-ಮಧ್ಯರಾತ್ರಿ ಗ್ರಾಹಕ ಸೇವಾ ಕೇಂದ್ರಕ್ಕೆ ದಿಢೀರ್ ಭೇಟಿ । ಗ್ರಾಹಕರ ದೂರು ಸ್ವೀಕಾರ ವಿಷಯ ಸಮಗ್ರ ಪರಿಶೀಲಿಸಿದ ಅಧ್ಯಕ್ಷ ಹರವಾಳ
ಕನ್ನಡಪ್ರಭ ವಾರ್ತೆ ಕಲಬುರಗಿ
ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿಯ ಮೊದಲ ಅದ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಪ್ರವೀಣ ಹರವಾಳ ಜೆಸ್ಕಾಂ ಇನ್ನೂ ಹೆಚ್ಚು ಗ್ರಾಹಕ ಸ್ವೇಹಿಯಾಗಿಸುವತ್ತ ಒಂದಿಲ್ಲೊಂದು ಕ್ರಮಗಳೊಂದಿಗೆ ಗಮನ ಸೆಳೆಯುತ್ತಿದ್ದಾರೆ.ಮಳೆಗಾಲದ ಈ ದಿನಗಳಲ್ಲಿ ಜೆಸ್ಕಾಂ ಗ್ರಾಹಕರ ದೂರು ಸ್ವೀಕಾರ ಹಾಗೂ ಪರಿಹಾರ ಕಾರ್ಯವೈಖರ ಪರಿಶೀಲಿಸಲು ಖುದ್ದು ಅಧ್ಯಕ್ಷ ಪ್ರವೀಣ ಹರವಾಳ ಕಾರ್ಪೋರೇಟ್ ಕಚೇರಿಯಲ್ಲಿರೋ ಕಂಪನಿಯ ಗ್ರಾಹಕ ದೂರು ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಸಮಗ್ರ ಪರಿಶೀಲನೆ ನಡೆಸಿದರು.
ಜೆಸ್ಕಾಂ ಗ್ರಾಹಕರಿಗೆ ನಿರಂತರ ಮತ್ತು ತೊಂದರೆರಹಿತ ಸೇವೆ ಸಿಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಡರಾತ್ರಿ 1912 ಗ್ರಾಹಕ ಸೇವಾ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಲಾಯಿತು.
ಶೀಘ್ರ ಸಿಬ್ಬಂದಿ ದ್ವಿಗುಣ: ಈ ಭೇಟಿ ಸಂದರ್ಭದಲ್ಲಿ ಗ್ರಾಹಕ ಸೇವಾ ಕೇಂದ್ರದಲ್ಲಿ ಕಂಡು ಬಂದ ಸಿಬ್ಬಂದಿ ಕೊರತೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಗ್ರಾಹಕರ ಕರೆಗಳಿಗೆ ಮತ್ತು ಸಮಸ್ಯೆಗಳಿಗೆ ಮತ್ತಷ್ಟು ವೇಗವಾಗಿ ಸ್ಪಂದಿಸಲು ಮುಂದಿನ ತಿಂಗಳಿನಿಂದ ಸಿಬ್ಬಂದಿ ಸಂಖ್ಯೆಯನ್ನು ದ್ವಿಗುಣಗೊಳಿಸಿ ಹೆಚ್ಚಿಸಲಾಗುತ್ತದೆ, ಅದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ಅಧ್ಯಕ್ಷ ಪ್ರವೀಣ ಹರವಾಳ ಹೇಳಿದ್ದಾರೆ.
....ಬಾಕ್ಸ್...
ಜೆಸ್ಕಾಂ ಕಾರ್ಯವ್ಯಾಪ್ತಿಯ ಎಲ್ಲಾ 16 ಸಬ್ ಡಿವಿಜನ್ ಕಚೇರಿಗಳಲ್ಲಿ ಶೀಘ್ರ ಟ್ರಾನ್ಸಫಾರ್ಮರ್ ಬ್ಯಾಂಕ್ ಸ್ಥಾಪಿಸಲಾಗುತ್ತಿದೆ. ಇದರಿಂದ ಟೀಸಿ ತೊಂದರೆ ಕಂಡಾಕ್ಷಣ ಶೀಘ್ರ ದುರಸ್ತಿ ಅಥವಾ ಹೊಸ ಟೀಸಿ ಜೋಡಣೆಗೆ ಅನುಕೂಲವಾಗಲಿದೆ. ಟೀಸಿ ಬೇಕೆಂದಾಗ ಸಬ್ ಡಿವಿಜನ್ ಮುಖ್ಯಸ್ಥರೇ ತಕ್ಷಣ ಟೀಸಿ ಮಂಜೂರು ಮಾಡುವಂತಾಗಬೇಕು. ವಿನಾಕಾರಣ ವಿಳಂಬ ತಪ್ಪಿಸುವುದೇ ಟೀಸಿ ಬ್ಯಾಂಕ್ ಹಿಂದಿನ ಗುರಿ ಎಂದು ಪ್ರವೀಣ ಹರವಾಳ ಹೇಳಿದ್ದಾರೆ. ಟ್ರಾನ್ಸಫಾರ್ಮರ್ ಕೆಟ್ಟರೆ, ತೊಂದರೆ ಕಂಡಲ್ಲಿ 24 ಗಂಟೆಗಳಲ್ಲಿ ದುರಸ್ತಿ ಅಥವಾ ಹೊಸ ಟೀಸಿ ಜೋಡಣೆಗೆ ಖಡಕ್ ಸೂಚನೆ ನೀಡಲಾಗಿದೆ. ರೈತರು, ಸಾರ್ಜನಿಕರ ಅನಕೂಲವೇ ನಮ್ಮ ಗುರಿ ಎಂದು ಹರವಾಳ ಹೇಳಿದ್ದಾರೆ.
.....ಬಾಕ್ಸ್.....
ನಗರದಲ್ಲಿರುವ ವಸತಿ ಬಡಾವಣೆ ಹಾಗೂ ರಸ್ತೆ ಬೀದಿ ದೀಪಗಳನ್ನೆಲ್ಲ ಕೇಬಲಿಂಗ್ ಜಾಲದಡಿ ತರುವ ಚಿಂತನೆ ಸಾಗಿದೆ. ಅದಕ್ಕಾಗಿ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದೆ. ಅಲ್ಲಲ್ಲಿ ಈ ಕೆಲಸವಾದರೂ ಅದು ನಗರಾದ್ಯಂತ ಸಮಗ್ರವಾಗಿಲ್ಲ. ಇದನ್ನು ಶೀಘ್ರ ಕೈಗೆತ್ತಿಕೊಳ್ಳಲಾಗುತ್ತದೆ. ಬೀದಿ ದೀಪಗಳಿಗೆ ಅಂಡರ್‌ಗ್ರೌಂಡ್ ಕೇಬಲಿಂಗ್, ವಸತಿ ಬಡಾವಣೆಗಳಲ್ಲಿಯೂ ಕೇಬಲ್ ವೈರಿಂಗ್ ಜೆಸ್ಕಾಂ ಗುರಿಯಾಗಿದೆ ಎಂದು ಅಧ್ಯಕ್ಷ ಹರವಾಳ ಹೇಳಿದ್ದಾರೆ.
----------------.....ಕೋಟ್.....
ಸಾರ್ವಜನಿಕರ ಸೇವೆಯಲ್ಲಿ ಜೆಸ್ಕಾಂ ಸದಾ ಜಾಗೃತವಾಗಿರುತ್ತದೆ. ಗ್ರಾಹಕರ ತೃಪ್ತಿಯೇ ನಮ್ಮ ಸಂಸ್ಥೆಯ ಮುಖ್ಯ ಗುರಿ. ಏನೇ ತೊಂದರೆ ಇದ್ದರೂ ಗ್ರಾಹಕರು 1912 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿರಿ, ಗ್ರಾಹಕರಿಗೆ ಸೇವೆ ಕೊಡಲು ನಮ್ಮ ಆದ್ಯತೆಯಾಗಿರಲಿದೆ. ಬರುವ ದಿನಗಳಲ್ಲಿ ಗ್ರಾಹಕರ ಮನೆ ಬಾಗಿಲಿಗೇ ಹೋಗಿ ದೂರು ಆಲಿಸಿ ಪರಿಹಾರ ನೀಡುವ ಯೋಜನೆ ಹಾಕಿಕೊಳ್ಳುವೆ. ಟ್ರಾನ್ಸಫಾರ್ಮರ್ ತೊಂದರೆಯಿಂದ ಕರೆಂಟ್ ಸಿಗದೆ ಯಾರೂ ಬವಣೆ ಪಡಬಾರದು. ಬರುವ ದಿನಗಳಲ್ಲಿ ಜೆಸ್ಕಾಂ ಗ್ರಾಹಕರ ಸ್ನೇಹಿಯಾಗಿಸುವ ಗುರಿ ಇದೆ. ಎಲ್ಲರ ಸಹಕಾರ ಮುಖ್ಯ.- ಪ್ರವೀಣ್ ಪಾಟೀಲ್ ಹರವಾಳ, ಅಧ್ಯಕ್ಷ, ಜೆಸ್ಕಾಂ, ಕಲಬುರಗಿ.
------------ಫೋಟೋ- ಜೆಸ್ಕಾಂ 1912
ಕಲಬುರಗಿಯಲ್ಲಿರುವ ಜೆಸ್ಕಾಂ ಗ್ರಾಹಕ ಸೇವಾ ಕೇಂದ್ರಕ್ಕೆ ಗುರುವಾರ ಮಧ್ಯರಾತ್ರಿ ಅಧ್ಯಕ್ಷ ಪ್ರವೀಣ ಹರವಾಳ ದಿಢೀರ್ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಪರಿಶೀಲಿಸಿದರು.ಫೋಟೋ- ಜೆಸ್ಕಾಂ 19122 ಮತ್ತು 1222
ಕಲಬುರಗಿಯಲ್ಲಿ ಜೆಸ್ಕಾಂ ಗ್ರಾಹಕ ದೂರು ಸ್ವೀಕಾರ ಕೇಂದ್ರ 1912 ಗೆ ಅದ್ಯಕ್ಷ ಪ್ರವೀಣ ಹರವಾಳ ಭೇಟಿಮಾಡಿ ತಾವೇ ಖುದ್ದು ದೂರು- ಪರಿಹಾರ, ದಾಖಲು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.