ಕೊಪ್ಪಳ: ದೇಶದ ಜನರು ತೀವ್ರಗತಿಯಲ್ಲಿ ಬದಲಾವಣೆ ಕಾಣುತ್ತಿದ್ದಾರೆ, ಮೋಸ, ವಂಚನೆ ಅರ್ಥವಾಗುತ್ತಿವೆ, ಈ ಜಾಗೃತಿಯಿಂದ ಬದಲಾವಣೆ ನಿಶ್ಚಿತ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ಎಂ.ಗೊಂಡಬಾಳ ಹೇಳಿದರು.
ಮದುವೆ ಮನೆಯೂ ಸೇರಿದಂತೆ ಅನೇಕ ವಾರ್ಡ್‌ಗಳಲ್ಲಿ ಜನರನ್ನು ಗುಂಪು ಗುಂಪಾಗಿ ನಿಲ್ಲಿಸಿಕೊಂಡು ಮತಗಳ್ಳತನ ಮತ್ತು ಅದರ ಮೂಲಕ ಮಾಡಲಾಗುತ್ತಿರುವ ಅನ್ಯಾಯದ ಬಗ್ಗೆ ಮಾಹಿತಿ ನೀಡಿದರು. ಸುಳ್ಳು ಮತಗಳ ಜೋಡಣೆ,ಇರುವ ಮತಗಳನ್ನು ತೆಗೆದು ಹಾಕುವ ಕೆಟ್ಟ ಕೆಲಸದ ವಿರುದ್ಧ ರಾಷ್ಟ್ರಪತಿಗಳಿಗೆ ದೂರು ನೀಡಲು ಈ ಸಹಿ ಸಂಗ್ರಹ ಮಾಡಲಾಗುತ್ತಿದೆ ಎಂದರು.
ದೇಶದ ಭವಿಷ್ಯ ಹಾಳು ಮಾಡುವ ಮೂಲಕ ದೇಶದ್ರೋಹಿ ಕೆಲಸದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ತೊಡಗಿಕೊಂಡಿದೆ. ಜನರ ಪರವಾನಗಿ ಇಲ್ಲದ ಈ ಆಡಳಿತ ಮೋದಿಯವರ ಹಿಡನ್ ಅಜೆಂಡಾ, ಅವರು ಮನುವಾದಿಯ ಗುಲಾಮಗಿರಿಯ ಆಡಳಿತ ನೀಡಲು ತಮ್ಮ ಗೆಳೆಯರನ್ನು ಕರೆದುಕೊಂಡು ದೇಶ ಲೂಟಿ ಮಾಡುತ್ತಿದ್ದಾರೆ, ಅದಕ್ಕಾಗಿ ಅವರು ಎಲ್ಲ ಸರ್ಕಾರಿ ಸ್ವಾಯತ್ತ ಸಂಸ್ಥೆಗಳ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.ಚಾಲನೆ:ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಸಹಿ ಮಾಡುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿದರು.ಅನೇಕ ಮುಖಂಡರು, ಕಾರ್ಯಕರ್ತರು ಮತ್ತು ನಾಗರೀಕರು, ಮಹಿಳೆಯರಿಗೆ ಜಾಗೃತಿ ಮೂಡಿಸಿ ಸಹಿ ಸಂಗ್ರಹ ಮಾಡಿದರು.
ಈ ಸಂದರ್ಭದಲ್ಲಿ ಸಂಸದ ಕೆ.ರಾಜಶೇಖರ ಹಿಟ್ನಾಳ, ಎಸ್.ಬಿ. ನಾಗರಳ್ಳಿ, ಗೂಳಪ್ಪ ಹಲಗೇರಿ, ರಾಮಣ್ಣ ಚೌಡಕಿ, ಗ್ಯಾರಂಟಿ ಅಧ್ಯಕ್ಷ ಎಸ್. ಬಾಲಚಂದ್ರನ್, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಸದಸ್ಯ ನಾಗರಾಜ ಕುಷ್ಟಗಿ, ಅಕ್ಬರ್ ಪಾಶಾ, ಗುರುರಾಜ ಹಲಗೇರಿ, ಗ್ಯಾರಂಟಿ ಪ್ರಾಧಿಕಾರ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಜಿ.ಗೊಂಡಬಾಳ, ಭಾಷುಸಾಬ್ ಖತೀಬ್, ವಿಶ್ವನಾಥ ರಾಜು, ಪಂಪಣ್ಣ ಪೂಜಾರ, ಕಿಶೋರಿ ಬೂದನೂರ, ರೇಣುಕಾ ಪೂಜಾರ, ಮಂಜುಳಾ ಉಂಡಿ, ಶಿಲ್ಪಾ ಗುಡ್ಲಾನೂರ, ಗಂಗಮ್ಮ ನಾಯಕ ಅನೇಕರಿದ್ದರು.