ಹೃದಯಾಘಾತದಿಂದ ಪಿಎಚ್‌ಡಿ ವಿದ್ಯಾರ್ಥಿ ಸಾವು

KannadaprabhaNewsNetwork |  
Published : Oct 21, 2023, 12:30 AM IST
ರಾಜಶೇಖರ್ ಬಡಿಗೇರ್ | Kannada Prabha

ಸಾರಾಂಶ

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪಿಎಚ್‌ಡಿ ವಿದ್ಯಾರ್ಥಿ ರಾಜಶೇಖರ್ ಬಡಿಗೇರ್ (30) ಬಸ್‌ನಲ್ಲಿ ಜೇವರ್ಗಿ ಸಮೀಪ ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಅನಾರೋಗ್ಯದ ಹಿನ್ನೆಲೆಯಲ್ಲಿ ಅ.19ರ ರಾತ್ರಿ 10 ಗಂಟೆ ಹೊತ್ತಿಗೆ ಹೊಸಪೇಟೆಯಿಂದ ತನ್ನ ಊರಾದ ಜೇವರ್ಗಿಗೆ ಬಸ್‌ನಲ್ಲಿ ತೆರಳಿದ್ದು, ಬೆಳಗ್ಗೆ ಜೇವರ್ಗಿ ಊರು ಬಂದಾಗ, ಕಂಡಕ್ಟರ್‌ ಎಬ್ಬಿಸಲು ಹೋದಾಗ ಮೃತಪಟ್ಟಿದ್ದರು ಎಂದು ಕನ್ನಡ ವಿವಿ ಮೂಲಗಳು ತಿಳಿಸಿವೆ.

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಪಿಎಚ್‌ಡಿ ವಿದ್ಯಾರ್ಥಿ ರಾಜಶೇಖರ್ ಬಡಿಗೇರ್ (30) ಬಸ್‌ನಲ್ಲಿ ಜೇವರ್ಗಿ ಸಮೀಪ ಶುಕ್ರವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅ.19ರ ರಾತ್ರಿ 10 ಗಂಟೆ ಹೊತ್ತಿಗೆ ಹೊಸಪೇಟೆಯಿಂದ ತನ್ನ ಊರಾದ ಜೇವರ್ಗಿಗೆ ಬಸ್‌ನಲ್ಲಿ ತೆರಳಿದ್ದು, ಬೆಳಗ್ಗೆ ಜೇವರ್ಗಿ ಊರು ಬಂದಾಗ, ಕಂಡಕ್ಟರ್‌ ಎಬ್ಬಿಸಲು ಹೋದಾಗ ಮೃತಪಟ್ಟಿದ್ದರು ಎಂದು ಕನ್ನಡ ವಿವಿ ಮೂಲಗಳು ತಿಳಿಸಿವೆ. ಸಂತಾಪ ಸಭೆ: ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ, ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಆಡಳಿತ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸಂತಾವ ಸೂಚಿಸಿದ್ದಾರೆ.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ