ಕನ್ನಡಪ್ರಭ ವಾರ್ತೆ ಕನಕಗಿರಿ
ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿದ ಹಿನ್ನೆಲೆ ಪಕ್ಷದ ಕಾರ್ಯಕರ್ತರು ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ಶನಿವಾರ ವಿಜಯೋತ್ಸವ ಆಚರಿಸಿದರು. ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ ಮಾತನಾಡಿ, ರಾಜ್ಯದ ಮೂರು ವಿಧಾನಸಭೆಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯಶಾಲಿಯಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿಗೆ ಮತದಾರರು ಮತ ನೀಡಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಶಾಸಕರನ್ನಾಗಿಸಿದ್ದಾರೆ. ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಶಾಸಕರು ಇನ್ನೂ ಹೆಚ್ಚಿನ ಅಭಿವೃದ್ಧಿಪಡಿಸುವ ವಿಶ್ವಾಸ ವ್ಯಕ್ತಪಡಿಸಿದರಲ್ಲದೇ ಸಚಿವ ಶಿವರಾಜ ತಂಗಡಗಿ ಚುನಾವಣಾ ಚಾಣಕ್ಯರಾಗಿದ್ದಾರೆ ಎಂದರು.ಹುಲಿಹೈದರ ಜಿಪಂ ಮಾಜಿ ಸದಸ್ಯ ಹನುಮೇಶ ನಾಯಕ ಮಾತನಾಡಿ, ಸಿದ್ದರಾಮಯ್ಯನವರ ಗಟ್ಟಿತನದ ಆಡಳಿತಕ್ಕೆ ಜನ ಮತ ಹಾಕುವ ಮೂಲಕ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತಂದಿದ್ದಾರೆ. ಮುಂದಿನ ದಿನಮಾನಗಳಲ್ಲಿ ನಡೆಯುವ ಜಿಪಂ, ತಾಪಂ ಹಾಗೂ ಗ್ರಾಪಂ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.ಪ್ರಮುಖರಾದ ಶರಣಪ್ಪ ಭತ್ತದ, ರವಿ ಪಾಟೀಲ್, ಸಿದ್ದಾರ್ಥ ಮಲ್ಲದಗುಡ್ಡ, ಶಾಂತಪ್ಪ ಬಸರಿಗಿಡ, ಕನಕಪ್ಪ ಮ್ಯಾಗಡೆ, ಹನುಮೇಶ ವಾಲೇಕಾರ, ವೆಂಕಟೇಶ ಕುಲಕರ್ಣಿ, ರಾಘವೇಂದ್ರ ಚಿತ್ರಗಾರ, ಚಂದುಸಾಬ ಗುರಿಕಾರ, ಹೊನ್ನೂರುಸಾಬ ಹತೋಟಿ, ಅನಿಲ ಬಿಜ್ಜಳ ಸೇರಿದಂತೆ ಇತರರಿದ್ದರು.ಯಲಬುರ್ಗಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ:
ರಾಜ್ಯದ ಮೂರು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆ ಶನಿವಾರ ಕಾಂಗ್ರೆಸ್ ಕಾರ್ಯಕರ್ತರು ಯಲಬುರ್ಗಾ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ಯುವ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಗಾಣಿಗೇರ ಹಾಗೂ ಯುವ ಮುಖಂಡ ಶರಣಪ್ಪ ಗಾಂಜಿ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜನಪರ ಆಡಳಿತವನ್ನು ಮೆಚ್ಚಿಕೊಂಡು ರಾಜ್ಯದ ಮೂರು ವಿಧಾನಸಭಾ ಉಪಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ ಎಂದರು.ಕಾಂಗ್ರೆಸ್ ತಾಲೂಕಾಧ್ಯಕ್ಷೆ ಸಾವಿತ್ರಿ ಗೊಲ್ಲರ್ ಹಾಗೂ ಎಂ.ಎಫ್. ನದಾಫ್, ಹಂಪಯ್ಯ ಹಿರೇಮಠ, ಕಾಂಗ್ರೆಸ್ ವಕ್ತಾರ ಡಾ. ಶಿವನಗೌಡ ದಾನರಡ್ಡಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯವರು ಅಪಪ್ರಚಾರ ಮಾಡುವ ಮೂಲಕ ತಮ್ಮ ಸೋಲಿಗೆ ಕಾರಣವಾಗಿದ್ದು, ಸತ್ಯಕ್ಕೆ ಜಯ ಎನ್ನುವಂತೆ ಕಾಂಗ್ರೆಸ್‌ಗೆ ಗೆಲುವಾಗಿದೆ ಎಂದು ಹೇಳಿದರು.ಈ ಸಂದರ್ಭ ಕಾಂಗ್ರೆಸ್ ವಕ್ತಾರ ಸಂಗಮೇಶ ಗುತ್ತಿ, ಗವಿಸಿದ್ದಪ್ಪ ಚೆಂಡೂರ, ಎಚ್.ಎಚ್. ಕುರಿ, ಶಿವು ಬಣಕಾರ, ಅಲ್ಲಾಸಾಬ ದಮ್ಮೂರ, ಸಿದ್ದು ಅಕ್ಕಿಗುಣಿ, ನಿಂಗಪ್ಪ ಕಮತರ, ಶಂಕರ ಜಕ್ಕಲಿ, ಚಂದ್ರಪ್ಪ ದೊಡ್ಮನಿ, ರಾಜು ಹಡಪದ, ಖಾಜಾವಳಿ ಗಡಾದ, ಮಂಜುನಾಥ ಬೇಲೇರಿ, ಪುನೀತ ಕೊಪ್ಪಳ, ಚಂದ್ರು ಮತ್ತಿತರರು ಇದ್ದರು.