ಫಲಾಪೇಕ್ಷೆಯಿಲ್ಲದೆ ಕರ್ತವ್ಯ ನಿರ್ವಹಿಸಿ

KannadaprabhaNewsNetwork |  
Published : Sep 05, 2026, 02:00 AM IST
ಹುಬ್ಬಳ್ಳಿಯ ನವನಗರದ ಭಗಿನಿ ನಿವೇದಿತಾ ವಿದ್ಯಾಲಯದ ಆಶ್ರಯದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ನೀಡಿದ ಶ್ರೀಮದ್ಭಗವದ್ಗೀತೆಯ ಉಪದೇಶ ಇಡೀ ಮಾನವಕುಲಕ್ಕೆ ಮಹಾನ್ ಮಾರ್ಗದರ್ಶಿಯಾಗಿದೆ.

ಹುಬ್ಬಳ್ಳಿ:

ಫಲದ ಅಪೇಕ್ಷೆಯಿಲ್ಲದೆ ಕರ್ತವ್ಯವನ್ನು ಮಾಡು ಎಂಬ ಶ್ರೀಕೃಷ್ಣನ ಕರ್ಮಯೋಗದ ಸಂದೇಶವು ಪ್ರತಿಯೊಬ್ಬರಿಗೂ ಜವಾಬ್ದಾರಿ ಹಾಗೂ ಸತ್ಕರ್ಮಗಳ ಮಹತ್ವ ತಿಳಿಸುತ್ತದೆ ಎಂದು ಎಸ್.ಪಿ. ನರಸಾಪುರ ಹೇಳಿದರು.

ನವನಗರದ ಭಗಿನಿ ನಿವೇದಿತಾ ವಿದ್ಯಾಲಯದ ಆಶ್ರಯದಲ್ಲಿ ನಡೆದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಅರ್ಜುನನಿಗೆ ನೀಡಿದ ಶ್ರೀಮದ್ಭಗವದ್ಗೀತೆಯ ಉಪದೇಶ ಇಡೀ ಮಾನವಕುಲಕ್ಕೆ ಮಹಾನ್ ಮಾರ್ಗದರ್ಶಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರವೀರಪ್ಪ ಮಡಿವಾಳರ ಮಾತನಾಡಿದರು. ಪುಷ್ಪಾರ್ಚನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗಣ್ಯರು ಬಾಲಕೃಷ್ಣನ ವಿಗ್ರಹವನ್ನು ತೊಟ್ಟಿಲಿಗೆ ಹಾಕುವ ಮೂಲಕ ತೊಟ್ಟಿಲೋತ್ಸವವನ್ನು ಭಕ್ತಿ-ಭಾವದಿಂದ ಆಚರಿಸಿದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ರಾಜು ಹೈಬತ್ತಿ ಪ್ರಾಸ್ತಾವಿಕ ಮಾತನಾಡಿದರು. ಶಾಲಾ ಸುಧಾರಣಾ ಸಮಿತಿ ಉಪಾಧ್ಯಕ್ಷ ಬಿ.ಟಿ. ಪೋಳ, ಸದಸ್ಯ ಜಿ.ಜಿ. ಹೆಗಡೆ, ನೂತನ ಕಟ್ಟಡದ ಅಧ್ಯಕ್ಷ ಈಶ್ವರ ಮಾಳಣ್ಣವರ, ಮಾತೃ ಮಂಡಳಿ ಸಂಯೋಜಕಿ ಶಕುಂತಲಾ ಬೀರಣ್ಣವರ, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿದ್ದರು. ವಿದ್ಯಾ ಕಕ್ಕೂರ ನಿರೂಪಿಸಿದರು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಕಲಾವತಿ ಜೀರಿಗಿವಾಡ ಸ್ವಾಗತಿಸಿದರು. ನಂದಾ ಅರೆಬೆಂಚಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳಲ್ಲಿ ಜಾನಪದ ಒಲವು ಹೆಚ್ಚಳ ಆಶಾದಾಯಕ
ಶ್ರದ್ಧಾ-ಭಕ್ತಿಯಿಂದ ಕೃಷ್ಣ ಜನ್ಮಾಷ್ಟಮಿ ಆಚರಣೆ