ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಕರಿಯಪ್ಪ ಬಡಾವಣೆ ನಿವಾಸಿ ಶಶಿಕುಮಾರ್ ( 40) ಎಂಬಾತ ಗುಂಡಿನ ದಾಳಿಗೆ ಒಳಗಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ತನ್ನ ಮನೆಯ ಬಳಿ ತಡರಾತ್ರಿಯಲ್ಲಿ ಬಂದ ಶಶಿಕುಮಾರ್‌ಗೆ ಡಬಲ್ ಬ್ಯಾರಲ್ ಕೋವಿಯಿಂದ ಗುಂಡು ಹೊಡೆದ ಅನುದೀಪ್ (40) ಸೇರಿದಂತೆ ಆತನನ್ನು ಮನೆಗೆ ಕರೆದುಕೊಂಡು ಹೋಗಿ ಗಲಭೆಗೆ ಪ್ರಚೋದನೆ ನೀಡಿದ್ದ ಆರೋಪಿ ಲವಕುಮಾರ್ ಎಂಬಾತನನ್ನು ಕುಶಾಲನಗರ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.ರಾತ್ರಿ ಒಂದು ಗಂಟೆಗೆ ಆನುದೀಪ್ ಮನೆಗೆ ತನ್ನ ಫಾರ್ಚುನರ್ ಕಾರಿನಲ್ಲಿ ತೆರಳಿ ಗುಂಡು ಹಾರಿಸಿದ್ದು, ಶಶಿಕುಮಾರ್ ಎಡಗಾಲಿಗೆ ಗುಂಡು ತಗುಲಿದ್ದು, ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಸಾಗಿಸಲಾಗಿದೆ. ಕಾರಿನ ಚಾಲಕನ ಸೀಟಿನ ಕಡೆಗೆ ಒಟ್ಟು ಏಳು ಗುಂಡುಗಳು ತಗಲಿದ್ದು ಅದೃಷ್ಟವಶಾತ್ ಶಶಿಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪ್ರಕರಣ ಹಿನ್ನೆಲೆ:
ಅಲ್ಲಿಂದ ಹೊರ ಬಂದು ಕುಶಾಲನಗರ ಮುಖ್ಯ ರಸ್ತೆಯಲ್ಲಿ ಇಬ್ಬರೂ ಮತ್ತೆ ಸಂಘರ್ಷಕ್ಕೆ ಇಳಿದ ವೇಳೆ ಕೊಪ್ಪ ಬಳಿಯ ಹೋಂಸ್ಟೇ ಮಾಲೀಕ ಲವ ಎಂಬಾತ ಅನುದೀಪ್‌ನನ್ನು ಕುಶಾಲ ನಗರ ಕೂಡಿಗೆ ರಸ್ತೆಯಲ್ಲಿರುವ ಚೌಡೇಶ್ವರಿ ಬಡಾವಣೆಯ ಮನೆಗೆ ಬಿಟ್ಟು ಬಂದಿದ್ದಾನೆ.
ಸ್ವಲ್ಪ ದೂರದಿಂದ ಗುಂಡು ಹಾರಿಸಿದ ಕಾರಣ ಗುಂಡುಗಳು ಕಾರಿನ ಚಾಲಕನ ಸೀಟಿನ ಬಳಿಯ ಬಾಗಿಲಿಗೆ ತಾಗಿ ಕಾರಿನೊಳಗೆ ನುಸುಳಿದ್ದು, ಈ ಪೈಕಿ ಒಂದು ಗುಂಡು ಶಶಿಕುಮಾರ್ ಎಡಗಾಲಿಗೆ ತಗಲಿದೆ.
ಸ್ಥಳಕ್ಕೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಕುಶಾಲನಗರ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ, ಕುಶಾಲನಗರ ಪೊಲೀಸ್ ಇನ್‌ಸ್ಪೆಕ್ಟರ್ ಪ್ರಕಾಶ್, ಠಾಣಾಧಿಕಾರಿಗಳಾದ ಚಂದ್ರಶೇಖರ್, ಗೀತಾ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.