ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನಸ್ಸಿಗೆ ನೆಮ್ಮದಿ

KannadaprabhaNewsNetwork |  
Published : Aug 03, 2026, 01:45 AM IST
ಫೋಟೋ 31ಪಿವಿಡಿ131ಪಿವಿಜಿ1ಪಾವಗಡ,ಬೆಂಗಳೂರು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಆದರ್ಶ ನಗರದ  ಸರಸ್ವತಿ ಎಜುಕೇಶನ್ ಕಲಾ ಮತ್ತು ರೂರಲ್ ಡೆವಲಪ್‌ ಮೆಂಟ್‌ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಮಾಜಕಲ್ಯಾಣ ಇಲಾಖೆ,ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿದ್ದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಗೀತೆಗಳನ್ನು ಹಾಡಿ ಮನರಂಜಿಸಿದರು. | Kannada Prabha

ಸಾರಾಂಶ

ಜನಪದ ಕಲೆಗಳು ಹಾಗೂ ಸಂಗೀತ ಸೇರದಂತೆ ಇತರೇ ಸಾಂಸ್ಕೃತಿಕ ಕಾರ್ಯಕ್ರಮಗಳು ಮನುಷ್ಯನ ಆರೋಗ್ಯ ಹಾಗೂ ಮಾನಸಿಕ ಒತ್ತಡ ನಿವಾರಿಸಲು ಹೆಚ್ಚು ಸಹಕಾರಿಯಾಗಿದೆ ಎಂದು ಹಿರಿಯ ಜಾನಪದ ಕಲಾವಿದ ಪೆಂಡ್ಲಿಜೀವಿ ಈಶ್ವರ ಚಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಜನಪದ ಕಲೆಗಳು ಹಾಗೂ ಸಂಗೀತ ಸೇರದಂತೆ ಇತರೇ ಸಾಂಸ್ಕೃತಿಕ ಕಾರ್ಯಕ್ರಮಗಳು ಮನುಷ್ಯನ ಆರೋಗ್ಯ ಹಾಗೂ ಮಾನಸಿಕ ಒತ್ತಡ ನಿವಾರಿಸಲು ಹೆಚ್ಚು ಸಹಕಾರಿಯಾಗಿದೆ ಎಂದು ಹಿರಿಯ ಜಾನಪದ ಕಲಾವಿದ ಪೆಂಡ್ಲಿಜೀವಿ ಈಶ್ವರ ಚಾರ್ ತಿಳಿಸಿದರು.

ಅವರು ಬೆಂಗಳೂರು ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಆದರ್ಶ ನಗರದ ಸರಸ್ವತಿ ಎಜ್ಯುಕೇಶನ್ ಕಲಾ ಮತ್ತು ರೂರಲ್ ಡೆವಲಪ್‌ ಮೆಂಟ್‌ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ತುಮಕೂರು ರಸ್ತೆಯಲ್ಲಿರುವ ಸಮಾಜಕಲ್ಯಾಣ ಇಲಾಖೆಯ ವಿದ್ಯಾರ್ಥಿ ನಿಲಯದಲ್ಲಿ ಏರ್ಪಡಿಸಿದ್ದ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು. ಗ್ರಾಮೀಣ ಕಲೆಗಳಾದ, ಯಕ್ಷಗಾನ, ಏಕಾಪಾತ್ರಭಿನಯ ಹಾಗೂ ಪೌರಾಣಿಕ ಸನ್ನಿವೇಶದ ಪಾತ್ರ ಸೇರಿದಂತೆ ಸಂಗೀತ ಹಾಗೂ ಇತರೆ ವಿವಿಧ ರೀತಿಯ ಕಲೆಗಳು ಮನುಷ್ಯನ ಆರೋಗ್ಯ ಹಾಗೂ ಉಲ್ಲಾಸ ಬದುಕಿಗೆ ಹೆಚ್ಚು ಸಹಕಾರಿಯಾಗಲಿದೆ. ಈ ಹಿಂದೆ ಗ್ರಾಮೀಣ ಪ್ರದೇಶಗಳಲ್ಲಿ ನಾಟಕ ಹಾಡು ನೃತ್ಯ ಇತರೆ ಭಜನೆ ಕಾರ್ಯಕ್ರಮಗಳು ಹೆಚ್ಚಿಗೆ ನಡೆಯುತ್ತಿದ್ದವು. ಗ್ರಾಮದಲ್ಲಿ ಒಂದು ಮನರಂಜನೆ ಕಾರ್ಯಕ್ರಮ ನಡೆಯುತ್ತಿದೆ ಎಂದರೆ ಅಂದು ಆ ಗ್ರಾಮದಲ್ಲಿ ಹಬ್ಬದ ವಾತಾವರಣವೆ ಸೃಷ್ಟಿಯಾಗಿ ಇಡೀ ಗ್ರಾಮದಲ್ಲಿ ಸಂಭ್ರಮ ಮನೆ ಮಾಡುತ್ತಿತ್ತು. ಹೀಗಾಗಿ ಗ್ರಾಮಗಳಲ್ಲಿ ಆನಂದ ಭರಿತ ಹಾಗೂ ವಾತಾವರಣ ಕಾಣಲು ಸಾಧ್ಯವಾಗುತ್ತಿತ್ತು. ಕಲೆಗಳ ಜೀವಂತಿಕೆ ಕಾಪಾಡಬೇಕು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಸಕ್ರಿಯವಾಗಿ ಕಾರ್ಯಕ್ರಮ ರೂಪಿಸುವ ಮೂಲಕ ಕಲೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಮೂಲಕ ಅದರ ಮಹತ್ವ ಹಾಗೂ ಕಲೆಗಳ ಜೀವಂತಿಕೆ ತುಂಬಿಸುತ್ತಿರುವುದು ಶ್ಲಾಘನೀಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿ ನಿಲಯದ, ನಿಲಯ ಪಾಲಕ ಪುಟ್ಟರಾಜು ಮಾತನಾಡಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಕಾರ್ಯಕ್ರಮಗಳು ಅತ್ಯಂತ ಉಪಯುಕ್ತವಾಗಿದ್ದು ಕಲಾವಿದರಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದರು. ಕನ್ನಮೇಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವೀರ್ಲಗೊಂದಿ ಟಿ.ಗಂಗಯ್ಯ, ನಿಲಯ ಪಾಲಕರಾದ ರಮೇಶ್ ಜಾನಪದ ಹಾಗೂ ವಿವಿಧ ರೀತಿಯ ಕಲೆಗಳ ನೆಮ್ಮದಿ ಹಾಗೂ ಶಾಂತಿಯ ಬಗ್ಗೆ ವಿವರಿಸಿದರು. ಈ ವೇಳೆ ರಮೇಶ್ , ಬ್ಯಾಡನೂರು ಡಿ.ಗಂಗಾಧರಪ್ಪ, ನರಸಿಂಹಪ್ಪ,ರವಿಕುಮಾರ್‌,ಹಾಗೂ ಇತರೆ ಅನೇಕ ಮಂದಿ ಕಲಾವಿದರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣದಿಂದ ಮಾತ್ರ ಪಿಡುಗುಗಳನ್ನು ತಡೆಯಬಹುದು: ನ್ಯಾ. ಯೋಗೇಂದ್ರ ಶೆಟ್ಟಿ ಸಲಹೆ
ಟೆಲಿ-ಮಾನಸ್‌: 42 ಲಕ್ಷಕ್ಕೂ ಅಧಿಕ ಕರೆಗಳಿಗೆ ಸ್ಪಂದನೆ