ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂ ಎಸಿ ಅಡಿಯಲ್ಲಿ ಗುರುವಾರ ನಡೆದ ವಿಶೇಷ ಉಪನ್ಯಾಸ ಸರಣಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ಅವರು, ಆತ್ಮವಿಶ್ವಾಸದಿಂದ ಏನಾದರೂ ಸಾಧಿಸಬಹುದು. ಸಾಧನೆಗೆ ಸಾಕಷ್ಟು ಅವಕಾಶಗಳು ಇರುತ್ತವೆ. ಅದರ ಸದುಪಯೋಗಪಡಿಸಿಕೊಂಡಾಗ ಮಾತ್ರ ಸಾಧನೆ ಸಾಧ್ಯ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿಜಯಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ಸಂತೋಷ ಕಬಾಡೆ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ನೆಮ್ಮದಿಯಿಂದ ಬದುಕು ಸಾಧಿಸಬೇಕಾದರೇ ಸಾಕಷ್ಟು ಸ್ವಯಂ ಉದ್ಯೋಗಗಳಿವೆ ಕಡಿಮೆ ಬಂಡವಾಳದಿಂದ ನೆಮ್ಮದಿಯ ಜೀವನ ಕಟ್ಟಿಕೊಳ್ಳಬಹುದು ಎಂದು ತಿಳಿಸಿದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಹಿರಿಯ ಉಪನ್ಯಾಸಕ ಡಾ. ಬಿ.ಎಂ.ಕೊರಬು ಮಾತನಾಡಿ, ಸಂವಿಧಾನದ ಮೌಲ್ಯಗಳ ಕುರಿತು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರೊ.ಪ್ರೇಮಕುಮಾರಿ, ಡಾ.ದ್ರಾಕ್ಷಿಯಣಮ್ಮ, ಡಾ.ಜ್ಯೋತಿ ಹೂಗಾರ, ಬಿ.ಎಸ್.ಬಿರಾದಾರ, ಡಾ.ಎಂ.ಎಸ್.ಶಿವಶರಣ, ಡಾ.ಬಸವರಾಜ ಹೊನಮಟ್ಟಿ, ಎನ್‌ಎಸ್ಎಸ್ ಸಂಯೋಜಕರಾದ ಅಕ್ರಂ ಪಾಷಾ, ಸುನೀತಾ ಪಾಟೀಲ, ಗೋಪಾಲ ಚಕ್ರಸಾಲಿ, ಯಾಸ್ಮಿನ್ ಗಿರಗಾಂವ, ವೈ.ಎ.ಇನಾಮದಾರ, ಪ್ರೊ.ಶಿವಕುಮಾರ ಹಿರೇಮಠ, ಅಬ್ದುಲ್ ಮಳಖೇಡ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿರೂಪಣೆ ಡಾ.ವಿಜಯಲಕ್ಷ್ಮಿ, ಯಾಸ್ಮಿನ್ ನದಾಫ ಸ್ವಾಗತಿಸಿದರು. ಪ್ರೊ.ಶಿವಪುತ್ರ ಜಾಲವಾದಿ ವಂದಿಸಿದರು.