ಸಂಸ್ಕಾರ, ವಿದ್ಯೆಯಿಂದ ವ್ಯಕ್ತಿತ್ವ ನಿರ್ಮಾಣ

KannadaprabhaNewsNetwork |  
Published : Oct 21, 2025, 01:00 AM IST
ಹುಬ್ಬಳ್ಳಿಯ ಕನಕದಾಸ ಶಿಕ್ಷಣ ಸಮಿತಿಯಲ್ಲಿ ಶನಿವಾರ 2025-26 ನೇ ಸಾಲಿನ ವಾರ್ಷಿಕ ಚಟುವಟಿಕೆಗಳು ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಸಿದ್ದೇಶ್ವರ ಸ್ವಾಮಿಗಳ ತತ್ವಾದರ್ಶವನ್ನು ಯುವ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಕೈ ಕೆಸರಾದಾಗ ಮಾತ್ರ ಬಾಯಿ ಮೊಸರಾಗುತ್ತದೆ ಎಂದರೆ ಆಗಲ್ಲ, ಅದನ್ನು ಪಾಲಿಸಬೇಕು.

ಹುಬ್ಬಳ್ಳಿ:

ತಂದೆ, ತಾಯಿ ಕಲಿಸುವ ಸಂಸ್ಕಾರ, ಗುರು ಹಿರಿಯರು ಕಲಿಸುವ ವಿದ್ಯೆ, ಸಮಾಜ ಕಲಿಸುವ ಬದುಕುವ ಕಲೆ ಉತ್ತಮವಾಗಿಯೇ ಇರುತ್ತವೆ. ಇವನ್ನೆಲ್ಲ ನಾವು ಯಾವ ರೀತಿ ಸ್ವೀಕರಿಸುತ್ತೇವೆ ಎಂಬುದರ ಮೇಲೆ ನಮ್ಮ ವ್ಯಕ್ತಿತ್ವ ರೂಪಗೊಳ್ಳುತ್ತದೆ ಎಂದು ಕೃಷಿ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಮತ್ತು ಬಿಜೆಪಿ ರಾಜ್ಯ ಘಟಕದ ರೈತಮೋರ್ಚಾ ಕಾರ್ಯದರ್ಶಿ ಬಸವರಾಜ ಕುಂದಗೋಳಮಠ ಹೇಳಿದರು.

ನಗರದ ಕನಕದಾಸ ಶಿಕ್ಷಣ ಸಮಿತಿಯ ಡಾ. ಬಿ.ಎಫ್. ದಂಡಿನ ಸಭಾಂಗಹಣದಲ್ಲಿ ಶನಿವಾರ ಹಮ್ಮಿಕೊಳ್ಳಲಾದ 2025-26ನೇ ಸಾಲಿನ ವಾರ್ಷಿಕ ಚಟುವಟಿಕೆಗಳು ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.ಸಿದ್ದೇಶ್ವರ ಸ್ವಾಮಿಗಳ ತತ್ವಾದರ್ಶವನ್ನು ಯುವ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು. ಕೈ ಕೆಸರಾದಾಗ ಮಾತ್ರ ಬಾಯಿ ಮೊಸರಾಗುತ್ತದೆ ಎಂದರೆ ಆಗಲ್ಲ, ಅದನ್ನು ಪಾಲಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ರವೀಂದ್ರನಾಥ ದಂಡಿನ, ಪದವಿಗೆ ಬಂದಮೇಲೆ ಜವಾಬ್ದಾರಿಗಳು ಹೆಚ್ಚಾಗುತ್ತವೆ. ನೀವು ಏನು ಆಗಬೇಕೆಂದಿದ್ದೀರಿ ಅದನ್ನು ಶ್ರಮದಿಂದ ಸಾಧಿಸಿ ತೋರಿಸಬೇಕು. ಮುಂದೆ ಯಾವುದೇ ಕ್ಷೇತ್ರದಲ್ಲಿ ನೀವು ಇದ್ದರೂ ಆ ಕ್ಷೇತ್ರದಲ್ಲಿ ಗಮನವಿಟ್ಟು ಸೇವೆ ಮಾಡಬೇಕು ಎಂದು ಹೇಳಿದರು.

ಕೃಷಿ ವಿವಿಯ ವ್ಯವಸ್ಥಾಪನಾ ಮಂಡಳಿ ಸದಸ್ಯ ಮಾಲತೇಶ ಶ್ಯಾಗೂಟಿ, ಪ್ರಾಚಾರ್ಯ ಡಾ. ಬಸವರಾಜ ಮಡ್ಲಿ, ಮಹದೇವ ಧರೆಣ್ಣನವರ, ಪ್ರಾಚಾರ್ಯ ಶರಣು ಅಣ್ಣಿಗೇರಿ ಸೇರಿದಂತೆ ಹಲವರಿದ್ದರು. ಪ್ರೊ. ಬೀರೇಶ ತಿರಕಪ್ಪನವರ ಸ್ವಾಗತಿಸಿದರು. ಡಾ. ಸವಿತಾ ಸಿದ್ದುನವರ ನಿರೂಪಿಸಿದರು. ಪ್ರೊ. ಗಾಯತ್ರಿ ಹೊಸಮನಿ (ರಾಮನಗೌಡ್ರ) ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌
ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ