ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಸಮಾರಂಭ ನಿಮಿತ್ತ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಗುರುವಾರ ನಡೆದ ಕಾರಣಿಕ ಯುಗಪುರುಷ ಲಿಂ.ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರ 159ನೆಯ ಜಯಂತ್ಯುತ್ಸವ ಹಾಗೂ ಪುರಾಣ ಪ್ರವಚಣದ ಮಂಗಲ ಸಮಾರಂಭದ ಸಾನಿಧ್ಯ ವಹಿಸಿ ಹಾನಗಲ್ ಶ್ರೀಕುಮಾರ ಶಿವಯೋಗಿಗಳ ಭಾವ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ನಮನ ಸಲ್ಲಿಸಿ ಮಾತನಾಡಿದರು.
ಬಾದಾಮಿ ವಿಶ್ರಾಂತ ಪ್ರಾಚಾರ್ಯ ಜಿ.ಬಿ.ಶೀಲವಂತ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭೆ ಹಾಗೂ ಶ್ರೀ ಶಿವಯೋಗಮಂದಿರ ಸಂಸ್ಥೆ ಕುರಿತು ವಿಶೇಷ ಉಪನ್ಯಾಸ ನೀಡಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮತ್ತು ಶಿವಯೋಗ ಮಂದಿರಗಳು ಹಾನಗಲ್ಲ ಕುಮಾರ ಸ್ವಾಮಿಗಳು ಹಚ್ಚಿದ ಎರಡು ನಂದಾದೀಪಗಳಾಗಿವೆ. ವೀರಶೈವ ಸಮಾಜದ ಸಂಘಟನೆ, ಏಕತೆ ಸಾಮರಸ್ಯಕ್ಕೆ ಕಾರಣಿಭೂತರಾಗಿ ಮಾನವೀಯತೆ ಮತ್ತು ಮಾನವತಾವದಕ್ಕೆ ಹಾನಗಲ್ಲ ಶಿವಯೋಗಿಗಳು ಮಾದರಿಯಾಗಿದ್ದರೆಂದರು.ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಸಮಾಜಿಕ ಕಾರ್ಯಕರ್ತ ಬಸವಪ್ರಭು ಸರನಾಡಗೌಡ ಮಾತನಾಡಿ, ಟೀಕಿನಮಠ ಪರಂಪರೆ ಹಾಗೂ ಸಮಾಜದ ಪ್ರಗತಿಗಾಗಿ ದುಡಿದ ಮಠ ಮಾನ್ಯಗಳ ಬಗ್ಗೆ ವಿವರಿಸಿದರು. ಅಗಡಿ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮಿಗಳು ಪ್ರವಚನ ಮಂಗಲ ನುಡಿಯನ್ನಾಡಿದರು,
ಚರಂತಿಮಠದ ಪ್ರಭುಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅನವಾಲ ಶ್ರದ್ಧಾನಂದ ಆಶ್ರಮದ ಡಾ.ಕೈಲಾಸಪತಿ ಸ್ವಾಮೀಜಿ, ಗುಳೆದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ಸ್ವಾಮೀಜಿ, ಕಿತ್ತೂರು ಸಂಸ್ಥಾನ ರಾಜಗುರು ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ಕೆಂಪಯ್ಯ ಸ್ವಾಮಿಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಹುಕ್ಕೇರಿಯ ಶಿವಬಸವ ಸ್ವಾಮೀಜಿ, ಹಾರನಹಳ್ಳಿ ಚೇತನ ದೇವರು ಸಾನ್ನಿಧ್ಯ ವಹಿಸಿದ್ದರು.ಕಾರ್ಯಕ್ರಮದಲ್ಲಿ ಚರಪಟ್ಟಾಧಿಕಾರ ಸಮಿತಿಯ ಕಾರ್ಯಾದ್ಯಕ್ಷರಾದ ಡಾ.ವೀರಣ್ಣ ಚರಂತಿಮಠ, ಜಿ,ಎನ.ಪಾಟೀಲ,ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಅಶೋಕ ಸಜ್ಜನ ಬೇವೂರ, ಮಹಾಂತೇಶ ಶೆಟ್ಟರ, ಮಲ್ಲಿಕಾರ್ಜುನ ಸಾಸನೂರ, ಚಂದ್ರಶೇಖರ ಶೆಟ್ಟರ, ಎ.ಎಸ್.ಪಾವಟೆ, ಬಸವರಾಜ ಭಗವತಿ, ಬಸವರಾಜ ಮುಕುಪಿ. ಕುಮಾರಸ್ವಾಮಿ ಹಿರೇಮಠ ಚಿತ್ತರಗಿ ಸೇರಿದಂತೆ ಅನೇಕರು ಸಾರ್ವಜನಿಕರು ಭಾಗವಹಿಸಿದ್ದರು.
ವೀರಶೈವರು ತತ್ವಬದ್ಧರಾಗಬೇಕು. ಶಿಕ್ಷಣ ಪಡೆದುಕೊಳ್ಳಬೇಕು, ಉದ್ಯೋಗಶೀಲರಾಗಬೇಕು ಎಂಬ ಉದ್ದೇಶದಿಂದ ಶ್ರೀಮದ್ವೀರಶೈವ ಲಿಂಗಾಯತ ಮಹಾಸಭೆ ಹುಟ್ಟಿಕೊಂಡು ಸಮಾಜದ ಪ್ರಗತಿಯ ಕೆಲಸ ಮಾಡುತ್ತ ಬಂದಿದೆ. ವೀರಶೈವ ಧರ್ಮ ಪ್ರಾಚೀನ ಮತ್ತು ಪುರಾತಣವಾಗಿದ್ದು, ಅದನ್ನು ಹೊತ್ತು ಬಸವಣ್ಣನವರು ಹೊತ್ತು ನಡೆಸುವ ಕೆಲಸ ಮಾಡಿದ್ದಾರೆ. ತ್ತೀಚಿನ ದಿನಗಳಲ್ಲಿ ವೀರಶೈವ ಮತ್ತು ಲಿಂಗಾಯತರ ನಡುವೆ ಗೊಂದಲ ಎಬ್ಬಿಸುತ್ತಿದ್ದು, ಅವೆರಡು ಒಂದೇ ತತ್ವದಡಿ ನಡೆದುಬಂದಿವೆ. ವೀರಶೈವ ಮತ್ತು ಲಿಂಗಾಯತ ಎರಡು ಒಂದೇ.
- ಡಾ.ಅನ್ನದಾನೀಶ್ವರ ಸ್ವಾಮೀಜಿ ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನಮಠ