ತಿಪಟೂರು: ಇಲ್ಲಿಯ ನಗರಸಭೆ ಉತ್ತಮ ಕಾರ್ಯ ನಿರ್ವಹಿಸಿದ್ಧಕ್ಕಾಗಿ ಕೇಂದ್ರ ಮಟ್ಟದ ಪಿಎಂ ಸ್ವನಿಧಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ನಗರಸಭೆಯ ಆಯುಕ್ತರಾದ ವಿಶ್ವೇಶ್ವರ ಬದರಗಡೆ ಪ್ರಶಸ್ತಿ ಸ್ವೀಕರಿಸಿದರು.
ಕೇಂದ್ರ ಸರ್ಕಾರವು ತಿಪಟೂರು ನಗರಸಭೆಯನ್ನು ಬೆಸ್ಟ್ ಫರ್ ಫಾರ್ಮಮಿಂಗ್ ಯು.ಎಲ್.ಬಿ. ಇನ್, ವಿವಿಧ ಸಾಲ ಸೌಲಭ್ಯಗಳ ವಿತರಣೆಯ ಬಗ್ಗೆ ಮಾಹಿತಿ ಪರಿಶೀಲಿಸಿ ಪ್ರಶಸ್ತಿ ನೀಡಿದೆ.