ತಿಪಟೂರು : ಮನುಷ್ಯ ಮಾನಸಿಕವಾಗಿ ಸಧೃಢವಾಗಿರಬೇಕಾದರೆ ದೈಹಿಕ ಆರೋಗ್ಯ ಸಹ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಪಾಲಕರು ಮಕ್ಕಳನ್ನು ಕ್ರೀಡೆಗಳತ್ತ ವಾಲುವಂತೆ ಮಾಡಬೇಕು ಎಂದು ನೊಣವಿನಕೆರೆ ಕಿರಿಯ ಶ್ರೀಗಳಾದ ಅಭಿನವ ಶ್ರೀ ಕಾಡಸಿದ್ದೇಶ್ವರಸ್ವಾಮೀಜಿ ತಿಳಿಸಿದರು.
ಕಲ್ಪತರು ನಾಡು ಕ್ರೀಡೆಗೆ ಉತ್ತೇಜನ ನೀಡುತ್ತಾ ಬಂದಿದೆ. ಹಿಂದಿನಿಂದಲೂ ನಡೆದುಕೊಂಡ ಪರಂಪರೆಯನ್ನು ಲೋಕೇಶ್ವರ್ ಮುಂದುವರೆಸುತ್ತಿದ್ದಾರೆ. ನಮ್ಮ ಊರಿನ ಯುವಕರನ್ನ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಜೊತೆಗೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವೇದಿಕೆ ಕಲ್ಪಿಸುತ್ತಾ, ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ತಿಳಿಸಿದರು.ಕರ್ನಾಟಕ ಖೊಖೊ ಸಂಸ್ಥೆ ಅಧ್ಯಕ್ಷ ಲೋಕೇಶ್ವರ್ ಮಾತನಾಡಿ ಪೋಷಕರು ಮಕ್ಕಳಲ್ಲಿ ಕ್ರೀಡಾಸಕ್ತಿ ಬೆಳೆಸಬೇಕು, ಶಾಲೆಯಿಂದ ಮಕ್ಕಳು ಮನೆಗೆ ಬಂದಾಗ ಪಠ್ಯಪುಸ್ತಕ ಪರಿಶೀಲನೆ ಮಾಡದೆ. ಮಕ್ಕಳ ತಿಂಡಿ ಡಬ್ಬಿ ಪರಿಶೀಲನೆ ಮಾಡಿ. ಅವರು ಹೆಚ್ಚು ದೈಹಿಕವಾಗಿ ಶ್ರಮವಹಿಸಿದ್ದಾಗ ಹಸಿವು, ಬಾಯಾರಿಕೆ ಜಾಸ್ತಿಯಾಗುತ್ತದೆ. ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕಲ್ಪತರು ವಿದ್ಯಾಸಂಸ್ಥೆ ಖಜಾಂಚಿ ಹಾಗೂ ಸ್ಪೋರ್ಟ್‌ಕ್ಲಬ್‌ನ ಶಿವಪ್ರಸಾದ್, ಕೆಪಿಸಿಸಿ ಸದಸ್ಯ ವಿ.ಯೋಗೇಶ್, ಜಗದೀಶ್. ನಗರಸಭೆ ಮಾಜಿ ಉಪಾಧ್ಯಕ್ಷ ಸೊಪ್ಪುಗಣೇಶ್, ತಿಪಟೂರು ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಟಿ.ಎಸ್ ಬಸವರಾಜು, ಕಸಪಾ ಅಧ್ಯಕ್ಷ ಬಸವರಾಜು, ಕಾಂತರಾಜು ಮುಂತಾದವರು ಉಪಸ್ಥಿತರಿದರುಬಾಕ್ಸ್ ೧: ಕ್ರೀಡಾಕೂಟದಲ್ಲಿ ೧೨೦ ಪಂದ್ಯಗಳು ನಡೆದು ಮೂಡಬಿದರೆಯ ಆಳ್ವಾಸ್ ತಂಡ ಪುರುಷ ವಿಭಾಗದಲ್ಲಿ ಪ್ರಥಮಸ್ಥಾನ ಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರೆ ದ್ವಿತೀಯ ಸ್ಥಾನವನ್ನ ಬೆಂಗಳೂರು ಪಯೋನಿಯರ್ ಕ್ಲಬ್ ತಂಡ ಪಡೆದುಕೊಂಡಿತು. ಮಹಿಳೆಯರ ವಿಭಾಗದಲ್ಲಿ ಕುರುಬೂರು ಕಪಿಲಾ ಸ್ಪೋರ್ಟ್ಸ್ ಕ್ಲಬ್ ಪ್ರಥಮಸ್ಥಾನ ಗಳಿಸಿ ಪಡೆದುಕೊಂಡರೆ ದ್ವಿತೀಯ ಸ್ಥಾನವನ್ನ ಬಿಇವೈಎ ಕ್ಲಬ್ ಪಡೆದುಕೊಂಡಿತು. ವಿಜೇತ ತಂಡಗಳಿಗೆ ನೊಣವಿನಕೆರೆ ಕಾಡಸಿದ್ದೇಶ್ವರ ಇತರರು ವಿತರಣೆ ಮಾಡಿದರು.ಪೊಟೋ೨೨-ಟಿಪಿಟಿ೧ ರಲ್ಲಿ ತಿಪಟೂರಿನ ಕಲ್ಪತರು ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ೩೯ನೇ ಖೊಖೊ ಚಾಂಪಿಯನ್‌ಷಿಪ್ ಪಂದ್ಯಾವಳಿಯಲ್ಲಿ ಪುರಷರ ವಿಭಾಗದಲ್ಲಿ ಆಳ್ವಾಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು.