ಶಿಗ್ಗಾಂವಿ: ದೇವಸ್ಥಾನಗಳಲ್ಲಿ ನಿತ್ಯ ಪ್ರಾರ್ಥನೆ, ಪೂಜಾ ಕೈಂಕರ್ಯಗಳು ಮೊಳಗಿದಾಗ ಆ ಗ್ರಾಮ ಶಾಂತಿ, ಸಮೃದ್ಧವಾಗಿರಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಆರಾಧನಾ ಯೋಜನೆಯಡಿ ೩.೫ ಕೋಟಿ ರು. ಮೀಸಲಿರಿಸಲಾಗಿದೆ ಎಂದು ಶಾಸಕ ಯಾಸೀರಅಹ್ಮದಖಾನ್ ಪಠಾಣ ಹೇಳಿದರು.ಪಟ್ಟಣದ ತಹಸೀಲ್ದಾರ್ ಕಾರ್ಯಲಯದ ಸಭಾಭವನದಲ್ಲಿ ಆರಾಧನಾ ಯೋಜನೆಯಡಿ ದೇವಸ್ಥಾನಗಳ ಅಭಿವೃದ್ಧಿಗಾಗಿ ಬಿಡುಗಡೆಯಾದ ೨೩೫ ಲಕ್ಷ ವಿತರಣಾ ಸಭೆಯಲ್ಲಿ ಅವರು ಮಾತನಾಡಿದರು.ಶೈಕ್ಷಣಿಕ ಕ್ಷೇತ್ರ, ಪಟ್ಟಾ ವಿತರಣೆಯಲ್ಲಿ ಶಿಗ್ಗಾಂವಿ ತಾಲೂಕು ನಂ.೧ ಸ್ಥಾನಕ್ಕೇರಿದೆ. ಈಗಾಗಲೇ ೪೦ ಶಿಬಾರ ಸೇರಿದಂತೆ ೭೦ ದೇವಸ್ಥಾನಗಳಿಗೆ ತಲಾ ೫ ಲಕ್ಷ ರು.ಗಳಂತೆ ಬಿಡುಗಡೆಗೊಳಿಸಲಾಗಿದೆ. ದೇವಸ್ಥಾನಗಳ ಕಂಪೌಂಡ್, ಪ್ಲೇ ಓವರ್ ನಿರ್ಮಾಣಕ್ಕೂ ಕ್ರಮಕೈಗೊಳ್ಳಲಾಗಿದೆ. ತಾಲೂಕಿನ ೧೭ ದೇವಸ್ಥಾನಗಳಿಗೆ ಸುಣ್ಣ, ಬಣ್ಣ, ವಿದ್ಯುತ್ ದೀಪ, ಸ್ವಚ್ಛತೆಗಾಗಿ ೧ ಲಕ್ಷದಿಂದ ೧.೫ ಲಕ್ಷದವರೆಗಿನ ಚೆಕ್ ಅನ್ನು ಈ ದಿನ ವಿತರಿಸಲಾಗುತ್ತಿದೆ ಎಂದರು.ಹಣ ''''''''ಈಗಾಗಲೇ ಸರ್ಕಾರದ ಸುತ್ತೋಲೆ ಪ್ರಕಾರ ದಾಖಲಾತಿ ಒದಗಿಸಿದವರಿಗೆ ಹಣ ಬಿಡುಗಡೆಗೊಳಿಸಲಾಗಿದೆ. ಮುಂದೆ ದೇವಸ್ಥಾನಗಳ ಅಭಿವೃದ್ಧಿಗಾಗಿ ಪಡೆಯುವವರು ಸೂಕ್ತ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದರೆ ಹಣ ಬಿಡುಗಡೆಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಶೈಕ್ಷಣಿಕ ಕ್ಷೇತ್ರದಲ್ಲಿ ೭ನೇ ಸ್ಥಾನದಲ್ಲಿದ್ದ ಶಿಗ್ಗಾಂವಿ ತಾಲೂಕನ್ನು ಮೊದಲ ಸ್ಥಾನಕ್ಕೆ ತರಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಮೇಲಿಂದ ಮೇಲೆ ಸಭೆ ಕರೆದು, ಸಾಕಷ್ಟು ಶ್ರಮದ ಪ್ರತಿಫಲವಾಗಿ ಶಿಗ್ಗಾಂವಿ ತಾಲೂಕು ಪ್ರಥಮ ಸ್ಥಾನ ಪಡೆದರೆ, ಸವಣೂರು ದ್ವಿತೀಯ ಸ್ಥಾನ ಪಡೆದಿದೆ ಎಂದು ಹೇಳಿದರು.ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಗುಡ್ಡಪ್ಪ ಜಲದಿ, ವಸಂತ ಬಾಗೂರ, ಸುದೀರ ಲಮಾಣಿ, ಅಣ್ಣಪ್ಪ ಲಮಾಣಿ, ಎಸ್.ಎಫ್. ಮಣಿಕಟ್ಟಿ, ಈಶ್ವರಗೌಡ ಪಾಟೀಲ, ಜೆ.ಎಂ. ಮುಲ್ಲಾ, ಗೌಸಖಾನ್ ಮುನಶಿ, ಚಂದ್ರು ಕೊಡ್ಲಿವಾಡ , ಸೇರಿದಂತೆ ಹಲವಾರು ಮುಖಂಡರುಗಳು ಇದ್ದರು.