ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ದೇವಾಲಯದ ಮುಖ್ಯ ಅರ್ಚಕ ಲಕ್ಷ್ಮೀಶ್ ಅವರ ತಂಡ ಗುರುವಾರ ರಾತ್ರಿಯಿಂದಲೇ ದೇವಾಲಯದಲ್ಲಿ ಕಡಲೆಕಾಯಿ ತರಿಸಿ ಹೂವಿನೊಂದಿಗೆ ಗರ್ಭಗುಡಿ ಸೇರಿದಂತೆ ದೇವಿಗೆ ವಿಶೇಷ ಅಲಂಕಾರ ಮಾಡಲಾಯಿತು.
ದೇವಾಲಯದ ಪಕ್ಕದಲ್ಲಿ ಹೋಮ- ಹವನಗಳ ನಡೆಸಿ ಶುಕ್ರವಾರ ಲೋಕ ಕಲ್ಯಾಣಾರ್ಥ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಪಟ್ಟಣ ಮಾತ್ರವಲ್ಲದೆ ಅಕ್ಕ ಪಕ್ಕದ ಗ್ರಾಮಗಳಿಂದ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿ ತಾಯಿ ಚಾಮುಂಡೇಶ್ವರಿ ದರ್ಶನ ಮಾಡಿ ಪುನೀತರಾದರು. ಬಂದ ಭಕ್ತರಿಗೆ ಮಂಗಳಾರತಿ, ತೀರ್ಥ, ಪ್ರಸಾದವನ್ನು ವಿತರಿಸಲಾಯಿತು.ಪಟ್ಟಣದ ಶ್ರೀ ಲಕ್ಷ್ಮೀ ದೇವಿ ದೇವಾಲಯ, ಟಿ.ಎಂ ಹೊಸೂರು ಗೇಟ್ ಬಳಿ ಇರುವ ಮಹಾ ಕಾಳಿ ದೇವಾಲಯದಲ್ಲೂ ಆಷಾಢ ಮಾಸದ ಎರಡನೇ ಶುಕ್ರವಾರದ ಅಂಗವಾಗಿ ವಿಶೇಷ ಪೂಜೆಗಳು ಜರುಗಿದವು.