ಮೋನಿಷ್‌ಗೆ ಜಿಲ್ಲಾಧಿಕಾರಿ ಸನ್ಮಾನ, ಬಾಲಕಿಯರೇ ಮೇಲುಗೈ, ಯಶ್ವಿನ್ ಕೆ.ಎ 621 ಅಂಕ, ಚಿಕ್ಕಬಳ್ಳಾಪುರಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಈ ಬಾರಿ ಜಿಲ್ಲೆಯಲ್ಲಿ 15,397 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 11,572 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ. ಈ ಪೈಕಿ 6,440 ಬಾಲಕಿಯರು, 5,132 ಬಾಲಕರು ಉತ್ತೀರ್ಣರಾಗಿದ್ದಾರೆ. ಎಂದಿನಂತೆ ಜಿಲ್ಲೆಯಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಮೋನಿಷ್ ಸಾಯಿಗೆ 623 ಅಂಕಬಾಗೇಪಲ್ಲಿ ಪಟ್ಟಣದ ಬಿ.ಜಿ.ಎಸ್ ಶಾಲೆಯ ಎಸ್.ಎನ್. ಮೋನಿಷ್ ಸಾಯಿ ರವರು ರಾಜ್ಯಕ್ಕೆ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ 3ನೇ ಸ್ಥಾನ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾರೆ. ರಾಜ್ಯದಲ್ಲಿ 14 ವಿದ್ಯಾರ್ಥಿಗಳು 623 ಅಂಕಗಳನ್ನು ಗಳಿಸಿ 3ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಈ ವಿದ್ಯಾರ್ಥಿಗಳ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆಯ ಮೋನಿಷ್ ಸಾಯಿ ಸ್ಥಾನ ಪಡೆದಿದ್ದಾರೆ.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳುಚೇಳೂರು ಪಟ್ಟಣದ ಪ್ರಶಾಂತಿ ಶಾಲೆಯ ವಿದ್ಯಾರ್ಥಿ ಯಶ್ವಿನ್ ಕೆ.ಎ 621 ಅಂಕ ಗಳಿಸಿದ್ದಾರೆ. ಚಿಂತಾಮಣಿ ನಗರದ ಎಸ್.ಎನ್.ಆರ್ ಅಕಾಡೆಮಿಯ ವಿದ್ಯಾರ್ಥಿ ವೈ.ಎಸ್.ಕುಶಾಲ್, ಬಾಗೇಪಲ್ಲಿಯ ಯಂಗ್ ಇಂಡಿಯಾ ಶಾಲೆಯ ವಿದ್ಯಾರ್ಥಿ ಲಕ್ಷ್ಮೀ ಲೀಶ ಎಸ್ ಮತ್ತು ಅಗಲಗುರ್ಕಿ ಬಿ.ಜಿ.ಎಸ್. ಶಾಲೆಯ ವಿದ್ಯಾರ್ಥಿ ಟಿ.ಎಂ.ವಾಸವಿ ರವರು ತಲಾ 620 ಅಂಕಗಳನ್ನು ಗಳಿಸುವ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಗೆ ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿ ಹೊರಹೊಮ್ಮಿದ್ದಾರೆ.
ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ ಮೋನಿಷ್ ಸಾಯಿರವರನ್ನು ಇಲ್ಲಿನ ಜಿಲ್ಲಾಡಳಿತ ಭವನದ ಕಚೇರಿಯಲ್ಲಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಸನ್ಮಾನಿಸಿ ಅಭಿನಂದಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ಜಿ,ಟಿ ನಿಟ್ಟಾಲಿ, ಶಾಲಾ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಬೈಲಾಂಜನಪ್ಪ, ವಿದ್ಯಾರ್ಥಿಯ ಪೋಷಕರಾದ ಜಿ.ಎಸ್. ನಾಗರಾಜು, ವಿ.ಎಸ್. ಸರಿತ ಹಾಗೂ ಶಿಕ್ಷಕರು ಇದ್ದರು.