- ಬಿಜೆಪಿ ಸಂಘಟಿಸಿದಲ್ಲಿ ಎಲ್ಲ ಚುನಾವಣೆಗಳಲ್ಲಿ ಅಧಿಕಾರ: ಮಂಡಲ ಅಧ್ಯಕ್ಷ ಮರುಳಾರಾಧ್ಯ
ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನಲ್ಲಿ ಬಿಜೆಪಿ ಸಂಘಟನೆ ಬಲವರ್ಧನೆಗೊಳಿಸಲು ನೂತನ ಯುವ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಪಕ್ಷ ಸಂಘಟನೆಗೆ ಶಕ್ತಿಮೀರಿ ಶ್ರಮಿಸಬೇಕು. ಹೀಗಾದಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲೂ ಬಿಜೆಪಿ ಅಧಿಕಾರ ಚುಕ್ಕಾಣಿ ಹಿಡಿಯಲಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮರುಳಾರಾಧ್ಯ ಹೇಳಿದರು.ಪಟ್ಟಣದ ಪ್ರತಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾಧಿಕಾರಿ ಭೈರಪ್ಪ ಗುಬ್ಬಿ ಸೂಚನೆಯಂತೆ ಮಾಜಿ ಶಾಸಕರಾದ ಎಸ್.ವಿ ರಾಮಚಂದ್ರ, ಎಚ್.ಪಿ ರಾಜೇಶ್, ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಮಾರ್ಗದರ್ಶನದಲ್ಲಿ ಮಂಡಲದ ವಿವಿಧ ಹುದ್ದೆಗಳನ್ನು ನೀಡಲಾಗಿದೆ ಎಂದರು.
ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ಬೈಪಾಸ್ ರಸ್ತೆಯವರೆಗೂ ಕಳೆದೊಂದು ವರ್ಷಗಳಿಂದಲೂ ರಸ್ತೆ ವಿಸ್ತರಣೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ತಾಲೂಕು ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಮಳಿಗೆಗಳು ಮರುಹರಾಜು ಪ್ರಕ್ರಿಯೆ ನಡೆಯಬೇಕಾಗಿತ್ತು. ಆದರೆ ತಾಪಂ ಇಒ ಕೆಂಚಪ್ಪ ಹಳೇ ಬಾಡಿಗೆದಾರರನ್ನು ಮುಂದುವರಿಸಿರುವುದು ಖಂಡನೀಯ. ಮರೇನಹಳ್ಳಿ ರಸ್ತೆಯಲ್ಲಿ ನಿರ್ಮಿಸಲು ಮುಂದಾಗಿರುವುದರಿಂದ ಸಮಸ್ಯೆ ಆಗಬಹುದು. ಅಧಿಕಾರಿಗಳು ಕೂಲಂಕುಶವಾಗಿ ಪರಿಶೀಲಿಸಿ ಒಳ್ಳೆಯ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರು.
ಉಪಾಧ್ಯಕ್ಷರಾದ ಬಿ.ಎಸ್ ಪ್ರಕಾಶ್, ಎಸ್. ಕುಬೇರಪ್ಪ, ಕಾರ್ಯದರ್ಶಿ ಜಿ.ಶಿವಣ್ಣ (ಲ್ಯಾಬ್), ಜೆ.ಎಂ. ರವಿಕುಮಾರ್, ಎಸ್.ವೀರೇಶ್, ಆರ್.ಮಾರುತೇಶ್, ಸತೀಶ್ ನಾಯ್ಕ, ಕೋಶಾಧ್ಯಕ್ಷ ಬಿ.ಎಚ್. ಬಸವರಾಜ್ ಮತ್ತಿತರರು ಇದ್ದರು.
-22ಜೆ.ಜಿ.ಎಲ್.1: