ನಾಟಕಗಳು ಕೇವಲ ಮನೋರಂಜನೆಯಲ್ಲ, ಸಮಾಜದ ಕನ್ನಡಿ

KannadaprabhaNewsNetwork |  
Published : Oct 28, 2026, 02:45 AM IST
ವಿಜಯಪುರ | Kannada Prabha

ಸಾರಾಂಶ

ನಾಟಕಗಳು ಕೇವಲ ಮನೋರಂಜನೆಯಲ್ಲ, ಅವು ಸಮಾಜದ ಕನ್ನಡಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಾಟಕಗಳು ಕೇವಲ ಮನೋರಂಜನೆಯಲ್ಲ, ಅವು ಸಮಾಜದ ಕನ್ನಡಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.

ಹಿಟ್ಟಿನಹಳ್ಳಿ ಶ್ರೀಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಸಿಕ್ಕಿದ ಸೊಸೆ ಅಥಾ೯ತ ತಾಯಿಯ ಕರುಳು ಎಂಬ ನಾಟಕ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮನುಷ್ಯನ ಭಾವನೆಗಳು ಜೀವನದ ಮೌಲ್ಯಗಳು ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಜನರ ಮುಂದೆ ತೆರೆದಿಡುತ್ತವೆ. ರಂಗಾಯಣ, ನೀನಾಸಂ. ಸಾಣೆಹಳ್ಳಿ, ಗುಬ್ಬಿ ವೀರಣ್ಣ, ಚಿತ್ತರಗಿ ಕಂಪನಿ, ಶೇಖ ಮಾಸ್ತರ ಕಂಪನಿಗಳು ಕಳೆದ 5 ದಶಕಗಳಿಂದ ಗುಣಮಟ್ಟದ ನಾಟಕಗಳ ಪ್ರದರ್ಶನ ಮಾಡುತ್ತ ಬಂದಿವೆ. ಗುಣಮಟ್ಟದ ನಾಟಕಗಳಿಗೆ ಪ್ರೇಕ್ಷಕರ ಬೆಂಬಲ ಸಿಗುತ್ತಿದೆ. ನಾಟಕಗಳು ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಬೇಡಿಕೆಗಳಿವೆ ಎಂದರು.

ಸಹಕಾರಿ ಧುರೀಣ ರಾಮನಗೌಡ ಪಾಟೀಲ ಯತ್ನಾಳ ಮಾತನಾಡಿ, ಆಧುನಿಕತೆಯ ಭರಾಟೆಯಲ್ಲಿ ನಾಟಕಗಳ ಪ್ರದರ್ಶನ ವಿರಳವಾಗುತ್ತಿವೆ. ರಂಗಭೂಮಿಯ ನೇರ ಅನುಭವದ ಮ್ಯಾಜಿಕ್ ಇಂದಿಗೂ ಕಡಿಮೆಯಾಗಿಲ್ಲ. ನಾಟಕಗಳು ಸದಾಕಾಲ ತಮ್ಮ ಜನಪ್ರಿಯತೆ ಉಳಿಸಿಕೊಂಡು ಬಂದಿವೆ. ಇವು ಕಥೆಗಳನ್ನು ನೇರವಾಗಿ ಪ್ರೇಕ್ಷಕರ ಮುಂದಿಟ್ಟು ನಟನೆಯ ಶಕ್ತಿಯಿಂದ ಪ್ರೇಕ್ಷಕರನ್ನು ತಕ್ಷಣವೇ ಆಕಷಿ೯ಸುತ್ತವೆ ಎಂದು ತಿಳಿಸಿದರು.ಈರಯ್ಯಸ್ವಾಮಿ ಹಿರೇಮಠ ಮುರಗಯ್ಯ ಮಠಪತಿ ಸಾನ್ನಿಧ್ಯ ವಹಿಸಿದ್ದರು. ಅಶೋಕ ಬಗಲಿ, ಪ್ರವೀಣಕುಮಾರ ನಾಟೀಕಾರ (ಪಾಟೀಲ), ಬಸವರಾಜ ಕಳಸಗೊಂಡ, ನಾರಾಯಣ ಅಂಗಡಗೇರಿ, ಜಗನ್ನಾಥ ಚೌಧರಿ, ಶರಣು ಸಾಲಿ, ಸಾಹೇಬಗೌಡ ಬಿರಾದಾರ, ಸಂತೋಷ ಪಡನಾಡ, ಸಿದ್ದನಗೌಡ ಬಿರಾದಾರ, ಸಂಗನಗೌಡ ಬಿರಾದಾರ, ದುಂಡಪ್ಪ ಬಗಲಿ, ವಿಠ್ಠಲ ಸಾರವಾಡ, ರವಿ ನಾಟೀಕಾರ, ರಾಚು ಬೊಳೆನ್ನವರ, ಮಹೇಶ ಬೆನಕಟ್ಟಿ, ಕಲ್ಲಪ್ಪ ಗಲಗಲಿ, ಪ್ರಕಾಶ ಚಿಕ್ಕಲಕಿ, ಹಣಮಂತ ಒಂಟಿಹಟ್ಟಿ, ಬಾಬು ಗಾಯಕವಾಡ, ಬಂದೇನವಾಜ್‌ ಮುಲ್ಲಾ, ಚಂದ್ರಕಾಂತ ಗಾವಡೆ, ಶರಣು ಉಕ್ಕಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುರುಸ್ಮೃತಿ: 200 ಸಸಿ ನೆಟ್ಟು ಗುರುಗಳಿಗೆ ಗೌರವ ಸಲ್ಲಿಸಿದ 2008ರ ಬ್ಯಾಚ್
ರೈತರ ಶ್ರಮಕ್ಕೆ ಬೆಲೆ ನೀಡದ ಸರ್ಕಾರಗಳು