ಮಿಡಲ್‌ ಕೆಳಗೆ.....ಒಳ್ಳೆಯ ಚಿಂತನೆಯಿಂದ ನೆಮ್ಮದಿ: ಹಾರಕೂಡ ಶ್ರೀ

KannadaprabhaNewsNetwork |  
Published : Aug 18, 2026, 01:45 AM IST
ಚಿತ್ರ : 17ಬಿಡಿಆರ್56 | Kannada Prabha

ಸಾರಾಂಶ

ಚಿಂತನೆಯಿಂದ ಮನಸ್ಸಿನಲ್ಲಿ ಸಾತ್ವಿಕ ಅಲೆಗಳು ಹುಟ್ಟಿ, ಮಾಡುವ ಕಾರ್ಯಗಳೂ ಫಲಪ್ರದಗೊಂಡು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಹಾರಕೂಡದ ಚನ್ನವೀರ ಶಿವಾಚಾರ್ಯರು ನುಡಿದರು.ತಾಲೂಕಿನ ಹಾರಕೂಡ ಮಠದಲ್ಲಿ ಆಯೋಜಿಸಿದ್ದ ಗುರುವಂದನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಗುರುವಿನ ಸಾನ್ನಿಧ್ಯದಿಂದ ಮನಸ್ಸು ತಿಳಿಗೊಂಡು ನಡೆ-ನುಡಿ ಒಂದಾಗಿ ಮಾಡುವ ಕಾರ್ಯಗಳೆಲ್ಲವೂ ಕಾಯಕದ ಸ್ಪರ್ಶಕ್ಕೆ ಒಳಪಡುತ್ತವೆ. ಶ್ರಾವಣ ಮಾಸ ಶುಭ ಚಿಂತನೆಗೆ ಪರ್ವ ಕಾಲವಾಗಿದ್ದು, ಹಾರಕೂಡ ಪೀಠದ ಆಶೀರ್ವಾದದಿಂದ ಎಲ್ಲರ ಬಾಳು ಒಳಿತಾಗಲಿ ಎಂದು ಶುಭ ಹಾರೈಸಿದರು.

ಬಸವಕಲ್ಯಾಣ: ಚಿಂತನೆಯಿಂದ ಮನಸ್ಸಿನಲ್ಲಿ ಸಾತ್ವಿಕ ಅಲೆಗಳು ಹುಟ್ಟಿ, ಮಾಡುವ ಕಾರ್ಯಗಳೂ ಫಲಪ್ರದಗೊಂಡು ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ ಎಂದು ಹಾರಕೂಡದ ಚನ್ನವೀರ ಶಿವಾಚಾರ್ಯರು ನುಡಿದರು.

ತಾಲೂಕಿನ ಹಾರಕೂಡ ಮಠದಲ್ಲಿ ಆಯೋಜಿಸಿದ್ದ ಗುರುವಂದನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಗುರುವಿನ ಸಾನ್ನಿಧ್ಯದಿಂದ ಮನಸ್ಸು ತಿಳಿಗೊಂಡು ನಡೆ-ನುಡಿ ಒಂದಾಗಿ ಮಾಡುವ ಕಾರ್ಯಗಳೆಲ್ಲವೂ ಕಾಯಕದ ಸ್ಪರ್ಶಕ್ಕೆ ಒಳಪಡುತ್ತವೆ. ಶ್ರಾವಣ ಮಾಸ ಶುಭ ಚಿಂತನೆಗೆ ಪರ್ವ ಕಾಲವಾಗಿದ್ದು, ಹಾರಕೂಡ ಪೀಠದ ಆಶೀರ್ವಾದದಿಂದ ಎಲ್ಲರ ಬಾಳು ಒಳಿತಾಗಲಿ ಎಂದು ಶುಭ ಹಾರೈಸಿದರು.

ಬೀದರ್ ಜಿ.ಪಂ ನಿವೃತ್ತ ಉಪ ಕಾರ್ಯದರ್ಶಿ ಬಿ. ಕೆ. ಹಿರೇಮಠ, ಮಲ್ಲಿನಾಥ ಹಿರೇಮಠ ಹಾರಕೂಡ, ಪಿ. ಕೆ. ಹಿರೇಮಠ, ಚಂದ್ರರಾಜ ಎಸ್. ಹಂಜಿಗೆ ಬಸವಕಲ್ಯಾಣ, ಸಂತೋಷ ಪಾಟೀಲ, ರಾಜಕುಮಾರ ಹಂಜಿಗೆ, ಸಂಗಣ್ಣ ಪಾಟೀಲ, ಚನ್ನವೀರ ಚಿಟ್ಟೆ, ರಾಜಕುಮಾರ ಘಾಳೆ, ಶಿವಶರಣಯ್ಯ ಕಂಬಳಿ ಮಠ, ಚಂದ್ರರಾಜ ಹಂಜಿಗೆ, ಕಾರ್ತಿಕ ಸ್ವಾಮಿ ಯಲದಗುಂಡಿ, ಶಿವಾನಂದ ಮಳಗಿ ಉಪಸ್ಥಿತರಿದ್ದರು.

ಚಂದ್ರರಾಜ ಹಂಜಿಗೆ ಪಾರಿವಾರದವರು ಹಾರಕೂಡ ಶ್ರೀಗಳ 1026ನೇ ತುಲಾಭಾರ ಮಾಡಿ ಆಶೀರ್ವಾದ ಪಡೆದರು.

--

ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡ ಮಠದಲ್ಲಿ ಶ್ರಾವಣ ಮಾಸದ ಮೊದಲನೇ ಸೋಮವಾರ ಆಯೋಜಿಸಿದ್ದ ತುಲಾಭಾರ ಸಮಾರಂಭವನ್ನು ಪೀಠಾಧಿಪತಿಗಳಾದ ಪೂಜ್ಯ ಚನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮಪ್ಪನಾಣೆ ತಮಿಳುನಾಡಿಗೆ ನೀರು ಬಿಟ್ಟಿಲ್ಲ: ಶಾಸಕ ರಮೇಶ ಬಂಡಿಸಿದ್ದೇಗೌಡ ಸಮರ್ಥನೆ
ವಿದ್ಯಾರ್ಥಿನಿಯರು ವಿದ್ಯಾಭ್ಯಾಸವನ್ನು ಮೊಟಕುಗೊಳಿಸದೆ ಉನ್ನತ ಶಿಕ್ಷಣ ಪಡೆಯಿರಿ