ಧಾರ್ಮಿಕ ಆಚರಣೆಯಿಂದ ಸಮಾಜದಲ್ಲಿ ಶಾಂತಿ: ಕಲ್ಲಿನಾಥ ಭಟ್ಟ

KannadaprabhaNewsNetwork |  
Published : Feb 03, 2026, 02:30 AM IST
ಶ್ರೀಗುರು ಚರಿತ್ರೆ ಸಪ್ತಾಹ ಸಮಾರೋಪ ನಡೆಯಿತು. | Kannada Prabha

ಸಾರಾಂಶ

ಬೆಳಗ್ಗೆ ಶ್ರೀಗುರುದತ್ತ ಸ್ವಾಮಿಯ ಸ್ಥಿರಪಾದುಕಗೆ ವಿಶೇಷ ಪೂಜೆಯೊಂದಿಗೆ ಪಂಚಾಮೃತ ಅಭಿಷೇಕ, ಲಘು ರುದ್ರಾಭಿಷೇಕ ವಿವಿಧ ಪೂಜಾ ಕಾರ್ಯಗಳು ಜರುಗಿದವು.

ಗಜೇಂದ್ರಗಡ: ಸ್ಥಳೀಯ ಮಸ್ಕಿಯವರ ಓಣಿಯ ಗುರು ದತ್ತಾತ್ರೇಯ ದೇವಸ್ಥಾನದಲ್ಲಿ ಸೋಮವಾರ ಗುರುಪ್ಯಾಡಮಿ ಪ್ರಯುಕ್ತ ಏಳು ದಿನದ ಶ್ರೀಗುರು ಚರಿತ್ರೆ ಸಪ್ತಾಹ ಸಮಾರೋಪ ಹಾಗೂ ವಿವಿಧ ಪೂಜಾ, ಧಾರ್ಮಿಕ ಕಾರ್ಯಕ್ರಮಗಳು ಸಕಲ ಸದ್ಭಕ್ತರ ನಡುವೆ ಶ್ರದ್ಧಾ, ಭಕ್ತಿಯೊಂದಿಗೆ ವೈಭವದಿಂದ ನಡೆಯಿತು.

ಬೆಳಗ್ಗೆ ಶ್ರೀಗುರುದತ್ತ ಸ್ವಾಮಿಯ ಸ್ಥಿರಪಾದುಕಗೆ ವಿಶೇಷ ಪೂಜೆಯೊಂದಿಗೆ ಪಂಚಾಮೃತ ಅಭಿಷೇಕ, ಲಘು ರುದ್ರಾಭಿಷೇಕ ವಿವಿಧ ಪೂಜಾ ಕಾರ್ಯಗಳು ಜರುಗಿದವು. ಈ ಸಂದರ್ಭದಲ್ಲಿ ಕಲ್ಲಿನಾಥ ಭಟ್ಟ ಜೀರೆ ಗುರು ಚರಿತ್ರೆ ಪಾರಾಯಣ ಮಾಡಿದ ಬಳಿಕ ಮಾತನಾಡಿ, ಧಾರ್ಮಿಕ ಆಚರಣೆಯಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದೆ. ತಪಸ್ಸಿನಿಂದ ಆತ್ಮಬಲ ವೃದ್ಧಿಸುತ್ತದೆ ಎಂದರು.

ಇದು ಸಾರ್ಥಕ ಜೀವನದ ಮತ್ತು ಲೋಕ ಹಿತದ ಸಮರ್ಥ ಸಾಧನೆ. ಸನ್ನಡತೆ ಅವಿಭಕ್ತ ಕುಟುಂಬ ಪದ್ಧತಿ, ಪರೋಪಕಾರ, ಕಷ್ಟ, ಸಹಿಷ್ಣುತೆ, ಧೀರತನ, ತಪಸ್ಸು, ಪ್ರಾರ್ಥನೆ, ಯೋಗ, ಧ್ಯಾನ ಮುಂತಾದವುಗಳು ಪ್ರಾಚೀನ ಕಾಲದಲ್ಲಿ ಭಾರತೀಯರ ಜೀವನದ ಅವಿಭಾಜ್ಯ ಅಂಗಗಳಾಗಿವೆ ಎಂದರು.

ವಿದೇಶಿ ಪ್ರಭಾವ ಮತ್ತು ನಾಗರಿಕತೆ ಬೆಳೆದಂತೆಲ್ಲ ಯುವಜನತೆ ಸಂಸ್ಕೃತಿಯನ್ನು ಕಡೆಗಣಿಸಿ ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿದ್ದಾರೆ. ನಮ್ಮ ಮೂಲ ಸಂಸ್ಕೃತಿಯನ್ನು ಮರೆಯಬಾರದು. ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಯುವಕರು ಹಾಗೂ ಯುವತಿಯರು ಮುಂದಾಗಬೇಕು ಎಂದರು.ಡಾ. ರವಿಶಾಸ್ತ್ರೀ ಜೀರೆ ಮಾತನಾಡಿ, ಧರ್ಮದ ಸನ್ಮಾರ್ಗ, ತ್ಯಾಗ ಮತ್ತು ಸದ್ಗುಣಗಳೊಂದಿಗೆ ಪರಿಶ್ರಮದಿಂದಾಗಿ ವ್ಯಕ್ತಿ ಜೀವನದಲ್ಲಿ ಯಶಸ್ಸು ಮತ್ತು ಸಾಧನೆ ಮಾಡಲು ಸಾಧ್ಯ. ಒಳ್ಳೆಯ ಕೆಲಸ ಮಾಡಿರುವುದನ್ನು ಸಮಾಜ ಗುರುತಿಸುತ್ತದೆ, ಗೌರವಿಸುತ್ತದೆ. ಅಂತಹ ಸದ್ಗುಣಗಳು ಪರಿಸರದ ಜನತೆಯಲ್ಲಿದೆ, ಯಾವಾಗಲು ಸಾಧಕರು ತಮ್ಮ ಸಾಧನೆಯನ್ನು ಮತ್ತು ಗುರಿಯನ್ನು ಮುಂದಿಟ್ಟುಕೊಂಡು ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು ಎಂದರು. ಈ ವೇಳೆ ಏಳುದಿನಗಳ ವರೆಗೆ ಗುರು ಚರಿತ್ರೆ ಪಾರಾಯಣವನ್ನು ಮಾಡಿದ ಕಲ್ಲಿನಾಥ ಭಟ್ಟ ಜೀರೆ ಅವರಿಗೆ ಪಾದಪೂಜಾ ಕಾರ್ಯ ನಡೆಯಿತು. ಗುರುಪ್ಯಾಡಮಿ ಕಾರ್ಯಕ್ರಮದಲ್ಲಿ ನೂರಾರು ಸದ್ಭಕ್ತರು ಪಾಲ್ಗೊಂಡು ತೀರ್ಥ, ಮಹಾಪ್ರಸಾದ ಸ್ವೀಕರಿಸಿ, ಗುರುದತ್ತನ ದರ್ಶನ ಪಡೆದು ಪುನೀತರಾದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸದನದಲ್ಲಿ ಇಂದು, ನಾಳೆ ಜಿ ರಾಮ್‌ ಜಿ ಸಂಗ್ರಾಮ
ಮುಖ್ಯಮಂತ್ರಿ ಗಾದಿ ಬಗ್ಗೆ ಕೆಣಕಿದ್ದಕ್ಕೆ ಗೂಢಾರ್ಥದಲ್ಲಿ ಡಿಕೆಶಿ ಎದಿರೇಟು