾಜ್ಯ ಸಮಿತಿ ಸದಸ್ಯ ಆನಂದ ಹೊಳೆಣ್ಣವರ, ಜಿಲ್ಲಾ ಪರಿಷತ್ ಸದಸ್ಯೆ ಲಕ್ಷ್ಮಿ ಕಾಂಬಳೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯ ಎಸ್ಸಿ, ಎಸ್ಟಿ ನೌಕರರ ಹಾಗೂ ಅಧಿಕಾರಿಗಳ ಕಲ್ಯಾಣ ಸಂಘದ ಜಿಲ್ಲಾಧ್ಯಕ್ಷ ಬಾಲರಾಜ ಭಜಂತ್ರಿ, ಗೌರವಾಧ್ಯಕ್ಷ ರವಿಕಾಂತ್ ಸಿ.ಎಂ ಸೇರಿದಂತೆ ವಿವಿಧ ಗ್ರಾಪಂಗಳ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿ ಇದ್ದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್ ಇಲಾಖೆಯ ಸಹಾಯಕ ನಿರ್ದೇಶಕ ವಿಜಯಕುಮಾರ ಕೋತಿನ ಮನವಿ ಸ್ವೀಕರಿಸಿ ಮನವಿಯನ್ನು ರಾಜ್ಯಪಾಲರಿಗೆ ರವಾನಿಸುವುದಾಗಿ ತಿಳಿಸಿದರು.

5ಖಾನಾಪುರ2

ಖಾನಾಪುರ ತಾಲೂಕು ಪಂಚಾಯತಿ ಕಚೇರಿಯಲ್ಲಿ ಮಂಗಳವಾರ ಪಿಡಿಒಗಳ ಸಂಘದ ವತಿಯಿಂದ ತಾಪಂ ಇಒ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ ಕೇವಲ ರಾಜಕೀಯಕ್ಕಲ್ಲ, ಯೋಜನೆಗಳ ಕೊಡುವ ಪಕ್ಷ: ಎಸ್.ಜಿ. ನಂಜಯ್ಯನಮಠ
ಧರ್ತಿ ಮಾತಾ ಬಚಾವೋ ಆಂದೋಲನ