ರಾಮಮೂರ್ತಿ ನವಲಿ
ಮರಳು ವಾಹನಗಳ ಸಂಚಾರದಿಂದ ನವಲಿ-ಕರಡೋಣಿ ರಸ್ತೆ ತಗ್ಗು ದಿಣ್ಣೆಗಳಿಂದ ಕೂಡಿದ್ದು ಸವಾರರು ಪರದಾಡುವಂತೆ ಆಗಿದೆ. ರಸ್ತೆ ಅಭಿವೃದ್ಧಿಗೆ ಟೆಂಡರ್ ಕರೆದು ಆರು ತಿಂಗಳು ಗತಿಸಿದರೂ ಕಾಮಗಾರಿ ಆರಂಭಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ನವಲಿಯಿಂದ 10 ಕಿಲೋ ಮೀಟರ್ ದೂರದಲ್ಲಿರುವ ಕರಡೋಣಿ ಸಂಪರ್ಕಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಈ ರಸ್ತೆಯು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಕ್ಷೇತ್ರವಾಗಿದ್ದರೂ ಅಭಿವೃದ್ಧಿ ಮಾತ್ರ ಗೌನವಾಗಿದೆ. ಈ ಮಾರ್ಗದಲ್ಲಿ ನವಲಿ ತಾಂಡ, ಐತಿಹಾಸಿಕ ಕ್ಷೇತ್ರವಾಗಿರುವ ಭೋಗಾಪುರೇಶ ದೇಗುಲ, ಪುರದ ಕೋಟಿ ಲಿಂಗಗಳನ್ನು ಸಂಪರ್ಕಿಸಲಿದೆ.ಮರಳು ವಾಹನಗಳ ಆರ್ಭಟ:
ಆರಂಭವಾಗದ ರಸ್ತೆ:
ನವಲಿ-ಕರಡೋಣಿ ರಸ್ತೆಯ ಡಾಂಬರೀಕರಣಕ್ಕಾಗಿ ಸರ್ಕಾರದಿಂದ 50-50 ಅನುದಾನದಲ್ಲಿ ₹ 2.70 ಕೋಟಿ ಮೀಸಲಿಟ್ಟು, ಲೋಕೋಪಯೋಗಿ ಇಲಾಖೆಯಿಂದ ಮಾರ್ಚ್ ತಿಂಗಳಲ್ಲಿ ಟೆಂಡರ್ ಕರೆದು ಗುತ್ತಿಗೆದಾರರಿಗೆ ಜವಾಬ್ದಾರಿ ವಹಿಸಿದೆ. ಆದರೆ, 6 ತಿಂಗಳು ಗತಿಸಿದರು ಕಾಮಗಾರಿ ಪ್ರಾರಂಭವಾಗದೆ ವಿಳಂಬಕ್ಕೆ ಕಾರಣವಾಗಿದೆ. ಇನ್ನಾದರು ಈ ಕ್ಷೇತ್ರದ ಜಿಲ್ಲಾ ಉಸ್ತುವಾರಿ ಸಚಿವರು ಈ ಗ್ರಾಮಗಳ ಕಡೆ ಗಮನ ಹರಿಸಿ ರಸ್ತೆ ಅಭಿವೃದ್ಧಿಗೆ ವೇಗ ನೀಡಬೇಕಿದೆ.ನವಲಿ-ಕರಡೋಣಿ ರಸ್ತೆಯ ಡಾಂಬರೀಕರಣಕ್ಕೆ ಮಾರ್ಚ್ ತಿಂಗಳಲ್ಲಿ ಟೆಂಡರ್ ಕರೆದು ಗುತ್ತಿಗೆದಾರರಿಗೆ ಕಾಮಗಾರಿ ವಹಿಸಿದೆ. ಇದಕ್ಕಾಗಿ ₹ 2.70 ಕೋಟಿ ಅನುದಾನ ಮಂಜೂರಿಯಾಗಿದೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುತ್ತದೆ ಗಂಗಾವತಿ ಲೋಕೋಪಯೋಗಿ ಇಲಾಖೆ ಎಇಇ ವಿಶ್ವನಾಥ ಹೇಳಿದರು.