ಮಹಿಳೆಯರಿಗೆ ಸಮಾನತೆಯ ಹಕ್ಕು ಸಿಗಲು ಫುಲೆ ಕಾರಣ: ಶಾಸಕ ಬಣಕಾರ

KannadaprabhaNewsNetwork |  
Published : Jan 05, 2024, 01:45 AM IST
೦೪ ಎಚ್‌ಕೆಆರ್ ೦೧ | Kannada Prabha

ಸಾರಾಂಶ

ಇಂದಿನ ಶಿಕ್ಷಕಿಯರು ಸಾವಿತ್ರಿ ಬಾಯಿ ಪುಲೆಯವರ ಸಾಧನೆಯನ್ನು ಮಕ್ಕಳಿಗೆ ತಿಳಿಸಿ ಉನ್ನತ ಶಿಕ್ಷಣ ನೀಡುವುದರ ಮೂಲಕ ಹೆಣ್ಣು ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು.

ಕನ್ನಡಪ್ರಭ ವಾರ್ತೆ ಹಿರೇಕೆರೂರು

ಇಂದು ಭಾರತದ ಮಹಿಳೆಯರಿಗೆ ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಸಮಾನತೆಯ ಹಕ್ಕು ಸಿಗುವುದಕ್ಕೆ ಕಾರಣರಾದವರು ಸಾವಿತ್ರಿಬಾಯಿ ಫುಲೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.

ಪಟ್ಟಣದ ಬಿ.ಜಿ. ಬಣಕಾರ ಪ್ರತಿಷ್ಠಾನ ಸೋಶಿಯಲ್ ಟ್ರಸ್ಟ್ ಹಾಗೂ ಯು.ಬಿ. ಬಣಕಾರ ಅಭಿಮಾನಿ ಬಳಗದಿಂದ ಆಚರಿಸಲಾದ ಸಾವಿತ್ರಿ ಬಾಯಿ ಫುಲೆಯವರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರಿಗೆ ಅಂದಿನ ಕಾಲದಲ್ಲಿ ಶೈಕ್ಷಣಿಕ ಅಭಿವೃದ್ದಿಗಾಗಿ ಪೂರಕವಾದ ಪರಿಸರ ನಿರ್ಮಾಣ ಮಾಡುವ ಮೂಲಕ ಮಹಿಳೆಯರಿಗೆ ಸಾಮಾಜಿಕ ಮತ್ತು ಶೈಕ್ಷಣಿಕ ನೆಲಗಟ್ಟನ್ನು ರೂಪಿಸಿಕೊಟ್ಟವರು. ಅವರು ಧಣಿವರಿಯದ ಸಂಶೋಧಕಿಯಾಗಿ ದೇಶದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದ ವೀರ ಮಹಿಳೆ. ಆಧುನಿಕ ಶಿಕ್ಷಣದ ತಾಯಿಯಾಗಿ ಮಹಿಳಾ ಶಿಕ್ಷಣ ಮತ್ತು ಹಕ್ಕುಗಳಿಗಾಗಿ ಹೋರಾಡಿದರು. ಅಂದು ಸಮಾಜದಲ್ಲಿನ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿ ಸಹಗಮನ ಪದ್ದತಿ, ಕೇಶ ಮುಂಡನೆಗಳ ವಿರುದ್ಧ ಹೊರಾಟ ಮಾಡಿ ಮಹಿಳೆಯರಿಗೋಸ್ಕರ ಪ್ರಪ್ರಥಮವಾಗಿ ಶಾಲೆ, ಅಬಲಾಶ್ರಮ ಸ್ಥಾಪನೆ ಮಾಡಿದ ಕೀರ್ತಿಗೆ ಪಾತ್ರರಾಗಿದ್ದರು ಒಟ್ಟು ೧೪ ಶಾಲೆಗಳನ್ನು ಸ್ಥಾಪಿಸುವ ಮೂಲಕ ಮಹಿಳಾ ಸಬಲಿಕರಣಕ್ಕೆ ಚಾಲನೆ ನೀಡಿದ್ದರು. ಇಂದಿನ ಶಿಕ್ಷಕಿಯರು ಸಹ ಸಾವಿತ್ರಿಬಾಯಿ

ಪುಲೆಯವರ ಸಾಧನೆ ಮತ್ತು ಅವರಲ್ಲಿರುವ ಶಿಕ್ಷಣದ ಸಮಾಜಿಕ ಕಾಳಜಿಯನ್ನು ಮಕ್ಕಳಿಗೆ ತಿಳಿಸಿ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವುದರ ಮೂಲಕ ಮಕ್ಕಳನ್ನು ಮುಖ್ಯವಾಹಿನಿಗೆ ತರವಲ್ಲಿ ಶ್ರಮಿಸಬೇಕು. ಅವರ ಸೇವೆ ಈ ದೇಶಕ್ಕೆ ಸ್ಮರಣೀಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ ಮಾತನಾಡಿ, ದೇಶದಲ್ಲಿ ನಾರಿಶಕ್ತಿ ಬೆಳದಿದೆ ಎಂದರೆ ಅದಕ್ಕೆ ಸಾವಿತ್ರಿಬಾಯಿ ಫುಲೆ ಅವರ ಆದರ್ಶ ಮತ್ತು ಅವರ ಪ್ರೇರಣೆ ಕಾರಣ. ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚು ಹೆಚ್ಚು ಸಾಧನೆ ಮಾಡುತ್ತಿದ್ದಾರೆ. ಪುರುಷರ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಅಂದು ಅವರು ಹಾಕಿ ಕೊಟ್ಟ ಶೈಕ್ಷಣಿಕ ಮಾರ್ಗದರ್ಶನ ಕಾರಣ ಎಂದರು.

ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ೬ ಶಿಕ್ಷಕಿಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಎನ್. ಸುರೇಶಕುಮಾರ, ಪಪಂ ಮುಖ್ಯಾಧಿಕಾರಿ ಕೋಡಿ ಭೀಮರಾಯ, ಪಪಂ ಸದಸ್ಯರಾದ ಮಹೇಂದ್ರ ಬಡಳ್ಳಿ, ಸನಾವುಲ್ಲಾ ಮಕಾನ್ದಾರ್, ರಮೇಶ ಕೋಡಿಹಳ್ಳಿ, ವಿಜಯಶ್ರೀ ಬಂಗೇರ, ಕವಿತಾ ಹಾರ್ನಳ್ಳಿ, ಶಂಶದಾ ಕುಪ್ಪೇಲೂರ, ಸಿ.ಬಿ. ನಂದೆಣ್ಣನವರ, ಸಿದ್ದನಗೌಡ ನರೇಗೌಡ್ರ, ವಿನಯ ಪಾಟೀಲ,ಮಂಜುನಾಥ ಕಚವಿ, ಮಂಜುನಾಥ ಕಳ್ಳಿಹಾಳ ಎನ್.ಎಂ. ನಾಸೂರ ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನವಜಾತ ಶಿಶು ಕತ್ತು ಕುಯ್ದುಟಾಯ್ಲೆಟ್‌ಗೆ ಎಸೆದ ತಾಯಿ
ಸಾಲಗಾರರ ಕಾಟ: 17 ನೇಮಹಡಿಯಿಂದ ಹಾರಿ ಆತ್ಮಹತ್ಯೆ